ನೀವು ಓಕೆ ಎನ್ನದಿದ್ದರೆ ನಿಮ್ಮ ವೃತ್ತಿ ಜೀವನವೇ ಓವರ್: ಮಿಲ್ಕಿ ಬ್ಯೂಟಿ ತಮನ್ನಾ ಬೋಲ್ಡ್​ ಸ್ಟೇಟ್​ಮೆಂಟ್​! Tamannaah Bhatia ​

ನಟಿ ತಮನ್ನಾ ಭಾಟಿಯಾ
ನಟಿ ತಮನ್ನಾ ಭಾಟಿಯಾ
Published on

ಪ್ರಮುಖ ಮುಖ್ಯಾಂಶಗಳು

  • ಸಿನಿರಂಗದಲ್ಲಿ 20 ವರ್ಷ ಪೂರೈಸಿರುವ ಮಿಲ್ಕಿ ಬ್ಯೂಟಿ ತಮನ್ನಾ ಇಂದಿಗೂ ಸ್ಟಾರ್​ ನಟಿಯರಲ್ಲಿ ಒಬ್ಬರು
  • ತಮ್ಮ ವೃತ್ತಿಜೀವನದ ಆರಂಭದಲ್ಲಿ ತಮನ್ನಾ ಡಿಗ್ಲಾಮರಸ್​ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು
  • ಲಿಪ್​ಲಾಕ್​ ದೃಶ್ಯಗಳಿಗೆ ನೋ ಅಂತಿದ್ದ ತಮನ್ನಾ ನಂತರದಲ್ಲಿ ಎಲ್ಲ ನಿಯಮಗಳಿಗೂ ಬ್ರೇಕ್​ ಹಾಕಿದರು
  • ಗ್ಲಾಮರಸ್​ ಪಾತ್ರಗಳಿಗೆ ಓಕೆ ಎನ್ನದಿದ್ದರೆ ನಟಿಯರ ಕೆರಿಯರ್​ ಅಲ್ಲಿಯೇ ಕೊನೆಯಾಗುತ್ತದೆ ಎಂದ ತಮನ್ನಾ
ಮುಂಬೈ : ಚಿತ್ರರಂಗದಲ್ಲಿ ನಾಯಕಿಯರ ವೃತ್ತಿಜೀವನ ಬಹಳ ಅಲ್ಪಕಾಲಿಕ ಎಂಬುದು ಸಾರ್ವಕಾಲಿಕ ಸತ್ಯ. ಅದರಲ್ಲೂ ನಟಿಯರು ಮದುವೆಯಾದರೆ ಸಾಕು ಅವರ ಸಿನಿ ಪ್ರಯಾಣ ಅಲ್ಲಿಗೆ ಮುಗಿದಂತೆ. ಆದರೆ, ಕೆಲವೇ ಕೆಲವು ನಟಿಯರು ಮಾತ್ರ ಸುದೀರ್ಘ ವೃತ್ತಿಜೀವನದ ಅನುಭವ ಪಡೆಯುತ್ತಾರೆ. ಆ ಸಾಲಿಗೆ ನಟಿ ತಮನ್ನಾ ಭಾಟಿಯಾ ( Tamannaah Bhatia ​) ಕೂಡ ಸೇರಿಕೊಳ್ಳುತ್ತಾರೆ.
ಸಿನಿಮಾ ರಂಗದಲ್ಲಿ ಬರೋಬ್ಬರಿ 20 ವರ್ಷ ಪೂರೈಸಿರುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ಇಂದಿಗೂ ಸ್ಟಾರ್​ ನಟಿಯರಲ್ಲಿ ಒಬ್ಬರೆನೆಸಿಕೊಂಡಿದ್ದಾರೆ. ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿರುವ ತಮನ್ನಾ, ಹಿಂದಿ, ತೆಲುಗು, ತಮಿಳು ಮತ್ತು ಇತರ ಭಾಷೆಗಳಲ್ಲಿ ಅನೇಕ ಚಿತ್ರಗಳನ್ನು ಮಾಡಿದ್ದು, ಬಹುಭಾಷಾ ನಾಯಕಿ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಚಿತ್ರದಲ್ಲಿ ನಟನೆ ಮಾಡದಿದ್ದರೂ ನಿಖಿಲ್​ ಕುಮಾರಸ್ವಾಮಿ ನಟನೆಯ ಮೊದಲ ಸಿನಿಮಾ ಜಾಗ್ವಾರ್​ ಮತ್ತು ಯಶ್​ ನಟನೆಯ ಕೆಜಿಎಫ್​ 1 ಸಿನಿಮಾದಲ್ಲಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ಅಂದಹಾಗೆ, ಮಿಲ್ಕಿ ಬ್ಯೂಟಿ ತಮನ್ನಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ತುಂಬಾ ಕ್ರಮಬದ್ಧ ಮತ್ತು ಹೋಮ್ಲಿ ಪಾತ್ರಗಳಿಗೆ ಮಾತ್ರ ಸೀಮಿತವಾಗಿದ್ದರು. ಹೆಚ್ಚಾಗಿ ಡಿಗ್ಲಾಮರಸ್​ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಒಂದು ಹಂತದಲ್ಲಿ ತಮ್ಮ ತಂತ್ರವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡರು. ವಿಶೇಷವಾಗಿ '100% ಲವ್' ಚಿತ್ರದೊಂದಿಗೆ, ತಮನ್ನಾ ಅವರು ತಮ್ಮ ಗ್ಲಾಮರ್ ಪ್ರಮಾಣಕ್ಕೆ ಬೂಸ್ಟ್​ ನೀಡಿದರು ಮತ್ತು ಮಾಸ್ ಪ್ರೇಕ್ಷಕರ ನೆಚ್ಚಿನ ನಟಿಯಾದರು. ಈ ಚಿತ್ರದಲ್ಲಿ ತಮನ್ನಾ ಅವರು ತೋರಿಸಿದ ಗ್ಲಾಮರ್, ಇದ್ದಕ್ಕಿದ್ದಂತೆ ಅವರ ವೃತ್ತಿಜೀವನದ ಗ್ರಾಫ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿತು.
ಸುಕುಮಾರ್ ನಿರ್ದೇಶನದ 100% ಲವ್' ಚಿತ್ರದ ಬಳಿಕ ಸಾಲು ಸಾಲು ಸಿನಿಮಾ ಆಫರ್​ ತಮನ್ನಾರನ್ನು ಹುಡುಕಿ ಬಂದವು. ಬದರಿನಾಥ್, ರಚ್ಚ ಮತ್ತು ಕ್ಯಾಮೆರಾಮನ್ ಗಂಗಾಥೊ ರಾಂಬಾಬು ಸೇರಿದಂತೆ ಮುಂತಾದ ಮಾಸ್ ಚಿತ್ರಗಳಲ್ಲಿ ಸ್ಟಾರ್ ಹೀರೋಗಳ ಜೊತೆಗೆ ಸರಣಿ ಅವಕಾಶಗಳು ತಮನ್ನಾಗೆ ಸಿಕ್ಕವು. ಆರಂಭದಲ್ಲಿ ಲಿಪ್​ಲಾಕ್​ ದೃಶ್ಯಗಳಿಗೆ ನೋ ಅಂತಿದ್ದ ತಮನ್ನಾ, ನಂತರದಲ್ಲಿ ಆ ನಿಯಮಗಳಿಗೂ ಬ್ರೇಕ್​ ಹಾಕಿ, ಸಂಪೂರ್ಣ ಬದಲಾದರು.
ಓರ್ವ ನಟಿಯಾಗಿ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳಲು ಕಥೆಗೆ ಅಗತ್ಯವಿದ್ದರೆ ಲಿಪ್ ಲಾಕ್ ದೃಶ್ಯಗಳು ಅಥವಾ ಇಂಟಿಮೇಟ್​ ದೃಶ್ಯಗಳಲ್ಲಿ ನಟಿಸಲು ಓಕೆ ಅಂತ ಈ ಹಿಂದಿನ ಸಂದರ್ಶನಗಳಲ್ಲಿ ಸ್ವತಃ ತಮನ್ನಾ ಅವರೇ ಹೇಳಿಕೊಂಡಿದ್ದಾರೆ. ಅಲ್ಲೆ, ಇದೇ ನನ್ನ ಯಶಸ್ಸಿನ ರಹಸ್ಯ ಅಂತಾನೂ ತಿಳಿಸಿದ್ದಾರೆ. ಗ್ಲಾಮರಸ್​ ಪಾತ್ರಗಳಿಗೆ ಓಕೆ ಎನ್ನದಿದ್ದರೆ ನಟಿಯರ ಕೆರಿಯರ್​ ಅಲ್ಲಿಯೇ ಕೊನೆಯಾಗುತ್ತದೆ ಎಂದು ತಮನ್ನಾ ಈ ಹಿಂದೆ ಹೇಳಿಕೊಂಡಿದ್ದಾರೆ.
ಅಂದಹಾಗೆ, ತಮನ್ನಾ ಅವರು ವೃತ್ತಿಜೀನದ ಆರಂಭದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಹಾಕಿಕೊಂಡಿದ್ದರು. ಆದರೆ, ಈ ಗ್ಲಾಮರ್ ಪ್ರಪಂಚದಲ್ಲಿನ ತೀವ್ರ ಸ್ಪರ್ಧೆಯಲ್ಲಿ ಬದುಕುಳಿಯಬೇಕೆಂದರೆ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂಬುದನ್ನು ತಮನ್ನಾ ಕಾಲ ಕಳೆದಂತೆ ಅರಿತುಕೊಂಡರು. ಹೀಗಾಗಿ ಗ್ಲಾಮರಸ್​ ಆಗಿ ಬದಲಾದರು. ಕಾಲಕ್ಕೆ ತಕ್ಕಂತೆ ಬದಲಾಗದೇ ಇದ್ದಿದ್ದರೆ ನಾನಿಂದು ಈ ಮಟ್ಟದಲ್ಲಿ ಇರುತ್ತಿರಲಿಲ್ಲ ಎಂಬುದು ನಟಿ ತಮನ್ನಾ ಅವರ ಮಾತು.
ತಮನ್ನಾ ಅವರು ಕೇವಲ ಬೆಳ್ಳಿ ಪರದೆಗೆ ಮಾತ್ರ ಸೀಮಿತವಾಗಿಲ್ಲ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ (OTT) ತಮನ್ನಾ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. 'ಲಸ್ಟ್ ಸ್ಟೋರೀಸ್ 2' ನಂತಹ ವೆಬ್ ಸರಣಿಯಲ್ಲಿ ತಮ್ಮ ದಿಟ್ಟ ಅಭಿನಯದ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ವೆಬ್​ ಸರಣಿಯಲ್ಲಿ ಎಂದೂ ಕಾಣಿಸಿಕೊಳ್ಳದಷ್ಟು ಬೋಲ್ಡ್​ ಆಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಹಬ್ಬೇರಿಸಿದರು.
ತಮನ್ನಾ ಅವರು ಪ್ರಸ್ತುತ, ನಾಯಕಿಯಾಗಿ ಮಾತ್ರವಲ್ಲದೆ, ಸ್ಟಾರ್​ ನಟರ ಸಿನಿಮಾಗಳಲ್ಲಿ ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕುತ್ತಿರುತ್ತಾರೆ. ತಮನ್ನಾ ಅವರು ಯಾವುದೇ ಪಾತ್ರ ಅಥವಾ ಹಾಡಿಗೆ ತಮ್ಮದೇಯಾದ ಗ್ಲಾಮರಸ್​ ಸ್ಟೈಲ್​ನಿಂದ ಜೀವ ತುಂಬಬಲ್ಲರು. ಆದ್ದರಿಂದ, ಅವರ ಕ್ರೇಜ್ ಇಂದಿಗೂ ಕಡಿಮೆಯಾಗಿಲ್ಲ. ತನ್ನನ್ನು ತಾನು ಕಾಲಕ್ಕೆ ತಕ್ಕಂತೆ ಬದಲಾಯಸಿಕೊಂಡು ಮುನ್ನಡೆಯುತ್ತಿರುವ ತಮನ್ನಾ, ಹೊಸ ನಾಯಕಿಯರಿಗೆ ಮಾರ್ಗದರ್ಶಿಯಾಗಿ ನಿಂತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net