ಯುಪಿಐ ಮೂಲಕವೇ ಪಿಎಫ್​ ಹಣ ವಿತ್​ಡ್ರಾ ಮಾಡಬಹುದು... ಶೀಘ್ರದಲ್ಲೇ ಬರಲಿದೆ ಹೊಸ ಆ್ಯಪ್​! EPFO

ಯುಪಿಐ ಮೂಲಕವೇ ಪಿಎಫ್​ ಹಣ ವಿತ್​ಡ್ರಾ ಮಾಡಬಹುದು ( EPFO )
ಯುಪಿಐ ಮೂಲಕವೇ ಪಿಎಫ್​ ಹಣ ವಿತ್​ಡ್ರಾ ಮಾಡಬಹುದು ( EPFO )
Published on

ಪ್ರಮುಖ ಮುಖ್ಯಾಂಶಗಳು

  • ಒಂದು ಕಾಲದಲ್ಲಿ ಭವಿಷ್ಯ ನಿಧಿ (PF) ಹಣವನ್ನು ಹಿಂಪಡೆಯುವುದು ಉದ್ಯೋಗಿಗಳಿಗೆ ದೊಡ್ಡ ತಲೆನೋವಾಗಿತ್ತು
  • ಫಾರ್ಮ್‌ಗಳನ್ನು ಭರ್ತಿ ಮಾಡಿ ಇಪಿಎಫ್​ಒ ​​ಕಚೇರಿಗಳನ್ನು ಅಲೆದಾಡಿದರೂ ಸಕಾಲಕ್ಕೆ ಹಣ ಬರುತ್ತಿರಲಿಲ್ಲ
  • ಕೆಲವೊಮ್ಮೆ ಹಣ ಬರುವುದಕ್ಕೆ ಒಂದು ತಿಂಗಳ ಸಮಯ ಕೂಡ ಹಿಡಿಯುತ್ತಿತ್ತು
  • ಇದೀಗ ಯುಪಿಐ ಮೂಲಕವೇ ಹಣ ವಿತ್​ಡ್ರಾ ಮಾಡುವ ವಿಧಾನವನ್ನು ಜಾರಿಗೆ ತರಲು ಇಪಿಎಫ್​ಒ ಮುಂದಾಗಿದೆ
EPFO : ಒಂದು ಕಾಲದಲ್ಲಿ ಭವಿಷ್ಯ ನಿಧಿ (PF) ಹಣವನ್ನು ಹಿಂಪಡೆಯುವುದು ಉದ್ಯೋಗಿಗಳಿಗೆ ದೊಡ್ಡ ತಲೆನೋವಾಗಿತ್ತು. ಫಾರ್ಮ್‌ಗಳನ್ನು ಭರ್ತಿ ಮಾಡುವುದು, ಇಪಿಎಫ್​ಒ ​​ಕಚೇರಿಗಳನ್ನು ಅಲೆದಾಡುವುದು, ಕಡತಗಳ ಪರಿಶೀಲನೆಗಳು ಮತ್ತು ವಾರಗಳವರೆಗೆ ನಮ್ಮ ಹಣಕ್ಕಾಗಿ ಕಾಯಬೇಕಾಗಿತ್ತು. ಕೆಲವೊಮ್ಮೆ ಹಣ ಬರುವುದಕ್ಕೆ ಒಂದು ತಿಂಗಳ ಸಮಯ ಕೂಡ ಹಿಡಿಯುತ್ತಿತ್ತು. ಆದರೆ, ಪರಿಸ್ಥಿತಿ ಈಗ ಬದಲಾಗಿದೆ.
ಕಾಲಕ್ರಮೇಣ, ಇಪಿಎಫ್‌ಒ ಭವಿಷ್ಯ ನಿಧಿ ಹಿಂಪಡೆಯುವಿಕೆ ನಿಯಮಗಳಲ್ಲಿ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡುತ್ತಾ ಬರುತ್ತಿದೆ. ಪ್ರಸ್ತುತ ಹಣ ವಿತ್​ಡ್ರಾ ಪ್ರಕ್ರಿಯೆಯನ್ನು ಡಿಜಿಟಲ್ ರೂಪದಲ್ಲಿ ತ್ವರಿತಗೊಳಿಸಲಾಗುತ್ತಿದೆ. ಎಷ್ಟರ ಮಟ್ಟಿಗೆ ಅಂದರೆ, ಪ್ರಸ್ತುತ ಒಂದು ವಾರವೂ ಕಾಯಬೇಕಾಗಿಲ್ಲ, ಕೇವಲ ಮೂರ್ನಾಲ್ಕು ದಿನಗಳಲ್ಲಿ ಹಣ ನಿಮ್ಮ ಖಾತೆಗೆ ಜಮಾ ಆಗಿಬಿಡುತ್ತದೆ. ಆದರೆ, ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಇಪಿಎಫ್​ಒ, ಯುಪಿಐ ಮೂಲಕವೇ ಹಣ ವಿತ್​ಡ್ರಾ ಮಾಡುವ ವಿಧಾನವನ್ನು ಜಾರಿಗೆ ತರಲು ಮುಂದಾಗಿದೆ. 
ಹೌದು, ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO), ತನ್ನ EPFO ​​3.0 ಕಾರ್ಯಕ್ರಮದ ಭಾಗವಾಗಿ ಏಪ್ರಿಲ್ ವೇಳೆಗೆ ಮೀಸಲಾದ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಸಜ್ಜಾಗಿದೆ. ಈ ಅಪ್ಲಿಕೇಶನ್ ಮೂಲಕ, ನೌಕರರು UPI ಬಳಸಿಕೊಂಡು ತಮ್ಮ ಭವಿಷ್ಯ ನಿಧಿ ಹಣವನ್ನು ತಕ್ಷಣವೇ ಹಿಂಪಡೆಯಲು ಸಾಧ್ಯವಾಗುತ್ತದೆ. ಇದು ಜಾರಿಗೆ ಬಂದಲ್ಲಿ, EPFO ​​ಸೇವೆಗಳು ಬ್ಯಾಂಕುಗಳು ನೀಡುವ ಸೇವೆ ಮತ್ತು ವೇಗಕ್ಕೆ ಸಮನಾಗಲಿದೆ.
ಈ ಹಿಂದೆ, ಭವಿಷ್ಯ ನಿಧಿಯಿಂದ ಹಣ ಹಿಂಪಡೆಯಲು ಇಪಿಎಫ್‌ಒ ಕಚೇರಿಗೆ ಹೋಗಿ ಅರ್ಜಿಗಳನ್ನು ಸಲ್ಲಿಸಬೇಕಿತ್ತು. ದಾಖಲೆಗಳಲ್ಲಿನ ಸಣ್ಣದೊಂದು ತಪ್ಪು ಕೂಡ ಪಾವತಿಗಳನ್ನು ಅನಿರ್ದಿಷ್ಟವಾಗಿ ವಿಳಂಬಗೊಳಿಸುತ್ತಿತ್ತು. ನಿವೃತ್ತರು ಮತ್ತು ಉದ್ಯೋಗ ಬದಲಾಯಿಸಿದವರು ತುರ್ತು ಸಂದರ್ಭಗಳಲ್ಲಿ ಹಣವನ್ನು ಹಿಂಪಡೆಯಲು ದೀರ್ಘಕಾಲ ಕಾಯಬೇಕಾಗುತ್ತಿತ್ತು. ಆದರೆ, ಆ ಸಮಸ್ಯೆ ಈಗ ದೂರವಾಗಿದೆ.
ಇಪಿಎಫ್‌ಒ ಕ್ರಮೇಣ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಯುಎಎನ್, ಆನ್‌ಲೈನ್ ಕ್ಲೈಮ್‌ಗಳು ಮತ್ತು ನಂತರ ಉಮಾಂಗ್ ಅಪ್ಲಿಕೇಶನ್‌ನ ಪರಿಚಯದೊಂದಿಗೆ, ಅರ್ಜಿ ಪ್ರಕ್ರಿಯೆಯು ಕಡಿಮೆಯಾಗಿದೆ. ಆದಾಗ್ಯೂ, ವೇಗದ ಆಟೋ ಸೆಟಲ್‌ಮೆಂಟ್ ವ್ಯವಸ್ಥೆ ಇನ್ನು ಜಾರಿಗೆ ಬಂದಿರಲಿಲ್ಲ. ಪ್ರಸ್ತುತ ವ್ಯವಸ್ಥೆಯಲ್ಲಿ ತಮ್ಮ ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವವರೆಗೆ ಕಾಯಬೇಕಾಯಿತು. ಆದರೆ, ಮುಂಬರುವ ಯುಪಿಐ ಆಧಾರಿತ ಅಪ್ಲಿಕೇಶನ್ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ.

ಹೊಸ EPFO ​​ಅಪ್ಲಿಕೇಶನ್‌ನಲ್ಲಿ ತರಲಾಗುವ ಬದಲಾವಣೆಗಳು ಏನು?

ಹೊಸ ಇಪಿಎಫ್‌ಒ ಅಪ್ಲಿಕೇಶನ್ ಉಮಾಂಗ್ ಅಪ್ಲಿಕೇಶನ್‌ಗಿಂತ ಭಿನ್ನವಾಗಿರುತ್ತದೆ. ಇದು ಸಂಪೂರ್ಣವಾಗಿ ಭವಿಷ್ಯ ನಿಧಿ ಸೇವೆಗಳ ಮೇಲೆ ಕೇಂದ್ರೀಕರಿಸುತ್ತದೆ. ಅಪ್ಲಿಕೇಶನ್ ಪ್ರಾರಂಭವಾದ ನಂತರ ಸದಸ್ಯರು ಈ ಕೆಳಗಿನ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.
* ಹಿಂಪಡೆಯುವಿಕೆಗೆ ಅರ್ಹವಾದ PF ಮೊತ್ತವನ್ನು ನೀವು ಸುಲಭವಾಗಿ ಪರಿಶೀಲಿಸಬಹುದು.

* UPI ಮೂಲಕ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾಯಿಸಬಹುದು.

* UPI ಪಿನ್ ಮೂಲಕ ವಹಿವಾಟು ದೃಢೀಕರಣ ಲಭ್ಯವಿರಲಿದೆ.

* ಪಾಸ್‌ಬುಕ್ ಸಂಗ್ರಹಣೆ ಮತ್ತು ಖಾತೆ ವಿವರಗಳು ಒಂದೇ ಸ್ಥಳದಲ್ಲಿ ಲಭ್ಯವಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net