ಲಿಫ್ಟ್‌ನಲ್ಲಿದ್ದ ಮಕ್ಕಳ ಮೇಲೆ ಉಗ್ರರೂಪ ತಾಳಿದ ಶ್ವಾನ: ನಾಯಿ ಮಾಲಕಿಗೆ ನೆಟ್ಟಿಗರಿಂದ ಛೀಮಾರಿ; ವಿಡಿಯೋ ವೈರಲ್! Dog Attack in Elevator
ಲಿಫ್ಟ್‌ನಲ್ಲಿ ಬಾಲಕಿಯರ ಮೇಲೆ ದಾಳಿ ಮಾಡಿದ ಸಾಕು ನಾಯಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಲಿಫ್ಟ್‌ನಲ್ಲಿ ಬಾಲಕಿಯರ ಮೇಲೆ ದಾಳಿ ಮಾಡಿದ ಸಾಕು ನಾಯಿ
ಮುಂಬೈನ ಮಲಾಡ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ನಡೆದ ಘಟನೆ
ನಾಯಿ ಮಾಲೀಕಳ ಬೇಜವಾಬ್ದಾರಿತನದ ವಿರುದ್ಧ ನೆಟ್ಟಿಗರ ಆಕ್ರೋಶ
ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ಮುಂಬೈ: ನಾಯಿಗಳು ಸಾಕಲು ಯೋಗ್ಯವಾದ ಜೀವಿಗಳೇ ಆಗಿದ್ದರು, ಅವುಗಳು ಪ್ರಾಣಿ ಪ್ರಭೇದಕ್ಕೆ ಸೇರುತ್ತವೆ, ಹೀಗಾಗಿ ಅವುಗಳಲ್ಲಿ ಉಗ್ರ ಸ್ವಭಾವ ಇರುತ್ತದೆ ಎನ್ನುವುದನ್ನು ನಾವು ಮರೆಯಬಾರದು.
ಏಕೆಂದರೆ, ಇತ್ತೀಚೆಗೆ ಮುಂಬೈನಲ್ಲಿರುವ ಅಪಾರ್ಟ್ಮೆಂಟ್ನ ಲಿಫ್ಟ್ಗೆ ತನ್ನ ಮಾಲೀಕರೊಂದಿಗೆ ಬಂದ ಶ್ವಾನವೊಂದು ಮಾಡಿರುವ ಕೃತ್ಯ (Dog Attack in Elevator) ಈಗ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಗುರುವಾರ (ಜು.16) ಮುಂಬೈನ ಮಲಾಡ್ನಲ್ಲಿರುವ ಶೇತ್ ಐರೀನ್ ಟವರ್ ಎಂಬ ಅಪಾರ್ಟ್ನ ಲಿಫ್ಟ್ನ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಎಂದು ಹೇಳಲಾಗುತ್ತಿದೆ.
ಮೂರು ಜನ ಬಾಲಕಿಯರು ಲಿಫ್ಟ್ನ ಮೂಲಕ ತಮ್ಮ ಫ್ಲೋರ್ಗೆ ಸಾಗುತ್ತಿರುತ್ತಾರೆ. ಇದರ ನಡುವೆ ಒಬ್ಬ ಮಹಿಳೆ ತನ್ನ ನಾಯಿ ಜೊತೆಗೆ ಲಿಫ್ಟ್ಗೆ ಎಂಟ್ರಿ ಕೊಡುತ್ತಾಳೆ. ಲಿಫ್ಟ್ಗೆ ಕಾಲಿಡುತ್ತಿದ್ದಂತೆ ಉಗ್ರರೂಪ ತಾಳಿದ ಶ್ವಾನವು ಲಿಫ್ಟ್‌ನಲ್ಲಿದ್ದ ಹುಡುಗಿಯರ ಮೇಲೆ ದಾಳಿ ಮಾಡುತ್ತದೆ.
ಒಮ್ಮೆಲೆ ನಾಯಿ ದಾಳಿಯಿಂದ ವಿಚಲಿತರಾದ ಹುಡುಗಿಯರು ಹೆದರಿ ಕೂಗಿಕೊಳ್ಳುತ್ತರೆ. ಅಷ್ಟರಲ್ಲೇ ಲಿಫ್ಟ್ ತೆರೆದ ಕಾರಣ ಇಬ್ಬರು ಹುಡುಗಿಯರು ನಾಯಿ ದಾಳಿಯಿಂದ ಬಚಾವಾಗುತ್ತಾರೆ. ಆದರೆ ಲಿಫ್ಟ್‌ನಲ್ಲಿ ನಾಯಿ ಮಾಲಕಿ, ನಾಯಿ ಜೊತೆ ಒಬ್ಬ ಹುಡುಗಿ ಸಿಲುಕಿ ಕೊಳ್ಳುತ್ತಾಳೆ.
ವಿಡಿಯೋನಲ್ಲಿ ನೋಡುವಂತೆ ಆ ನಾಯಿ, ಲಿಫ್ಟ್‌ನಲ್ಲಿ ಸಿಲುಕಿದ್ದ ಹುಡುಗಿ ಮೇಲೆ ಪದೇ-ಪದೇ ದಾಳಿ ನಡೆಸಿದೆ. ಆದರೆ ನಾಯಿಯ ಉಗ್ರರೂಪದ ಬಗ್ಗೆ ಮೊದಲೇ ಅರಿವಿದ್ದ ಮಾಲಕಿ, ನಾತಿ ಬಾಯಿಗೆ ಲೋಹದ ಮುಚ್ಚಳ ಹಾಕಿದ್ದ ಕಾರಣ ಹೆಚ್ಚಿನ ಅನಾಹುತ ನಡೆದಿಲ್ಲ ಎಂದು ತಿಳಿದು ಬಂದಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ನಾಯಿ ಮಾಲಕಿ ವಿರುದ್ಧ ಸಿಡಿದೆದ್ದಿದ್ದಾರೆ. ನಿಮ್ಮ ನಾಯಿ, ನಿಮ್ಮ ಆಯ್ಕೆ ಆದರೆ ಅದರಿಂದ ಇನ್ನೊಬ್ಬರಿಗೆ ತೊಂದರೆ ಕೊಡಬಾರದೆಂಬ ಕನಿಷ್ಟ ಜ್ಞಾನ ಈ ನಾಯಿ ಮಾಲಕಿಗೆ ಇಲ್ಲವೇ? ಎಂದು ಒಬ್ಬರು ಕೇಳಿದ್ದಾರೆ.
ಈ ನಾಯಿಗಳನ್ನು ಲಿಫ್ಟ್‌ನಲ್ಲಿ ಕರೆದುಕೊಂಡು ಹೋಗಲು ಆಕೆಗೆ ಅನುಮನಿ ನೀಡಿದವರು ಯಾರು? ಇದರಿಂದ ಆ ಮಕ್ಕಳ ಪ್ರಾಣಕ್ಕೆ ಅನಾಹುತವಾಗಿದ್ದರೆ ಯಾರು ಜವಾಬ್ದಾರಿ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಈ ನಾಯಿ ಮಾಲಕಿ ಹಾಗೂ ಆ ನಾಯಿಯನ್ನು ಮೊದಲು ಆ ಅಪಾರ್ಟ್ಮೆಂಟ್ನಿಂದ ಹೊರಹಾಕಿ. ನಾಳೆ ಆ ನಾಯಿ ಇನ್ಯಾರ ಮೇಲೆ ದಾಳಿ ಮಾಡುತ್ತೋ? ಯಾರಿಗೆ ಗೊತ್ತು? ಎಂದು ಮತ್ತೊಬ್ಬರು ಆಕ್ರೋಶ ಹೊರಹಾಕಿದ್ದಾರೆ, (ಏಜನ್ಸೀಸ್).