ನವದೆಹಲಿ: ದೇಶ್ಯಾದ್ಯಂತ ಭಾರಿ ಸದ್ದು ಮಾಡಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿ ತಾವು ಏತಕ್ಕಾಗಿ ಮೌನವಹಿಸಿದ್ದರು ಎಂಬುದಕ್ಕೆ ರಾಜ್ಯಸಭಾ ಸಂಸದ ರಾಘವ್ ಚಡ್ಡಾ (Raghav Chadha) ಗುರುವಾರ ವಿವರಣೆ ನೀಡಿದ್ದಾರೆ. ಪೇಪರ್ ಲೀಕ್ ವಿರೋಧಿ ವಿಧೇಯಕದ ಮೇಲಿನ ಚರ್ಚೆಯ ವೇಳೆ ಭಾಷಣ ಮಾಡಿದ ಚಡ್ಡಾ, ಇಂತಹ ಪ್ರಕರಣಗಳನ್ನು ಮಾಧ್ಯಮಗಳ ಸೌಂಡ್‌ಬೈಟ್‌ಗಳ ಮೂಲಕ ಬಗೆಹರಿಸಲು ಸಾಧ್ಯವಿಲ್ಲ, ಬದಲಿಗೆ ಸಾಂಸ್ಥಿಕ ಪರಿಹಾರದ ಅಗತ್ಯವಿದೆ ಎಂದು ಹೇಳಿದರು.