ನವದೆಹಲಿ: ಉದ್ಯೋಗ ಮತ್ತು ಸಾಮಾಜಿಕ ಭದ್ರತೆಗೆ ಒತ್ತಾಯಿಸಿ ಅಮೆಜಾನ್, ಜೊಮಾಟೊ, ಸ್ವಿಗ್ಗಿ, ಜೆಪ್ಟೊ, ಬ್ಲಿಂಕಿಟ್ ಹಾಗೂ ಫ್ಲಿಪ್‌ಕಾರ್ಟ್‌ನಂತಹ ಪ್ರಮುಖ ಆಹಾರ ವಿತರಣಾ ಮತ್ತು ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಸಂಬಂಧಿಸಿದ ವಿತರಣಾ ಕಾರ್ಮಿಕರು(Gig workers) ಇಂದು(ಡಿ. 31) ದೇಶಾದ್ಯಂತ ಮುಷ್ಕರವನ್ನು ಘೋಷಿಸಿದ್ದು, ಆನ್‌ಲೈನ್ ಆರ್ಡರ್ಗಳ ವಿತರಣಾ ಸೇವೆಯಲ್ಲಿ ವ್ಯತ್ಯಯವಾಗಬಹುದು.