ಮಧ್ಯಪ್ರಾಚ್ಯದಲ್ಲಿ ಮುಗಿಯದ ಯುದ್ಧ: ಭಾರತದಲ್ಲಿ ಏರಿಕೆಯಾಗಲಿದೆ ಪೆಟ್ರೋಲ್​ ಡೀಸೆಲ್​? ಆರ್​ಬಿಐ ಗವರ್ನರ್​ ಹೇಳಿಕೆ ವೈರಲ್​! Petrol Diesel Price Hike

ಭಾರತದಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆಯಾಗಲಿದೆ: ಆರ್​ಬಿಐ ಗವರ್ನ್​ರ್​
ಭಾರತದಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆಯಾಗಲಿದೆ: ಆರ್​ಬಿಐ ಗವರ್ನ್​ರ್​
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಗಿಯದ ಸಂಘರ್ಷ
  • ನೂರು ಡಾಲರ್​ ದಾಟಿದ ಬ್ಯಾರೆಲ್​ ಕಚ್ಚಾ ತೈಲ ಬೆಲೆ
  • ಭಾರತದಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆಯಾಗಲಿದೆ: ಆರ್​ಬಿಐ ಗವರ್ನ್​ರ್​
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಹೀಗೆ ಮುಂದುವರಿದರೆ ಕಚ್ಚಾ ತೈಲದ ಬೆಲೆ ಹೆಚ್ಚಾಗುವ ಕಾರಣ ಭಾರತದಲ್ಲಿ ಸಹ ಪೆಟ್ರೋಲ್​ ಹಾಗೂ ಡೀಸೆಲ್ ಬೆಲೆ (Petrol Diesel Price Hike) ಸಹಜವಾಗಿ ಏರಿಕೆಯಾಗಲಿದೆ ಎಂದು ರಿಸರ್ವ್​ ಬ್ಯಾಂಕ್​ನ ಗವರ್ನರ್​ ಸಂಜಯ್​ ಮಲೋತ್ರಾ ತಿಳಿಸಿದ್ದಾರೆ.
ಬುಧವಾರ (ಮೇ.13) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಭಾರತದಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆಯನ್ನು ಏರಿಕೆ ಮಾಡಿಲ್ಲ, ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತದೆ, ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ನಮ್ಮಲ್ಲಿ ಸಹ ತೈಲ ಬೆಲೆ ಏರಿಕೆಯಾದರೆ ಆಶ್ಚರ್ಯ ಪಡಬೇಕಿಲ್ಲ ಎಂದು ಅವರು ಹೇಳಿದ್ದಾರೆ.
ಆರ್​ಬಿಐ ಸಹ ಈ ಕುರಿತು ಚರ್ಚೆ ನಡೆಸುತ್ತಿದ್ದು, ಭಾರತದಲ್ಲಿ ಆರ್ಥಿಕ ಹಿಂಜರೆತ ಹಾಗೂ ದಿವಾಳಿತನ ತಲೆದೂರದಂತೆ ಮಾಡಲು ಏನೇನು ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಚಾರ ಮಾಡುತ್ತಿದ್ದಾಗಿ ಸಂಜಯ್​ ಮಲೋತ್ರಾ ತಿಳಿಸಿದ್ದಾರೆ.

ದಿನಕ್ಕೆ 1,000 ಕೋಟಿ ನಷ್ಟವಾಗುತ್ತಿದೆ!

ನಿನ್ನೆ (ಮೇ.12) ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಪತ್ರಿಕಾಗೋಷ್ಟಿ ನಡೆಸಿ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನೂರು ಡಾರಲ್​ ದಾಟಿದೆ. ಆದರೆ ನಾವು ದೇಶದಲ್ಲಿ ಇಲ್ಲಿವರೆಗೆ ಪೆಟ್ರೋಲ್​, ಡೀಸೆಲ್​ ಬೆಲೆಯನ್ನು ಏರಿಸಿಲ್ಲ. ಇದರಿಂದಾಗಿ ನಮಗೆ ದಿನಕ್ಕೆ ಸುಮಾರು 1,000 ಕೋಟಿ ನಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತ ಶೇ. 88 ರಷ್ಟು ತೈಲವನ್ನು ಪ್ರಪಂಚದ ಇತರೆ ಭಾಗದಿಂದ ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ ರಫ್ತು ಮಾಡುವ ದೇಶ ಬೆಲೆಯನ್ನು ಏರಿಕೆ ಮಾಡಿದರೆ ನಾವು ಕೂಡ ಬೆಲೆಯನ್ನು ಹೆಚ್ಚಿಸಲೆ ಬೇಕಾಗುತ್ತದೆ ಎಂದರು.
ಆದರೆ ಜನರು ಭಯ ಪಡುವ ಅಗತ್ಯವಿಲ್ಲ, ನಮ್ಮ ಬಳಿ 45 ದಿನಗಳಿಗೆ ಆಗುವಷ್ಟು ಪೆಟ್ರೋಲ್​ ಹಾಗೂ ಡೀಸೆಲ್​ನ ರಿಸರ್ವ್​ ಇದ್ದರೆ ಸುಮಾರು 76 ದಿನಗಳವರೆಗೆ ದೇಶಕ್ಕೆ ಪೂರೈಸುವಷ್ಟು ಇಂಧನಗಳಿವೆ. ಆದರೆ ಜನರು ಈ ಕಷ್ಟದ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಮಿತ ಬಳಕೆ ಮಾಡಬೇಕಾಗಿ ಸಚಿವರು ತಿಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net