ಕ್ಷೇತ್ರದ ದೇವಿಪುರ ಸೇರಿದಂತೆ ಹಲವು ಭಾಗಗಳಲ್ಲಿ ಇವಿಎಂ ಯಂತ್ರಗಳನ್ನು ತಿರುಚಿದ ಆರೋಪಗಳು ಕೇಳಿಬಂದಿದ್ದು, ವಿಶೇಷವಾಗಿ ಬಿಜೆಪಿ ಬಟನ್ಗಳಿಗೆ ಟೇಪ್ ಹಚ್ಚುವ ಮೂಲಕ ಮತದಾರರನ್ನು ತಡೆಯಲಾಗಿತ್ತು ಎಂಬ ಗಂಭೀರ ದೂರನ್ನು ಅಭ್ಯರ್ಥಿಗಳು ನೀಡಿದ್ದರು. ಇದರ ಬೆನ್ನಲ್ಲೇ ಫಾಲ್ಟಾದಲ್ಲಿ ಭಾರಿ ಪ್ರತಿಭಟನೆಗಳು ವ್ಯಕ್ತವಾಗಿದ್ದು, ಸ್ಥಳೀಯರು ಬೆದರಿಕೆ ಕರೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇಡೀ ವಿಧಾನಸಭಾ ಕ್ಷೇತ್ರಕ್ಕೇ ಮರುಚುನಾವಣೆ ಘೋಷಿಸಿರುವುದು ಅಪರೂಪದ ಕ್ರಮವಾಗಿದ್ದು, ಅಹಿತಕರ ಘಟನೆಗಳನ್ನು ತಡೆಯಲು ಮತ್ತು ಪಾರದರ್ಶಕತೆ ಕಾಪಾಡಲು ಆಯೋಗವು ಹೆಚ್ಚುವರಿ ಪೊಲೀಸ್ ವೀಕ್ಷಕರು ಮತ್ತು ಎಣಿಕೆ ವೀಕ್ಷಕರನ್ನು ನಿಯೋಜಿಸಿದೆ.