ಪಶ್ಚಿಮ ಏಷ್ಯಾದಿಂದಲೇ ಭಾರತ ಹೆಚ್ಚಿನ ಹೆಚ್ಚಿನ ಪ್ರಮಾಣದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹಾರ್ಮುಜ್ ಜಲಸಂಧಿಯೇ ಕಚ್ಚಾ ತೈಲದ ಪ್ರಮುಖ ಮಾರ್ಗವಾಗಿದೆ. ಕತಾರ್, ಯುಎಇ ಹಾಗೂ ಇರಾನ್ನಿಂದ ಎಲ್ಎನ್ಜಿ, ಎಲ್ಪಿಜಿ ಹಾಗೂ ದ್ರವೀಕೃತ ಪೆಟ್ರೋಲಿಯಂ ಅನಿಲದ ಆಮದಿನ ಶೇ. 40ರಿಂದ 50ರಷ್ಟು, ಅಂದರೆ ಪ್ರತಿದಿನ 2.2ರಿಂದ 2.8 ಮಿಲಿಯನ್ ಬ್ಯಾರಲ್ಗಳನ್ನು ಈ ಮೂಲಕ ಭಾರತಕ್ಕೆ ಪೂರೈಕೆಯಾಗುತ್ತದೆ. ಸದ್ಯ ಸರ್ಕಾರ ತಕ್ಷಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿದೆ (ಏಜೆನ್ಸೀಸ್).