ಸಂಪಾದಕೀಯ: ದೇಶದಲ್ಲಿ ಸೂಕ್ತ ಪ್ರಮಾಣದಲ್ಲಿ ಇಂಧನ ದಾಸ್ತಾನು ಇದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ, ಹಲವೆಡೆ ವದಂತಿಗಳನ್ನು ಹರಡಿ ಅನವಶ್ಯಕ ಆತಂಕ ಸೃಷ್ಟಿಸಲಾಗುತ್ತಿರುವುದು ಖಂಡನೀಯ. ಇಂಥ ವದಂತಿಗಳ ಪರಿಣಾಮದಿಂದ ಬುಧವಾರ ತೆಲಂಗಾಣದಲ್ಲಿ ಗೊಂದಲದ ಸ್ಥಿತಿ ನಿರ್ವಣವಾಗಿದ್ದು, ಜನರು ಪೆಟ್ರೋಲ್, ಡೀಸೆಲ್ ಖರೀದಿಗೆ ಪೆಟ್ರೋಲ್ ಬಂಕ್ಗಳಿಗೆ ಮುಗಿಬಿದ್ದದ್ದು ಮಾತ್ರವಲ್ಲ, ಪಾತ್ರೆ ಹಾಗೂ ಕುಕ್ಕರ್ಗಳಲ್ಲಿ ಸಂಗ್ರಹಿಸಿಕೊಂಡು ಹೋದ ವಿಲಕ್ಷಣ ಘಟನೆ ನಡೆದಿದೆ.