ಡಿಜಿಟಲ್ ಲೋಕದಲ್ಲಿ ನಡೆಯುತ್ತಿರುವ ವಂಚನೆಗಳು ಕೇವಲ ಹಣ ದೋಚುವುದಕ್ಕೆ ಸೀಮಿತವಾಗಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ‘ಇಂಪರ್ಸನೇಷನ್’ ಪ್ರಕರಣಗಳು ಶೇ. 200ರಷ್ಟು ಹೆಚ್ಚಾಗಿವೆ. ಕೇವಲ ಒಂದು ಫೋಟೋ ಅಥವಾ ವಿಡಿಯೊವನ್ನು ಕೃತಕ ಬುದ್ಧಿಮತ್ತೆಯ (ಎಐ) ಸಹಾಯದಿಂದ ತಿರುಚಿ, ಮಹಿಳೆಯರನ್ನು ಬ್ಲ್ಯಾಕ್ವೆುೕಲ್ ಮಾಡುವ ‘ಡೀಪ್ಫೇಕ್’ ತಂತ್ರಜ್ಞಾನ ಇಂದು ಹೊಸ ಮಾದರಿಯ ಸೈಬರ್ ಭಯೋತ್ಪಾದನೆಯಾಗಿ ಬೆಳೆಯುತ್ತಿದೆ. ಇದರೊಂದಿಗೆ, ಆನ್ಲೈನ್ ಡೇಟಿಂಗ್ ಆಪ್ಗಳ ಮೂಲಕ ಸ್ನೇಹ ಬೆಳೆಸಿ, ಭಾವನಾತ್ಮಕವಾಗಿ ವಂಚಿಸಿ ಹಣ ಪಡೆಯುವ ‘ರೊಮಾನ್ಸ್ ಸ್ಕ್ಯಾಮ್ಗಳು ಹಾಗೂ ಕೆಲಸದ ಆಮಿಷವೊಡ್ಡಿ ಹಣ ವಸೂಲಿ ಮಾಡುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ.