ಫೇಕ್ ಎಐ ವಿಡಿಯೋ; ನಾನು ಎಂದೂ ಹೂಡಿಕೆ ಬಗ್ಗೆ ಮಾತನಾಡಲ್ಲ, ಮೋಸ ಹೋಗಬೇಡಿ ; ಸುಧಾಮೂರ್ತಿ ಸ್ಪಷ್ಟನೆ | MP Sudha Murthy

ರಾಜ್ಯಸಭಾ ಸಂಸದೆ ಸುಧಾಮೂರ್ತಿ
ರಾಜ್ಯಸಭಾ ಸಂಸದೆ ಸುಧಾಮೂರ್ತಿ
Published on
ಬೆಂಗಳೂರು: ಕೃತಕ ಬುದ್ದಿಮತ್ತೆತಯಿಂದ ಸೋಷಿಯಲ್ ಮೀಡಿಯಾದಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು ಜರುಗುತ್ತಿದೆ. ಯಾವುದೂ ನಿಜ, ಯಾವುದೂ ಸುಳ್ಳು ಎನ್ನುವುದೇ ಗೊತ್ತಾಗದ ರೀತಿಯಲ್ಲಿ ಎಐ ವಿಡಿಯೋಗಳು ರಚನೆ ಮಾಡಿ ದುಷ್ಕರ್ಮಿಗಳು ವಂಚನೆಯ ಬಲೆ ಎಣಿಯುತ್ತಿದ್ದಾರೆ.
ಅದೇ ರೀತಿಯಲ್ಲಿ ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತೆ, ಬರಹಗಾರ್ತಿ ಹಾಗೂ ರಾಜ್ಯಸಭಾ ಸಂಸದೆ ಸುಧಾಮೂರ್ತಿಯವರ ಚಿತ್ರವನ್ನು ಬಳಸಿಕೊಂಡು ಟ್ರೇಡಿಂಗ್​ನಲ್ಲಿ ಹಣ ಹೂಡಿಕೆಯ ಬಗ್ಗೆ ಎಐ ವಿಡಿಯೋಗಳನ್ನು ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ
ಈ ಕುರಿತು ವಿಡಿಯೋ ಮಾಡಿ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ ಸ್ಪಷ್ಟೀಕರಣ ನೀಡಿರುವ ಸುಧಾಮೂರ್ತಿ, ನನ್ನ ಚಿತ್ರ ಮತ್ತು ಧ್ವನಿಯನ್ನು ಬಳಸಿಕೊಂಡು ಹಣಕಾಸು ಯೋಜನೆಗಳು ಮತ್ತು ಹೂಡಿಕೆಗಳನ್ನು ಪ್ರಚಾರ ಮಾಡುವ ನಕಲಿ ವೀಡಿಯೊಗಳು ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿವೆ. 20 ಸಾವಿರ ಹೂಡಿಕೆ ಮಾಡಿದ್ರೆ ಅದರ 10 ಪಟ್ಟು ಲಾಭ ಬರುತ್ತೆ ಎನ್ನುವ ವಿಡಿಯೋಗಳೆಲ್ಲವೈ ಗೊತ್ತಿಲ್ಲದ, ನನ್ನ ಒಪ್ಪಿಗೆಯಿಲ್ಲದೇ ರಚಿಸಿರುವ ಎಐ ವಿಡಿಯೋಗಳಾಗಿವೆ.
ಇಂತಹ ಮೋಸದ ವಿಡಿಯೋಗಳನ್ನು ನೋಡಿ ಯಾವುದೇ ಹಣಕಾಸು ಹೂಡಿಕೆ ಮಾಡುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಾನು ಹೂಡಿಕೆಗೆ ಸಂಬಂಧಿಸಿದಂತೆ ನಾನು ಎಂದಿಗೂ ಮಾತನಾಡಲ್ಲ. ಜನರು ಇಂತಹ ವಿಡಿಯೋಗಳಿಂದ ಜಾಗರೂಕರಾಗಿರಿ ಎಂದು ಹೇಳಿದ್ದಾರೆ.
ಸುಧಾ ಮೂರ್ತಿಯವರು ಒಬ್ಬ ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ. ಅವರು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿಯವರ ಪತ್ನಿ. ಹಲವು ಪುಸ್ತಕಗಳನ್ನು ಬರೆದಿದ್ದು, ಸಾಮಾಜಿಕ ಸಮಸ್ಯೆ, ಶಿಕ್ಷಣ, ಸಂಸ್ಕೃತಿಗಳ ಕುರಿತು ಮಾತನಾಡುತ್ತಾರೆ. ಕಳೆದ ಕೆಲವು ವರ್ಷಗಳ ಹಿಂದೆ ಅವರನ್ನು ಕೇಂದ್ರ ಸರ್ಕಾರ ರಾಜ್ಯಸಭೆಗೆ ಆಯ್ಕೆ ಮಾಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net