ಅಂದಹಾಗೆ, ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿದೆ ಎಂಬ ಚರ್ಚೆಯು ಇತ್ತೀಚಿನ ಒಂದು ವೈರಲ್ ಲ್ಯಾಬ್ ರಿಪೋರ್ಟ್‌ನಿಂದ ಹುಟ್ಟಿಕೊಂಡಿದೆ. ಟ್ರಸ್ಟಿಫೈಡ್ ನೆಟ್‌ವರ್ಕ್ ಎಂಬ ಸಂಸ್ಥೆಯು ಎಗ್ಗೋಜ್ ನ್ಯೂಟ್ರಿಷನ್ ಬ್ರ್ಯಾಂಡ್‌ನ ಮೊಟ್ಟೆಗಳನ್ನು ಪರೀಕ್ಷಿಸಿ, ಅದರಲ್ಲಿ ನಿಷೇಧಿತ ಆ್ಯಂಟಿಬಯೋಟಿಕ್‌ಗಳಾದ ನೈಟ್ರೋಫ್ಯೂರಾನ್ ಮತ್ತು ನೈಟ್ರೋಇಮಿಡಾಜೋಲ್ ಅಂಶಗಳು ಕಂಡುಬಂದಿವೆ. ಇವು ಕ್ಯಾನ್ಸರ್ಕಾರಕಗಳು ಎಂದು ಯೂಟ್ಯೂಬ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿತು. ಈ ವಿಡಿಯೋ ವೈರಲ್ ಆಗಿ, "ಮೊಟ್ಟೆಯಿಂದ ಕ್ಯಾನ್ಸರ್ ಬರುತ್ತದೆ" ಚರ್ಚೆ ಹುಟ್ಟಿಕೊಂಡಿತು. ಇದು ಕರ್ನಾಟಕದ ವಿಧಾನಸಭೆಯಲ್ಲೂ ಪ್ರಸ್ತಾಪವಾಗಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು "ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿಲ್ಲ, ತಿನ್ನಲು ಸುರಕ್ಷಿತ" ಎಂದು ಸ್ಪಷ್ಟಪಡಿಸಿದರು. ಇದರ ನಡುವೆ ಎಗ್ಗೋಜ್ ಕಂಪನಿಯು ತಮ್ಮ ಮೊಟ್ಟೆಗಳು ಆ್ಯಂಟಿಬಯೋಟಿಕ್-ಮುಕ್ತ ಎಂದು ಹೇಳಿ, ಹೊಸ ಪರೀಕ್ಷೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿದೆ, (ಏಜೆನ್ಸೀಸ್).