ನಿನ್ನೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಫಲಿತಾಂಶ ಏನಾಗಬಹುದೆಂಬ ಎಕ್ಸಿಟ್ ಪೋಲ್ ಬಿಡುಗಡೆಯಾಗುವುದು ಸಹಜ. ಆದರೆ ಬಹುತೇಕ ಎಕ್ಸಿಟ್ ಪೋಲ್ಗಳು ಈ ಭಾರಿ ಬಿಜೆಪಿಗೆ ಬಹುಮತ ಬರುತ್ತದೆ ಎಂದು ಹೇಳಿರುವುದು ದೀದಿ ಕೋಪಕ್ಕೆ ಕಾರಣವಾಗಿದ್ದು, ಈ ಎಕ್ಸಿಟ್ ಪೋಲ್ಗಳು ನಿಖರವಾದ ಫಲಿತಾಂಶದ ಮಾಹಿತಿಯನ್ನು ನೀಡಿಲ್ಲ. ಅವು ಬಿಜೆಪಿ ಕಚೇರಿಯ ರೀತಿ ಕೆಲಸಮಾಡಿವೆ, ಮೇ. 4 ರಂದು ಜನಾಭಿಪ್ರಾಯ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.