ಇದಕ್ಕೂ ಮುನ್ನ ಜುಲೈ 20 ರಂದು ಸಿಜೆಪಿ ನಿಯೋಗವು ಕೇಂದ್ರ ಸಚಿವ ಜೆ ಪಿ ನಡ್ಡಾರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಸಭೆಯ ನಂತರ ಮಾತನಾಡಿದ್ದ ನಡ್ಡಾ, ಚರ್ಚೆಗಳು ಸೌಹಾರ್ದಯುತವಾಗಿ ನಡೆದಿದ್ದು, ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದು ಯಥಾಸ್ಥಿತಿ ಮರಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದ್ದರು. ಶಿಕ್ಷಣ ಸಚಿವರ ರಾಜೀನಾಮೆ, ಸಂತ್ರಸ್ತರಿಗೆ ಸೂಕ್ತ ಪರಿಹಾರ ಮತ್ತು ಸಮಗ್ರ ಪರೀಕ್ಷಾ ಸುಧಾರಣೆಗಾಗಿ ಸಿಜೆಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಹೋರಾಟ ನಿರಂತರವಾಗಿ ಮುಂದುವರಿದಿದ್ದು, ಇಂದು ರಾತ್ರಿ 8 ಗಂಟೆಗೆ ಶಿಕ್ಷಣ ಸಚಿವಾಲಯ ಕೈಗೊಳ್ಳುವ ನಿರ್ಧಾರ ತೀವ್ರ ಕುತೂಹಲ ಮೂಡಿಸಿದೆ(ಏಜೆನ್ಸೀಸ್).