ಪಕ್ಷದ ಬೆನ್ನೆಲುಬಾಗಿರುವ ಬೂತ್ ಕಾರ್ಯಕರ್ತರು, ಬ್ಲಾಕ್ ಅಧ್ಯಕ್ಷರು, ಜಿಲ್ಲಾ ಮಟ್ಟದ ನಾಯಕರು ತಮ್ಮನ್ನು ಕಾಣವವರು ಮತ್ತು ಕೇಳದವರು ಯಾರು ಎಂದು ವ್ಯಥೆ ಪಡುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಬಲವಾಗಿ ನಿಂತ ಅನೇಕ ನಿಸ್ವಾರ್ಥ ಕಾರ್ಯಕರ್ತರಿಗೆ ಇಂದು ದಿಕ್ಕಿಲ್ಲದಂತಾಗಿದೆ. ಅವರ ಕಾರ್ಯಗಳಿಗೆ ಮನ್ನಣೆ ಸಿಗುತ್ತಿಲ್ಲ ಎಂದು ಭಾವಿಸುತ್ತಿದ್ದಾರೆ ಎಂದು ಬರೆದಿದ್ದಾರೆ. ಇತ್ತೀಚಿನ ಬಿಹಾರ, ದೆಹಲಿ, ಹರಿಯಾಣ, ಮಹಾರಾಷ್ಟ್ರ ಮತ್ತು ಕಾಶ್ಮೀರದ ಚುನಾವಣಾ ಸೋಲುಗಳನ್ನು ಉಲ್ಲೇಖಿಸಿದ ಮೋಕಿಮ್, ಇವೆಲ್ಲಾ ಕೇವಲ ಚುನಾವಣಾ ಹಿನ್ನಡೆಗಳಲ್ಲ, ಆಳವಾದ ಸಾಂಸ್ಥಿಕ ಸಂಪರ್ಕ ಕಡಿತವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ತಪ್ಪು ನಿರ್ಧಾರಗಳ ಸರಣಿ, ದಾರಿ ತಪ್ಪಿದ ನಾಯಕತ್ವದ ಆಯ್ಕೆಗಳು ಪಕ್ಷವನ್ನು ಒಳಗಿನಿಂದ ದುರ್ಬಲಗೊಳಿಸಿದೆ.