ಮಾ.7 ಕ್ಕೆ ಧುರಂಧರ್​ 2 ಟ್ರೇಲರ್​ ರೀಲೀಸ್: ಯೂಟ್ಯೂಬ್ ಕ್ರಾಶ್ ಆಗೋದು ಗ್ಯಾರಂಟಿ ಎಂದ ಫ್ಯಾನ್ಸ್! Dhurandhar 2

ನಾಳೆ (ಮಾ.7) ಧುರಂಧರ್ 2 ಸಿನಿಮಾದ ಟ್ರೇಲರ್ ಬಿಡುಗಡೆ
ನಾಳೆ (ಮಾ.7) ಧುರಂಧರ್ 2 ಸಿನಿಮಾದ ಟ್ರೇಲರ್ ಬಿಡುಗಡೆ
Published on

ಪ್ರಮುಖ ಮುಖ್ಯಾಂಶಗಳು

  • ನಾಳೆ (ಮಾ.7) ಧುರಂಧರ್ 2 ಸಿನಿಮಾದ ಟ್ರೇಲರ್ ಬಿಡುಗಡೆ
  • ಬೆಳಿಗ್ಗೆ 11.01 ನಿಮಿಷಕ್ಕೆ ಟ್ರೇಲರ್​ ರೀಲೀಸ್​
  • ರಣವೀರ್​ ನಟನೆಯ ಆದಿತ್ಯ ಧರ್​ ನಿರ್ದೇಶನದ ಸಿನಿಮಾ ಧುರಂಧರ್ 2
ಬಾಲಿವುಡ್​: ರಣವೀರ್​ ಸಿಂಗ್​ ಅಭಿನಯದ ಹಾಗೂ ಆದಿತ್ಯ ಧರ್​ ನಿರ್ದೇಶನದ ಬಹು ನೀರಿಕ್ಷಿತ ಧುರಂಧರ್​ 2 (Dhurandhar 2) ಸಿನಿಮಾ ಮಾರ್ಚ್​ 19 ರಂದು ಬಿಡುಗಡೆಯಾಗಲಿದ್ದು, ಈ ಚಿತ್ರದ ಟ್ರೇಲರ್​ ನಾಳೆ (ಮಾ.7) ಕ್ಕೆ ಬಿಡುಗಡೆಯಾಗಲಿದೆ.
ಈ ಸಿನಿಮಾದ ಟ್ರೇಲರ್​ ಹೋಳಿ ದಿನ ಬಿಡುಗಡೆಯಾಗಲಿದೆ ಎಂಬ ವದಂತಿ ಹಬ್ಬಿತ್ತು, ಆದರೆ ಈ ಕುರಿತು ಸಿನಿಮಾದ ತಂಡ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಈಗ ಸಿನಿಮಾದ ಟ್ರೇಲರ್​ ಬಗ್ಗೆ ರಣವೀರ್​ ಸಿಂಗ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಟ್ರೇಲರ್​ ಮಾರ್ಚ್​ 7 ಕ್ಕೆ ಬೆಳಿಗ್ಗೆ 11.01 ನಿಮಿಷಕ್ಕೆ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಹೊಸ ಪೋಸ್ಟರ್​ ಬಿಡುಗಡೆ

ಟ್ರೇಲರ್​ ಬಗ್ಗೆ ಮಾಹಿತಿ ಹಂಚಿಕೊಳ್ಳಲು ನೂತನ ಪೋಸ್ಟರ್​​ನ್ನು ಬಳಸಲಾಗಿದ್ದು, ಈ ಪೋಸ್ಟರ್​ನಲ್ಲಿ ಸಿನಿಮಾದ ಮುಖ್ಯ ಪಾತ್ರವಾದ ಹಮಜಾ ಅಲಿ ಮಜಾರಿ (ರಣವೀರ್​ ಸಿಂಗ್​) ಪಿಸ್ತೂಲನ್ನು ಹಿಡಿದು ನಿಂತಿರುವುದನ್ನು ನೋಡಬಹುದಾಗಿದೆ. ಈ ಟ್ರೇಲರ್​ ಮಾರ್ಚ್​ 7 ರಂದು ಹಿಂದಿ, ತೆಲಗು, ಮಳಿಯಾಳಂ, ಕನ್ನಡ ಹಾಗೂ ತಮಿಳು ಭಾಷಡಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಭಿಮಾನಿಗಳು ಏನಂತಾರೆ

ಸಿನಿಮಾನದ ಟ್ರೇಲರ್​ ಯಾವಾಗ ಮತ್ತು ಎಷ್ಟು ಗಂಟೆಗೆ ಬಿಡುಗಡೆಯಾಗಲಿದೆ ಎಂದು ತಿಳಿದ ಕೂಡಲೇ ಸಿನಿ ಪ್ರೇಕ್ಷಕರ ಖುಷಿಯ ಪಾರವೇ ಇಲ್ಲವೆಂಬತ್ತಾಗಿದೆ. ಒಬ್ಬ ಅಭಿಮಾನಿ 2,000 ಕೋಟಿ ಲೋಡಿಂಗ್​ ಎಂದು ಬರೆದರೆ, ಬಾಲಿವುಡ್​ನ ಎಲ್ಲಾ ದಾಖಲೆಗಳು ಧೂಳಿಪಟವಾಗಲಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಮತ್ತೊಬ್ಬರು ನಾಳೆ ಯೂಟ್ಯೂಬ್​ ಕ್ರಾಶ್​ ಆಗೋದು ಟ್ಯಾರಂಟಿ ಎಂದು ಭವಿಷ್ಯ ನುಡಿದಿದ್ದಾರೆ.

ಧುರಂಧರ್​ ಬಗ್ಗೆ

ಧುರಂಧರ್​ ಇದೊಂದು ಸ್ಪೈ-ತ್ರಿಲ್ಲರ್​ ಸಿನಿಮಾವಾಗಿದ್ದು, ಪಾಕಿಸ್ತಾನದಲ್ಲಿ ಭಾರತೀಯ ಗೂಢಚರ ಹೇಗೆ ಕೆಲಸ ಮಾಡುತ್ತಾನೆ ಎನ್ನುವುದೇ ಈ ಸಿನಿಮಾದ ಕಥಾ ವಸ್ತುವಾಗಿದೆ. ಈ ಸಿನಿಮಾದ ಮೊದಲ ಭಾಗವು 2025 ರ ಡಿಸೆಂಬರ್​ನಲ್ಲಿ ತೆರೆಕಂಡು ಸುಮಾರು 1,000 ಕೋಟಿ ಕಲೆಕ್ಷನ್​ ಮಾಡಿತ್ತು.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ಅಕ್ಷನ್​ ಖನ್ನಾ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಸಂಜಯ್​ ದತ್ತ್, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಉರಿ ಖ್ಯಾತಿಯ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net