ಬಂಧನ ಕೇಂದ್ರಗಳ ಕುರಿತಾದ ಗೊಂದಲಗಳಿಗೆ ತೆರೆ ಎಳೆದ ಹಿಮಂತ ಬಿಸ್ವಾ ಶರ್ಮಾ, ಟಿಎಂಸಿ ನಾಯಕರು ಅಸ್ಸಾಂನ ಬಂಧನ ಕೇಂದ್ರಗಳಲ್ಲಿ ಬಂಗಾಳಿ ಹಿಂದೂಗಳಿದ್ದಾರೆ ಎಂದು ಪದೇಪದೆ ಸುಳ್ಳು ಹಬ್ಬಿಸುತ್ತಿದ್ದಾರೆ. ಅಸ್ಸಾಂನ ಮುಖ್ಯಮಂತ್ರಿಯಾಗಿ ನಾನು ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ, ಅಲ್ಲಿ ಒಬ್ಬನೇ ಒಬ್ಬ ಬಂಗಾಳಿ ಹಿಂದೂ ಇಲ್ಲ. ಒಂದು ವೇಳೆ ಯಾರಾದರೂ ಒಬ್ಬನೇ ಒಬ್ಬ ಹಿಂದೂ ವ್ಯಕ್ತಿ ಇರುವುದನ್ನು ಸಾಬೀತುಪಡಿಸಿದರೆ, ನಾನು ಈ ಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಗುಡುಗಿದ್ದಾರೆ.