ವೈದಿಕ ಪ್ರಕಾರ ದುರೈಮುರುಗನ್ ಮೊಮ್ಮಗಳ ಮದುವೆ; ದ್ರಾವಿಡ ಕಳಗಂ ಆಕ್ರೋಶ: ಮೊಮ್ಮಗಳ ಆಸೆ ಎಂದು ವಿಷಾದಿಸಿದ ಡಿಎಂಕೆ ನಾಯಕ | Duraimurugan

ನ. 01ರಂದು ಡಿಎಂಕೆ ಹಿರಿಯ ನಾಯಕ ಮತ್ತು ಮಾಜಿ ಸಚಿವ ದುರೈಮುರುಗನ್ ಅವರು ತಮ್ಮ ಮೊಮ್ಮಗಳಾದ ಸೆಂಥಮರೈ ಅವರ ವಿವಾಹ ನೇರವೇರಿಸಿದ್ದು, ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ಸೇರಿದಂತೆ ತಮಿಳುನಾಡಿನ ಅನೇಕ ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ದರು. ಆದ್ರೆ ಈಗ ಮದುವೆಯನ್ನು ವೈದಿಕ ವಿಧಿವಿಧಾನಗಳ ಮೂಲಕ ಮಾಡಿದ್ದಕ್ಕೆ ದುರೈಮುರುಗನ್ ಟೀಕೆಗೆ ಗುರಿಯಾಗಿದ್ದಾರೆ.
ವೈದಿಕ ಪ್ರಕಾರ ದುರೈಮುರುಗನ್ ಮೊಮ್ಮಗಳ ಮದುವೆ; ದ್ರಾವಿಡ ಕಳಗಂ ಆಕ್ರೋಶ: ಮೊಮ್ಮಗಳ ಆಸೆ ಎಂದು ವಿಷಾದಿಸಿದ ಡಿಎಂಕೆ ನಾಯಕ | Duraimurugan
Published on: 

ಚೆನ್ನೈ: ಇತ್ತೀಚೆಗೆ ನ. 01ರಂದು ಡಿಎಂಕೆ ಹಿರಿಯ ನಾಯಕ ಮತ್ತು ಮಾಜಿ ಸಚಿವ ದುರೈಮುರುಗನ್ ಅವರು ತಮ್ಮ ಮೊಮ್ಮಗಳಾದ ಸೆಂಥಮರೈ ಅವರ ವಿವಾಹ ನೇರವೇರಿಸಿದ್ದು, ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ಸೇರಿದಂತೆ ತಮಿಳುನಾಡಿನ ಅನೇಕ ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ದರು. ಆದ್ರೆ ಈಗ ಮದುವೆಯನ್ನು ವೈದಿಕ ವಿಧಿವಿಧಾನಗಳ ಮೂಲಕ ಮಾಡಿದ್ದಕ್ಕೆ ದುರೈಮುರುಗನ್ ಟೀಕೆಗೆ ಗುರಿಯಾಗಿದ್ದಾರೆ.

ಡಿಎಂಕೆಯ ಮಾತೃ ಮತ್ತು ಸೈದ್ಧಾಂತಿಕ ಸಂಘಟನೆ ದ್ರಾವಿಡಂ ಕಳಗಂ ದುರೈಮುರುಗನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಟಿವಿಕೆ ಕೂಡ ಡಿಎಂಕೆ ತನ್ನ ಸಿದ್ದಾಂತದಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದೆ.

ದುರೈಮುರುನ್ ವಿರುದ್ಧ ಕೆ.ವೀರಮಣಿ ಕಿಡಿ

ದುರೈಮುರುಗನ್ ವಿರುದ್ಧ ಕಿಡಿಕಾರಿರುವ ದ್ರಾವಿಡಂ ಕಳಗಂ ಅಧ್ಯಕ್ಷ ಕೆ. ವೀರಮಣಿ ಅವರು, ದುರೈಮುರುಗನ್ ಅವರ ಮೊಮ್ಮಗಳ ವಿವಾಹವನ್ನು ಸಂಸ್ಕೃತ ವೇದ ಮಂತ್ರಗಳೊಂದಿಗೆ ಮತ್ತು ಬ್ರಾಹ್ಮಣ ಸಂಪ್ರದಾಯಗಳಿಗೆ ಅನುಸಾರವಾಗಿ ನಡೆಸಲಾಗಿದೆ. ಪಕ್ಷದ ಮೂಲ ತತ್ವಗಳಾದ ವೈಚಾರಿಕತೆ ಮತ್ತು ಸ್ವಾಭಿಮಾನ ಚಳುವಳಿಯ ವಿರುದ್ಧದ ನಿಲುವನ್ನು ತೆಗೆದುಕೊಂಡಿದ್ದಾರೆ. ಈ ಬೆಳವಣಿಗೆ ತಮಗೆ ತೀವ್ರ ನೋವು ಮತ್ತು ಮುಜುಗರವನ್ನುಂಟು ಮಾಡಿದೆ ಎಂದಿದ್ದಾರೆ.

Also Read
E20 ಅಲ್ಲ 420 ಇದು: ಸಾರ್ವಜನಿಕರ ವಾಹನಗಳಿಂದ ಪೆಟ್ರೋಲ್ ಕಳ್ಳತನ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಆರೋಪ| Rahul Gandhi
ವೈದಿಕ ಪ್ರಕಾರ ದುರೈಮುರುಗನ್ ಮೊಮ್ಮಗಳ ಮದುವೆ; ದ್ರಾವಿಡ ಕಳಗಂ ಆಕ್ರೋಶ: ಮೊಮ್ಮಗಳ ಆಸೆ ಎಂದು ವಿಷಾದಿಸಿದ ಡಿಎಂಕೆ ನಾಯಕ | Duraimurugan

ದುರೈಮುರುಗನ್ 45 ವರ್ಷಗಳಿಗೂ ಹೆಚ್ಚು ಕಾಲ ಡಿಎಂಕೆ ಜೊತೆ ಸಂಬಂಧ ಹೊಂದಿದ್ದಾರೆ. ಮತ್ತು ಪಕ್ಷದ ಎರಡನೇ ಪ್ರಮುಖ ಸಾಂಸ್ಥಿಕ ಸ್ಥಾನವನ್ನು ಹೊಂದಿದ್ದಾರೆ ಎಂದು ಎತ್ತಿ ತೋರಿಸಿದ ಅವರು, ಈ ಘಟನೆಯು ನಾಯಕ ಮತ್ತು ಸಂಘಟನೆ ಎರಡಕ್ಕೂ ಮುಜುಗರವನ್ನುಂಟು ಮಾಡಿದೆ. ವೈಯಕ್ತಿಕ ಆಯ್ಕೆಗಳು ಚಳವಳಿಯ ಸೈದ್ಧಾಂತಿಕ ಬದ್ಧತೆಗಳನ್ನು ಹಾಳು ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈಚಾರಿಕತೆಯ ತತ್ವಗಳ ಮೇಲೆ ಸ್ಥಾಪಿತವಾದ ಡಿಎಂಕೆ, ಆದರ್ಶಗಳಿಂದ ವಿಮುಖವಾಗಲು ಸಾಧ್ಯವಿಲ್ಲ ಎಂದಿರುವ ವೀರಮಣಿ ಅವರು, ಸಂಸ್ಕೃತ ವೇದ ಮಂತ್ರಗಳೊಂದಿಗೆ ಸಾಂಪ್ರದಾಯಿಕ ಪುರೋಹಿತರ ನೇತೃತ್ವದ ಆಚರಣೆಗಳ ಮೂಲಕ ವಿವಾಹ ನಡೆದಾಗ, ಡಿಎಂಕೆ ನಾಯಕತ್ವ ಮತ್ತು ದ್ರಾವಿಡ ಐಕಾನ್‌ಗಳನ್ನು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಯಾಕೆ ಚಿತ್ರಿಸಲಾಯಿತು ಎಂದು ಪ್ರಶ್ನಿಸಿದ್ದಾರೆ. ಮತ್ತು ಪಕ್ಷ ಬಗ್ಗೆ ಗಮನಿಸಬೇಕು ಮುಂದೆ ಈಗಾಗದಂತೆ ಎಚ್ಚರ ವಹಿಸಬೇಕು ಎಂದು ಎಂ.ಕೆ.ಸ್ಟಾಲಿನ್​ಗೆ ಒತ್ತಾಯಿಸಿದ್ದಾರೆ.

ವಿಷಾದ ವ್ಯಕ್ತಪಡಿಸಿದ ದುರೈಮುರುಗನ್

ತಮ್ಮ ಮೊಮ್ಮಗಳ ವಿವಾಹದಲ್ಲಿ ನಡೆದ ವೈದಿಕ ವಿಧಿವಿಧಾನಗಳ ಬಗ್ಗೆ ದುರೈಮುರುಗನ್ ವಿಷಾದ ವ್ಯಕ್ತಪಡಿಸಿದ್ದು, ವೈದಿಕ ವಿಧಿವಿಧಾನಗಳ ಪ್ರಕಾರ ವಿವಾಹ ನಡೆಯಬೇಕೆಂಬ ತನ್ನ ಮೊಮ್ಮಗಳ ಆಸೆಯನ್ನು ತಾನು ಈಡೇರಿಸಿದ್ದೇನೆ. ಈ ವಿಷಯವನ್ನು ರಾಜಕೀಯಗೊಳಿಸಬೇಡಿ ಎಂದು ಜನರನ್ನು ಒತ್ತಾಯಿಸಿದ್ದಾರೆ.

Also Read
12 ವರ್ಷಗಳಲ್ಲಿ ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಹಾನಿ!: ಮೋದಿಯಿಂದ ನಾವೇನೂ ಕಲಿಯಬೇಕಿಲ್ಲ ಎಂದು ಸೋನಿಯಾ ಗಾಂಧಿ ಆಕ್ರೋಶ! | Sonia Gandhi
ವೈದಿಕ ಪ್ರಕಾರ ದುರೈಮುರುಗನ್ ಮೊಮ್ಮಗಳ ಮದುವೆ; ದ್ರಾವಿಡ ಕಳಗಂ ಆಕ್ರೋಶ: ಮೊಮ್ಮಗಳ ಆಸೆ ಎಂದು ವಿಷಾದಿಸಿದ ಡಿಎಂಕೆ ನಾಯಕ | Duraimurugan

ವಿದೇಶದಲ್ಲಿ ಓದಿರುವ ನನ್ನ ಮೊಮ್ಮಗಳು, ಬೇರೆ ಜಾತಿಗೆ ಸೇರಿದ ವ್ಯಕ್ತಿಯನ್ನು ಪ್ರೀತಿಸುತ್ತಿರುವುದಾಗಿ ಮತ್ತು ಅವರನ್ನು ಮದುವೆಯಾಗಲು ಬಯಸುತ್ತಿರುವುದಾಗಿ ಹೇಳಿದ್ದಳು. ವೈದಿಕ ವಿಧಿವಿಧಾನಗಳ ಮೂಲಕ ವಿವಾಹವಾಗಲು ಇಚ್ಚೆಯಿರುವುದಾಗಿ ತಿಳಿಸಿದ್ದಳು. ಅವಳ ಇಚ್ಛೆಯಂತೆ ವೈದಿಕ ವಿಧಿವಿಧಾನಗಳಿಗೆ ಅನುಗುಣವಾಗಿ ವಿವಾಹ ನೆರವೇರಿಸಲಾಯಿತು. ಮೊಮ್ಮಗಳ ಆಸೆಗಳನ್ನು ಪೂರೈಸಬೇಕಾದ ಪರಿಸ್ಥಿತಿಯಲ್ಲಿ ನಾನು ಇದ್ದೆ. ಆ ಘಟನೆಗೆ ನನಗೆ ವಿಷಾದವೂ ಇದೆ ಎಂದು ಹೇಳಿದ್ದಾರೆ.

ಸಂಸ್ಕೃತ, ವೈದಿಕ ಆಚರಣೆ ವಿರೋಧಿಸುವ ಡಿಎಂಕೆ

ವೈಚಾರಿಕತೆಯನ್ನು ತನ್ನ ಪ್ರಮುಖ ಸೈದ್ಧಾಂತಿಕ ತತ್ವಗಳಲ್ಲಿ ಒಂದಾಗಿ ಎತ್ತಿಹಿಡಿಯುವ ಡಿಎಂಕೆ, ಸಾಂಪ್ರದಾಯಿಕವಾಗಿ ಮದುವೆಗಳು ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಸಂಸ್ಕೃತ ಮಂತ್ರಗಳು ಮತ್ತು ವೈದಿಕ ಆಚರಣೆಗಳನ್ನು ವಿರೋಧಿಸುತ್ತಾ ಬಂದಿದೆ. ಬದಲಾಗಿ ಪಕ್ಷವು ಸಾಮಾಜಿಕ ಸಮಾನತೆಯನ್ನು ಒತ್ತಿಹೇಳುವ ಮತ್ತು ಜಾತಿ ಆಧಾರಿತ ಆಚರಣೆಗಳು ಮತ್ತು ಧಾರ್ಮಿಕ ಆಚರಣೆಗಳನ್ನು ತಿರಸ್ಕರಿಸುವ ಪೆರಿಯಾರ್ ಅವರ ಸ್ವಾಭಿಮಾನದ ವಿವಾಹಗಳನ್ನು ಉತ್ತೇಜಿಸುತ್ತಾ ಬಂದಿದೆ.

ಅನೇಕ ಡಿಎಂಕೆ ನಾಯಕರು ಪೆರಿಯಾರ್ ಅವರ ಸ್ವಾಭಿಮಾನದ ವಿವಾಹ ಪದ್ದತಿ ಮೂಲಕ ತಮ್ಮ ವಿವಾಹವಾಗಿದ್ದಾರೆ. ಡಿಎಂಕೆ ಕಾರ್ಯಕರ್ತರು ಸಹ ಅದೇ ಪದ್ದತಿಯನ್ನು ಅನುಸರಿಸುತ್ತಾ ಬಂದಿದ್ದಾರೆ. ಆದ್ರೆ ಈಗ ಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾಗಿರುವ ದುರೈಮುರುಗನ್, ಕುಟುಂಬ ವಿವಾಹದಲ್ಲಿ ವೈದಿಕ ಆಚರಣೆಗಳನ್ನು ಅನುಮತಿಸಿರುವುದು ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ (ಏಜೆನ್ಸೀಸ್).