ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ 1 ಲಕ್ಷ ರೂ. ನಗದು ಬೋನಸ್ ನೀಡಿದ ಉದ್ಯಮಿ: ವಿಡಿಯೋ ವೈರಲ್ | Diwali bonus

ದೀಪಾವಳಿ ಹಬ್ಬದ ಸಮಯದಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಿವಿಧ ಉಡುಗೊರೆಗಳು ಮತ್ತು ಸಿಹಿತಿಂಡಿಗಳನ್ನು ನೀಡುವುದು ಸಾಮಾನ್ಯ. ಆದರೆ ಗುಜರಾತ್‌ ರಾಜ್ಯದ ಸೂರತ್‌ನ ಜವಳಿ ವ್ಯಾಪಾರಿಯೊಬ್ಬರು ತಮ್ಮ ಸಿಬ್ಬಂದಿಗಳಿಗೆ 1 ಲಕ್ಷ ರೂ.ಗಿಂತ ಹೆಚ್ಚಿನ ನಗದು ಬೋನಸ್ ನೀಡಿದ್ದಾರೆ. ಮತ್ತು ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ 1 ಲಕ್ಷ ರೂ. ನಗದು ಬೋನಸ್ ನೀಡಿದ ಉದ್ಯಮಿ: ವಿಡಿಯೋ ವೈರಲ್ | Diwali bonus
Published on: 

ಅಹ್ಮದಾಬಾದ್: ದೀಪಾವಳಿ ಹಬ್ಬದ ಸಮಯದಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಿವಿಧ ಉಡುಗೊರೆಗಳು ಮತ್ತು ಸಿಹಿತಿಂಡಿಗಳನ್ನು ನೀಡುವುದು ಸಾಮಾನ್ಯ. ಆದರೆ ಗುಜರಾತ್‌ ರಾಜ್ಯದ ಸೂರತ್‌ನ ಜವಳಿ ವ್ಯಾಪಾರಿಯೊಬ್ಬರು ತಮ್ಮ ಸಿಬ್ಬಂದಿಗಳಿಗೆ 1 ಲಕ್ಷ ರೂ.ಗಿಂತ ಹೆಚ್ಚಿನ ನಗದು ಬೋನಸ್ ನೀಡಿದ್ದಾರೆ. ಮತ್ತು ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ರಾಮ್ ಸ್ವರೂಪ್ ಮುಂಡೆ ಎಂಬ ಜವಳಿ ವ್ಯಾಪಾರಿ ತಮ್ಮ 20 ಉದ್ಯೋಗಿಗಳಿಗೆ ತಲಾ 1 ಲಕ್ಷ ರೂ.ಗಿಂತ ಹೆಚ್ಚಿನ ಹೊಸ ಕರೆನ್ಸಿ ನೋಟುಗಳನ್ನು ನೀಡಿದ್ದಾರೆ. 10 ರಿಂದ 500 ರೂ.ಗಳವರೆಗಿನ ವಿವಿಧ ನೋಟುಗಳ ಬಂಡಲ್‌ಗಳನ್ನು ಬೆಳ್ಳಿ ತಟ್ಟೆಯಲ್ಲಿ ಹಾಕಿ ನೌಕರರಿಗೆ ಉಡುಗೊರೆಯಾಗಿ ತಮ್ಮ ಪತ್ನಿಯ ಕೈಯಿಂದ ಕೊಡಿಸಿದ್ದಾರೆ.

ಈ ದೊಡ್ಡ ಮೊತ್ತದ ಅನಿರೀಕ್ಷಿತ ಉಡುಗೊರೆಯನ್ನು ನೋಡಿದ ಮಹಿಳಾ ಉದ್ಯೋಗಿಗಳು, ಭಾವುಕರಾಗಿ ಕಣ್ಣೀರಾಕಿದ್ದಾರೆ. ಈ ಅಪರೂಪದ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಉದ್ಯಮಿಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Also Read
ಕಾಡಿನಿಂದ ಬಂದೂಕಿನ ನಕ್ಸಲರನ್ನು ನಿರ್ಮೂಲನೆ ಮಾಡಿದ್ರೂ, ದಿಮಾಗಿ ನಕ್ಸಲರು ನಮ್ಮ ನಡುವೆ ಅಡಗಿದ್ದಾರೆ: ಪ್ರಧಾನಿ ಮೋದಿ | PM Modi
ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ 1 ಲಕ್ಷ ರೂ. ನಗದು ಬೋನಸ್ ನೀಡಿದ ಉದ್ಯಮಿ: ವಿಡಿಯೋ ವೈರಲ್ | Diwali bonus

ಇನ್ನೂ ವೈರಲ್ ವಿಡಿಯೋ ಮತ್ತು ತಾವು ನೀಡಿದ ಬೋನಸ್ ಉಡುಗೊರೆ ಬಗ್ಗೆ ಮಾತನಾಡಿರುವ ರಾಮ್ ಸ್ವರೂಪ್ ಮುಂಡೆ, ತಮ್ಮ ಬಾಲ್ಯದಲ್ಲಿ ಸಾಕಷ್ಟು ಬಡತನವನ್ನು ಅನುಭವಿಸಿದ್ದೆ ಮತ್ತು ಹಬ್ಬಗಳ ಸಮಯದಲ್ಲಿ ಕುಟುಂಬಗಳು ಎದುರಿಸುವ ಆರ್ಥಿಕ ತೊಂದರೆಗಳ ಬಗ್ಗೆ ನನಗೆ ತಿಳಿದಿದೆ. ತಮ್ಮ ಬಳಿ ಕೆಲಸ ಮಾಡುವ ಜನರು ಕೇವಲ ಉದ್ಯೋಗಿಗಳಲ್ಲ, ಬದಲಾಗಿ ತಮ್ಮ ಕುಟುಂಬದ ಸದಸ್ಯರಂತೆ ಎಂದು ಹೇಳಿದ್ದಾರೆ.

ತಮ್ಮ ವ್ಯವಹಾರವನ್ನು ಬೆಳೆಸಲು ವರ್ಷವಿಡೀ ಶ್ರಮಿಸಿದ ಸಿಬ್ಬಂದಿಗೆ ಕೃತಜ್ಞತೆಯ ಸಂಕೇತವಾಗಿ ಈ ಬೋನಸ್ ನೀಡಿರುವುದಾಗಿ ಹೇಳಿದ್ದಾರೆ. ಮತ್ತು ಪ್ರತಿಯೊಂದು ಕುಟುಂಬವೂ ಯಾವುದೇ ಆರ್ಥಿಕ ತೊಂದರೆಗಳಿಲ್ಲದೆ ದೀಪಾವಳಿಯನ್ನು ಸಂತೋಷದಿಂದ ಆಚರಿಸಬೇಕೆಂದು ಖಚಿತಪಡಿಸಿಕೊಳ್ಳುವುದು ತಮ್ಮ ಉದ್ದೇಶವಾಗಿದೆ ಎಂದಿದ್ದಾರೆ (ಏಜೆನ್ಸೀಸ್).