ನಡುರಸ್ತೆಯಲ್ಲೇ ಹೆರಿಗೆ: ವೈದ್ಯರ ಸಮಯ ಪ್ರಜ್ಞೆಗೆ ನೆಟ್ಟಿಗರ ಸಲಾಂ! ವಿಡಿಯೋ ವೈರಲ್​.. Viral Video

ಬೀದಿಯಲ್ಲೇ ಹೆರಿಗೆ ಮಾಡಿಸಿದ ವೈದ್ಯರು
ಬೀದಿಯಲ್ಲೇ ಹೆರಿಗೆ ಮಾಡಿಸಿದ ವೈದ್ಯರು
Published on

ಪ್ರಮುಖ ಮುಖ್ಯಾಂಶಗಳು

  • ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ ನೋವು
  • ಬೀದಿಯಲ್ಲೇ ಹೆರಿಗೆ ಮಾಡಿಸಿದ ವೈದ್ಯರು
  • ನೆಟ್ಟಿಗರಿಂದ ಅಪಾರ ಮೆಚ್ಚುಗೆ
ವೈರಲ್​: ಜೀವನದಲ್ಲಿ ಕೆಲವೊಮ್ಮೆ, ಯಾವುದೇ ಸಿದ್ಧತೆ, ಯಾವುದೇ ತಯಾರಿ ಅಥವಾ ಮುನ್ನೆಚ್ಚರಿಕೆ ಇಲ್ಲದೆ ಕೆಲಸ ಮಾಡಬೇಕಾದ ಸನ್ನಿವೇಶಗಳು ಎದುರಾಗುತ್ತವೆ. ಇತ್ತೀಚೆಗೆ, ಇದೇ ರೀತಿಯ ಸನ್ನಿವೇಶದ ವಿಡಿಯೋವೊಂದು ಸೋಷಿಯಲ್​ ಮೀಡಿಯಾ (Viral Video) ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಗರ್ಭಿಣಿಯೊಬ್ಬಳಿಗೆ ಮಾರ್ಗ ಮಧ್ಯದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ನಡುರಸ್ತೆಯಲ್ಲಿಯೇ ಮಹಿಳಾ ವೈದ್ಯರು ತೋರಿದ ಸಾಹಸ ಈಗ ಎಲ್ಲೆಡೆ ವೈರಲ್​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ ಗರ್ಭಿಣಿ ಮಹಿಳೆಯೊಬ್ಬಳು ಆಸ್ಪತ್ರೆ ತಲುಪುವ ಮೊದಲೇ ಬೀದಿಯಲ್ಲಿ ತೀವ್ರ ಹೆರಿಗೆ ನೋವು ಅನುಭವಿಸಿ ಪ್ರಜ್ಞಾಹೀನ ಸ್ಥಿತಿಗೆ ತಲುಪುವಂತಾಗುತ್ತಾಳೆ. ಆದರೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಮಹಿಳಾ ವೈದ್ಯರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ನಡುರಸ್ತೆಯಲ್ಲೇ ಹೆರಿಗೆ ಮಾಡಿಸಿದ್ದಾರೆ.

ದುಪ್ಪಟ್ಟಾದಿಂದ ಆಪರೇಷನ್​ ಥಿಯೇಟರ್​ ನಿರ್ಮಾಣ!

ಈ ಘಟನೆಯನ್ನು ನೋಡುತ್ತಿದ್ದ ಸಾರ್ವಜನಿಕರು ವೈದ್ಯರ ಸಹಾಯಕ್ಕೆ ಧಾವಿಸಿ ಬಂದು ತಮ್ಮ, ಸೀರೆ, ದುಪ್ಪಟ್ಟಾ ಹಾಗೂ ಮಹಿಳೆಯರೇ ಸುತ್ತುವರಿದು ನಿಂತು ಕೃತಕ ಆಪರೇಷನ್​ ಥಿಯೇಟರ್​ನ್ನು ನಿರ್ಮಿಸಿದ್ದಾರೆ. ನಂತರ ಆಪರೇಷನ್​ ಮಾಡಲು ವೈದ್ಯರು ಮುಂದಾಗಿದ್ದು, ಕೆಲ ಸಮಯದ ನಂತರ ಮಗುವನ್ನು ಕೈಯಲ್ಲಿ ಹಿಡಿದು ವೈದ್ಯಾಧಿಕಾರಿಗಳು ಆಚೆ ಬಂದಿದ್ದಾರೆ. ಪ್ರಸ್ತುತ ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಫುಲ್​ ವೈರಲ್​ ಆಗುತ್ತಿದ್ದು, ಜನರ ಮನಸ್ಸನ್ನು ಗೆದ್ದಿದ್ದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರಿಂದ ಮೆಚ್ಚುಗೆಯ ಕಮೆಂಟ್​ಗಳು ಹರಿದುಬಂದಿವೆ. ಇಂತಹ ವೈದ್ಯರಿರುವ ಕಾರಣದಿಂದಲೇ ನಮ್ಮಲ್ಲಿ ಮಳೆ-ಬೆಳೆ ಸರಿಯಾಗಿ ಆಗುತ್ತಿದೆ ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. ಆ ವೈದ್ಯರ ಸಮಯ ಪ್ರಜ್ಞೆಗೆ ನನ್ನದೊಂದು ಸಲಾಂ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದರೆ, ಆ ವೈದ್ಯರಿಗೆ ಸಹಕರಿಸಿದ ಸಾರ್ವಜನಿಕರಿಗೂ ವಂದನೆ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net