ವಿಮಾನ ಪ್ರಯಾಣಿಕರ ಶೋಷಣೆ

ವಿಮಾನ ಪ್ರಯಾಣಿಕರ ಶೋಷಣೆ
ವಿಮಾನ ಪ್ರಯಾಣಿಕರ ಶೋಷಣೆ
Published on
ನವದೆಹಲಿ: ಹಬ್ಬಗಳ ಸಮಯದಲ್ಲಿ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರವನ್ನು ಅತಿಯಾಗಿ ಏರಿಸುವುದಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿಮಾನ ಪ್ರಯಾಣ ದರಗಳ ‘ಏರುಪೇರು’ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಾಗಿ ಎಚ್ಚರಿಸಿದೆ. ಏರ್​ಲೈನ್​ಗಳು ಪ್ರಯಾಣ ದರವನ್ನು ಸಿಕ್ಕಾಪಟ್ಟೆ ಏರಿಸುವುದು ‘ಶೋಷಣೆಯಾಗಿದೆ’ ಎಂದು ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಸಂದೀಪ್ ಮೆಹ್ತಾ ಪೀಠ ಅಭಿಪ್ರಾಯಪಟ್ಟಿತು. ಪ್ರಯಾಣ ದರ ಹಾಗೂ ಇತರ ವೆಚ್ಚಗಳಲ್ಲಿ ವಿಪರೀತ ಏರಿಕೆ ಮಾಡುವುದನ್ನು ನಿಯಂತ್ರಿಸಲು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಉತ್ತರ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ನಾಗರಿಕ ವಿಮಾನ ಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ಪೀಠ ನಿರ್ದೇಶಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net