ಪಟನಾ: ಬಿಹಾರದಲ್ಲಿ ನಡೆದ ಸರ್ಕಾರಿ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಯುವ ವೈದ್ಯೆಯ ಹಿಜಾಬ್ ತೆಗೆದ ಪ್ರಕರಣ ಮುಂದುವರೆದಿದ್ದು, ಈ ಘಟನೆಯ ಬಳಿಕ ಸಂತ್ರಸ್ತೆ, ಆಯುಷ್ ವೈದ್ಯೆ ನುಸ್ರತ್ ಪರ್ವೀನ್ ಕರ್ತವ್ಯಕ್ಕೆ ಹಾಜರಾಗಲು ನಿರಾಕರಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಹಿನ್ನಲೆಯಲ್ಲಿ ಆ ಯುವತಿಗೆ ಗಡುವು ನೀಡಿದ್ದು, ಅದು ಇಂದು (ಡಿ.31-ಬುಧವಾರ) ಅಂತ್ಯವಾಗುತ್ತಿದೆ.