ಈ ವೇಳೆ ಇಶಾ, ಪತಿ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದು, ಬಳಿಕ ಪತಿ ಅವಳನ್ನು ಸಾಮಾಧನ ಮಾಡಿದ್ದಾನೆ. ಈ ವೇಳೆ ಸಾಮಾಧಾನವಾಗಿರುವಂತೆ ನಟಿಸಿದ ಪತ್ನಿ, ತಕ್ಷಣ ತನ್ನ ಬಾಯಿಯ ಹಲ್ಲಿನಿಂದ ಪತಿಯ ನಾಲಿಗೆಯನ್ನು ಕಚ್ಚಿ ತುಂಡು ಮಾಡಿದ್ದಾಳೆ. ತೀವ್ರಗಾಯಗೊಂಡು ಪತಿ ನೋವಿನಿಂದ ಕಿರುಚಿಕೊಂಡು, ಕೆಳಗಡೆ ಇರುವ ತಂದೆ-ತಾಯಿ ಬಳಿ ಓಡಿ ಬಂದಿದ್ದಾನೆ. ತಕ್ಷಣ ತಂದೆ-ತಾಯಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ತಕ್ಷಣ ನೆರೆಹೊರೆಯವರು ಬಂದು ಇಶಾಳನ್ನು ಹೊಡೆದು ಪೊಲೀಸರಿಗೊಪ್ಪಿಸಿದ್ದಾರೆ. ಕುಟುಂಬಸ್ಥರ ಮುಂದೆ ತಾನೇ ನಾಲಿಗೆ ಕತ್ತಿರಿಸಿದ್ದಾಗೆ ಒಪ್ಪಿಕೊಂಡಿದ್ದಾಳೆ.