2024ರಲ್ಲಿ ಮ್ಯಾಟ್ರಿಮೋನಿಯಂ ವೆಬ್ಸೈಟ್ನಲ್ಲಿ ಮಹಿಳೆಯೊಬ್ಬರನ್ನು ಪರಿಚಯವಾಗಿದ್ದ ಆರೋಪಿ, ಮದುವೆ ಭರವಸೆ ನೀಡಿ ಆಕೆಯ ಜೊತೆ ದೈಹಿಕ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಮತ್ತು ದುಬೈಗೂ ಅವನ ಜೊತೆ ಮಹಿಳೆ ತೆರಳಿದ್ದಳು. ಅದಾದ ಬಳಿಕ ಆತನಿಗೆ ಮದುವೆಯಾಗಿರುವುದು ತಿಳಿದು ಬಂದಿದೆ. ಈ ಕುರಿತು ಮೊದಲ ಮದುವೆಯನ್ನು ಮುಚ್ಚಿಟ್ಟು, ತನ್ನೊಂದಿಗೆ ದೈಹಿಕ ಸಂಪರ್ಕ ಸಾಧಿಸಿ, ಅದನ್ನು ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಆರೋಪಿಸಿದ್ದಾಳೆ.