ದಿಲ್ಜಿತ್ ದೋಸಾಂಜ್ ಮ್ಯಾನೇಜರ್​ ಮನೆ ಮೇಲೆ ಶೂಟೌಟ್​: ಬಿಜೆಪಿ ಸೇರದಿದ್ದಕ್ಕೆ ಈ ಕೃತ್ಯ; ಲಾರೆನ್ಸ್​ ಬಿಷ್ಣೋಯ್​ಗೆ ಭಾಜಪಾ ಬೆಂಬಲ: ಭಗವಂತ ಮಾನ್​ ಆಕ್ರೋಶ..Diljit Dosanjh

ಗಾಯಕ ದಿಲ್ಜಿತ್ ದೋಸಾಂಜ್ ಮ್ಯಾನೇಜರ್ ಮನೆ ಮೇಲೆ ಗುಂಡಿನ ದಾಳಿ
ಗಾಯಕ ದಿಲ್ಜಿತ್ ದೋಸಾಂಜ್ ಮ್ಯಾನೇಜರ್ ಮನೆ ಮೇಲೆ ಗುಂಡಿನ ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ಗಾಯಕ ದಿಲ್ಜಿತ್ ದೋಸಾಂಜ್ ಮ್ಯಾನೇಜರ್ ಮನೆ ಮೇಲೆ ಗುಂಡಿನ ದಾಳಿ
  • ಶೂಟೌಟ್​ ಹೊಣೆ ಹೊತ್ತ ಬಿಷ್ಣೋಯ್​ ಗ್ಯಾಂಗ್​
  • ದಿಲ್ಜಿತ್ ಬಿಜೆಪಿ ಸೇರಲು ನಿರಾಕರಿಸಿದ್ದಕ್ಕೆ ಈ ದಾಳಿ ಎಂದ ಸಿಎಂ ಮಾನ್​
ಪಂಜಾಬ್​: ಖ್ಯಾತ ಪಂಜಾಬಿ ಗಾಯಕ ಹಾಗೂ ಬಾಲಿವುಡ್​ ನಟ ದಿಲ್ಜಿತ್ ದೋಸಾಂಜ್ (Diljit Dosanjh) ಅವರ ಮ್ಯಾನೇಜರ್​ ಗುರುಪ್ರತಾಪ್​ ಸಿಂಗ್​ ಕಾಂಗ್​ ಅವರ ಮನೆ ಮೇಲೆ ಗುಂಡಿನ ದಾಳಿ ನಡೆದಿದೆ. ಈ ದಾಳಿಯ ಹೊಣೆಯನ್ನು ಕುಖ್ಯಾತ ಲಾರೆನ್ಸ್ ಬಿಷ್ಣೋಯ್​ ಗ್ಯಾಂಗ್​ ಹೊತ್ತುಕೊಂಡಿದೆ.
ತಮ್ಮ ಮನೆ ಮೇಲೆ ನಡೆದಿರುವ ದಾಳಿ ಬಗ್ಗೆ ಗುರುಪ್ರತಾಪ್​ ಸಿಂಗ್​ ಹತ್ತಿರದ ಪೊಲೀಸ್​ ಠಾಣೆಯಲ್ಲಿ ದೂರನ್ನು ನೀಡಿದ್ದು, ತನಿಖೆ ನಡೆಸುತ್ತಿದ್ದಾಗಿ ಹರಿಯಾಣಾ ಪೊಲೀಸರು ತಿಳಿಸಿದ್ದಾರೆ.

ದಿಲ್ಜಿತ್ ಬಿಜೆಪಿ ಸೇರದ ಕಾರಣ ದಾಳಿ: ಪಂಜಾಬ್​ ಸಿಎಂ

ಗಾಯಕ ದಿಲ್ಜಿತ್ ದೋಸಾಂಜ್ ಮ್ಯಾನೇಜರ್​ ಮನೆ ಮೇಲೆ ನಡೆದಿರುವ ದಾಳಿಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್​ ಮಾನ್​, ದಿಲ್ಜಿತ್​ಗೆ ಬಿಜೆಪಿ ಪಕ್ಷಕ್ಕೆ ಸೇರುವಂತೆ ಬಹಳ ಒತ್ತಡ ಹಾಕಲಾಗುತ್ತಿತ್ತು, ಅದಕ್ಕೆ ಆತ ಒಪ್ಪದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ ಎನ್ನುವುದು ನನ್ನ ಅನುಮಾನ ಎಂದಿದ್ದಾರೆ.
ಇತ್ತೀಚೆಗೆ ತಮಿಳುನಾಡಿನಲ್ಲಿ ನಟ ವಿಜಯ್​ ಸಿಎಂ ಆಗಿರುವುದನ್ನು ನೋಡಿರುವ ಬಿಜೆಪಿ ಮುಂಬರುವ ಪಂಜಾಬ್​ ಚುನಾವಣೆಯಲ್ಲಿ ದಿಲ್ಜಿತ್ ದೋಸಾಂಜ್ ಅವರನ್ನು ತಮ್ಮ ಪಕ್ಷಕ್ಕೆ ಕರದುಕೊಂಡರೆ ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕಿದೆ. ಆದರೆ ಅದಕ್ಕೆ ಅವರು ಒಪ್ಪಿಗೆ ಸೂಚಿಸದೆ, ನಾನು ಸಿನಿಮಾದಲ್ಲಿಯೇ ಮುಂದುವರಿಯುತ್ತೆನೆಂದು ಹೇಳಿರುವ ಕಾರಣ ಈ ಕೃತ್ಯವನ್ನು ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಬಿಷ್ಣೋಯ್​ಗೆ ಬಿಜೆಪಿಯೇ ಬೆಂಬಲ!

ಈ ದಾಳಿಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್​ ಸಚಿವ ಹರ್ಪಾಲ್​ ಸಿಂಗ್​ ಚೀಮಾ, ಈ ಲಾರೆನ್ಸ್​ ಬಿಷ್ಣೋಯ್​ಗೆ ಬಿಜೆಪಿಯೇ ಬೆಂಬಲ ನೀಡುತ್ತಿದೆ. ಅವನು ಗುಜರಾತಿನ ಜೈಲಿನಲ್ಲಿ ಇದ್ದುಕೊಂಡೆ ಈಡೀ ದೇಶದಲ್ಲಿರುವ ಖ್ಯಾತನಾಮರಿಗೆ ಬೆದರಿಕೆ ಹಾಕುತ್ತಿದ್ದರೆ, ಕೇಂದ್ರ ಸರ್ಕಾರ ಹಾಗೂ ಗುಜರಾತ್​ ಸರ್ಕಾರ ಏನು ಮಾಡುತ್ತಿದೆ? ಎಂದು ಚೀಮಾ ಪ್ರಶ್ನಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net