ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸೂಕ್ತವಾದ ತನಿಖೆ ವಿಳಂಬವಿಲ್ಲದೆ ನಡೆಯಬೇಕು ಮತ್ತು ಇಂಥ ತನಿಖೆಯ ವೇಳೆ ಪ್ರತಿಷ್ಠೆ ಮುಖ್ಯವಾಗದೆ ಕೇಂದ್ರದ ತನಿಖಾ ಏಜೆನ್ಸಿಗಳು ಮತ್ತು ರಾಜ್ಯ ಪೊಲೀಸರು ಸಮನ್ವಯ ಕಾಯ್ದುಕೊಳ್ಳಬೇಕು. ಎಷ್ಟೋ ಪ್ರಕರಣಗಳಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಆರೋಪಿತರ ಮೇಲೆ ದಾಳಿ ನಡೆದ ಬಳಿಕ ಮುಂದೇನಾಯಿತು, ಅಕ್ರಮ ಸಂಪತ್ತು ವಶಪಡಿಸಿಕೊಳ್ಳಲಾಯಿತೆ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಯಿತೆ ಎಂಬ ಮಾಹಿತಿ ಜನಸಾಮಾನ್ಯರಿಗೆ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ತನಿಖೆಯನ್ನು ಪರಿಣಾಮಕಾರಿ ಹಾಗೂ ಪಾರದರ್ಶಕವಾಗಿ ನಡೆಸಿ, ಭ್ರಷ್ಟ ವ್ಯವಸ್ಥೆಯನ್ನು ಶುದ್ಧೀಕರಿಸುವುದು ಅತ್ಯ. ಈ ವಿಷಯದಲ್ಲಿ ರಾಜ್ಯ ಪೊಲೀಸರಿಗೆ ಈಗ ಹೆಚ್ಚ ಬಲ ಸಿಕ್ಕಂತಾಗಿದೆ.