ರಷ್ಯಾ, ಯುಎಇ ಸೇರಿದಂತೆ ಹಲವು ದೇಶಗಳೊಂದಿಗೆ ಡಾಲರ್ ಬದಲಿಗೆ ನೇರವಾಗಿ ರೂಪಾಯಿ-ರೂಬಲ್ ಅಥವಾ ರೂಪಾಯಿ-ದಿರ್ಹಾಮ್ ಮೂಲಕ ವ್ಯಾಪಾರ ವಹಿವಾಟು ನಡೆಸುವ ಒಪ್ಪಂದಗಳನ್ನು ಇನ್ನಷ್ಟು ವಿಸ್ತರಿಸಬೇಕು. ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ತೈಲ ದರ ಏರುತ್ತಿರುವುದರಿಂದ, ರಷ್ಯಾ ಅಥವಾ ಇತರ ಪರ್ಯಾಯ ದೇಶಗಳಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುವುದನ್ನು ಮುಂದುವರಿಸಿದರೆ, ತೈಲ ಬಿಕ್ಕಟ್ಟಿಗೆ ತಾರ್ಕಿಕ ಅಂತ್ಯ ಕಂಡುಕೊಳ್ಳಬಹುದು. ಸರ್ಕಾರಿ ನೌಕರರು ಮತ್ತು ಕಾರ್ಪೊರೇಟ್ ವಲಯಕ್ಕೆ ವಾರದಲ್ಲಿ ಕೆಲವು ದಿನ ವರ್ಕ್ ಫ್ರಮ್ ಹೋಮ್ ಕಡ್ಡಾಯ ಮಾಡುವುದು, ಸಾರ್ವಜನಿಕ ಸಾರಿಗೆ ಬಳಕೆ ಮತ್ತು ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸುವುದರಿಂದ ಇಂಧನ ಆಮದಿನ ಮೇಲಿನ ಡಾಲರ್ ಹೊರಹರಿವನ್ನು ತಗ್ಗಿಸಬಹುದು.