ರೈಲಿನಲ್ಲಿ ಫೋನ್​, ಲ್ಯಾಪ್​ಟಾಪ್​ ಚಾರ್ಜ್​ ಹಾಕ್ತೀರಾ? ಹಾಗಿದ್ರೆ, ರೈಲ್ವೆ ಇಲಾಖೆಯ ಈ ಟಫ್​ ರೂಲ್ಸ್ ನಿಮಗೂ ಗೊತ್ತಿರಲಿ | Indian Railways

Indian Railways
ರೈಲಿನಲ್ಲಿ ಫೋನ್​, ಲ್ಯಾಪ್​ಟಾಪ್​ ಚಾರ್ಜ್​ ಹಾಕ್ತೀರಾ? ಹಾಗಿದ್ರೆ, ರೈಲ್ವೆ ಇಲಾಖೆಯ ಈ ಟಫ್​ ರೂಲ್ಸ್ ನಿಮಗೂ ಗೊತ್ತಿರಲಿ | Indian Railways
Published on: 

Indian Railways: ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣಿಸುವ ಜನರು, ತಮ್ಮೊಂದಿಗೆ ತರುವ ಫೋನ್ ಮತ್ತು ಲ್ಯಾಪ್​ಟಾಪ್​ಗಳಲ್ಲಿ ಚಾರ್ಚ್​ ಕಡಿಮೆಯಿದೆ ಎಂದು ಗೊತ್ತಾಗುತ್ತಿದ್ದಂತೆ ತಕ್ಷಣವೇ ರೈಲಿನ ಬೋಗಿಗಳಲ್ಲಿರುವ ಸ್ವಿಚ್​ ಬೋರ್ಡ್​ಗೆ ಪ್ಲಗ್​ ಮಾಡಿ, ಕುಳಿತ ಜಾಗದಲ್ಲೇ ಪೂರ್ತಿಯಾಗುವವರೆಗೂ ಚಾರ್ಜ್ ಮಾಡಿಕೊಳ್ಳುತ್ತಾರೆ. ಅಸಲಿಗೆ, ಬಹುತೇಕರಿಗೆ ಗೊತ್ತಿಲ್ಲದ ಹಾಗೂ ಅಚ್ಚರಿ ಸಂಗತಿ ಏನೆಂದರೆ, ಈ ರೀತಿ ಚಾರ್ಚಿಂಗ್​ ಮಾಡಿಕೊಳ್ಳುವುದಕ್ಕೂ ಭಾರತೀಯ ರೈಲ್ವೆ ಇಲಾಖೆ ಒಂದು ಶಿಸ್ತಿನ ನಿಯಮವನ್ನು ಜಾರಿಗೊಳಿಸಿದೆ.

ರೈಲಿನ ಪ್ರಯಾಣವನ್ನು ಆನಂದಿಸಲು ಕೆಲವರು ತಮ್ಮ ಫೋನ್ ಅಥವಾ ಲ್ಯಾಪ್​ಟಾಪ್​ನಲ್ಲಿ ಸಿನಿಮಾ, ಧಾರವಾಹಿ ನೋಡುವುದು, ಆನ್​ಲೈನ್​ ಗೇಮ್ಸ್​ಗಳನ್ನು ಆಡುತ್ತಾರೆ. ಈ ರೀತಿ ಮಾಡುವುದರಿಂದ ದೀರ್ಘಕಾಲ ಬರುವ ಬ್ಯಾಟರಿಗಳು ಕೆಲವೇ ಗಂಟೆಗಳಲ್ಲಿ ಇಳಿದು ಹೋಗುತ್ತವೆ. ಇಂತಹ ಸಮಯದಲ್ಲಿ ನಿಮ್ಮ ಫೋನ್ ಅನ್ನು ರೈಲುಗಳಲ್ಲಿ ಕೊಡಲಾಗುವ ಚಾರ್ಜಿಂಗ್ ಪಾಯಿಂಟ್​ಗಳಲ್ಲಿ​ ಹಾಕಿ ಚಾರ್ಜ್​ ಮಾಡಿಕೊಳ್ಳುತ್ತೀರಿ. ಆದ್ರೆ, ಇಡೀ ದಿನದಲ್ಲಿ ರಾತ್ರಿ 11ರ ನಂತರ ಇದಕ್ಕೆ ರೈಲ್ವೆ ಅವಕಾಶ ನೀಡುವುದಿಲ್ಲ ಎಂಬ ವಿಷಯ ನಿಮಗೆ ಗೊತ್ತಿದ್ಯಾ?

ರೈಲುಗಳಲ್ಲಿನ ಚಾರ್ಜಿಂಗ್ ಪಾಯಿಂಟ್‌ಗಳನ್ನು ರಾತ್ರಿ 11ರಿಂದ ಬೆಳಗ್ಗೆ 5ರ ನಡುವೆ ಸ್ವಿಚ್ ಆಫ್ ಮಾಡಲೇಬೇಕು. ಪ್ರಯಾಣಿಕರು ಸಾಮಾನ್ಯವಾಗಿ ನಿದ್ರೆಗೆ ಜಾರುವ ಸಮಯ ಎಂಬ ಕಾರಣ ಒಂದಾದರೆ. ಚಾರ್ಜ್ ಮಾಡುವಾಗ ಸಾಧನಗಳು ಹೆಚ್ಚು ಬಿಸಿಯಾಗುವುದು ಅಥವಾ ವಿದ್ಯುತ್ ದೋಷಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹೀಗಾಗಿ, ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಈ ನಿರ್ಬಂಧ ಹೇರಲಾಗಿದೆ.

ರಾತ್ರಿಯೇ ನಿಷೇಧ ಏಕೆ?

ಈ ನಿಷೇಧಕ್ಕೆ ಇತ್ತೀಚಿನ ಘಟನೆಯೇ ಕಾರಣ. ರೈಲಿನಲ್ಲಿ ಚಾರ್ಜಿಂಗ್ ಪಾಯಿಂಟ್‌ಗೆ ಪ್ಲಗ್ ಮಾಡಿದ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ಸ್ಫೋಟಗೊಂಡು ದಟ್ಟ ಹೊಗೆ ಆವರಿಸಿಕೊಂಡ ಘಟನೆಯಿಂದ ಸಹ ಪ್ರಯಾಣಿಕರು ಗಾಬರಿಯಾದ ಪ್ರಕರಣದಿಂದ ಎಚ್ಚೆತ್ತ ರೈಲ್ವೆ ಮಂಡಳಿ ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದೆ. ದೋಷಪೂರಿತ ಬ್ಯಾಟರಿಗಳು, ದೋಷಯುಕ್ತ ಚಾರ್ಜಿಂಗ್ ಸಾಧನಗಳು ಮತ್ತು ಹೆವೀ ಸಾಧನಗಳು ಪ್ರಯಾಣಿಕರಿಗೆ ಮತ್ತು ರೈಲಿಗೆ ಅಪಾಯವನ್ನು ಸೃಷ್ಟಿಸಬಹುದು. ಇದರೊಟ್ಟಿಗೆ, ರಾತ್ರಿಯಿಡೀ ಫೋನ್​ ಚಾರ್ಚಿಂಗ್​ಗೆ ಹಾಕಿ ಮಲಗುವುದರಿಂದ ಮೊಬೈಲ್​ ಕಳ್ಳತನ ಪ್ರಕರಣಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚು. ಹೀಗಾಗಿ, ರೈಲ್ವೆ ಇಲಾಖೆ ಈ ನಿಯಮಗಳನ್ನು ಕಾರ್ಯ ರೂಪಕ್ಕೆ ತಂದಿದೆ.

Also Read
'ರಾಮಾಯಣ', 'ಸೀನ್​', 'ಮೂಕುತಿ ಅಮನ್​ 2'... ಈ ವಾರ ಒಟಿಟಿ, ಚಿತ್ರಮಂದಿರಗಳಲ್ಲಿ ಯಾವೆಲ್ಲ ಸಿನಿಮಾ ರಿಲೀಸ್​? ಇಲ್ಲಿದೆ ಪಟ್ಟಿ | South Films
Indian Railways

ಸ್ವಿಚ್​ ಆಫ್​ ಮಾಡಲು ಸಿಬ್ಬಂದಿಗಳು

ರೈಲ್ವೇ ವಲಯಗಳಿಗೆ ನೀಡಲಾದ ಇತ್ತೀಚಿನ ನಿರ್ದೇಶನವು ಚಾರ್ಜಿಂಗ್ ಪಾಯಿಂಟ್‌ಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ತಿಳಿಸಲಾಗಿದೆ. ರಾತ್ರಿ 11ರ ನಂತರ ಸ್ವಿಚ್​ ಬೋರ್ಡ್​ಗಳು ಆಫ್​ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಗಮನಿಸಲು ಇಲಾಖೆ ಪ್ರತ್ಯೇಕ ಸಿಬ್ಬಂದಿಗಳನ್ನು ಸಹ ನೇಮಕ ಮಾಡಲಿದೆ ಎಂದು ತಿಳಿಸಿದೆ. ಆದ್ರೆ, ಇದು ಎಲ್ಲ ಬೋಗಿಗಳಿಗೂ ಹೇಗೆ ಅನ್ವಯಿಸಲಿದೆ? ಎಷ್ಟರ ಮಟ್ಟಿಗೆ ಪಾಲನೆ ಆಗಲಿದೆ ಎಂಬುದೇ ಪ್ರಶ್ನೆ,(ಏಜೆನ್ಸೀಸ್).