ಧರ್ಮೇಂದ್ರ ಪ್ರಧಾನ್​ ಕೆಳಗಿಳಿಯಬೇಕು! ಇಲ್ಲವೇ, ಮತ್ತೊಬ್ಬರ ರಾಜೀನಾಮೆ ಕೇಳೋದು ಖಚಿತ: ಅಭಿಜಿತ್ ದೀಪ್ಕೆ ಸವಾಲಿನ ಮಾತು​

ಧರ್ಮೇಂದ್ರ ಪ್ರಧಾನ್​ ಕೆಳಗಿಳಿಯಬೇಕು ಎಂದು ಸಿಜೆಪಿ ಪಟ್ಟು
ಧರ್ಮೇಂದ್ರ ಪ್ರಧಾನ್​ ಕೆಳಗಿಳಿಯಬೇಕು ಎಂದು ಸಿಜೆಪಿ ಪಟ್ಟು
Published on

ಪ್ರಮುಖ ಮುಖ್ಯಾಂಶಗಳು

  • ಧರ್ಮೇಂದ್ರ ಪ್ರಧಾನ್​ರನ್ನು ಕೆಳಗಿಳಿಸುವುದು ಕೇಂದ್ರ ಸರ್ಕಾರದ ಹೊಣೆ
  • ನಮ್ಮ ಬೇಡಿಕೆ ಈಡೇರದಿದ್ದರೆ ಮತ್ತೊಬ್ಬರ ರಾಜೀನಾಮೆಗೆ ಪಟ್ಟು
  • ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಸವಾಲಿನ ಮಾತು
ನವದೆಹಲಿ: ಪ್ರಸ್ತುತ, ಜಂತರ್ ಮಂತರ್​ನಲ್ಲಿ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿರುವ ಸಿಜೆಪಿ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಕೇಂದ್ರ ಶಿಕ್ಷಣ ಸಚಿವ ಸ್ಥಾನದಿಂದ ಧರ್ಮೇಂದ್ರ ಪ್ರಧಾನ್ ಅವರನ್ನು ಕೆಳಗಿಳಿಸುವುದು ಕೇಂದ್ರ ಸರ್ಕಾರದ ಹೊಣೆ ಎಂದು ಹೇಳಿದ್ದಾರೆ.
ಪ್ರಧಾನ್​ ರಾಜೀನಾಮೆ ಬದಲಿಗೆ ಕಚೇರಿಯಲ್ಲೇ ಮುಂದುವರಿದರೆ ಖಂಡಿತ ದೇಶವ್ಯಾಪಿ ಇನ್ನೂ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಆತ್ಮಹತ್ಯೆ ಮಾಡಿಕೊಂಡ ನೀಟ್​ ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ಸರ್ಕಾರ 1 ಕೋಟಿ ರೂ. ಪರಿಹಾರವನ್ನು ಕೊಡಬೇಕು. ನಮ್ಮ ಮೊದಲ ಬೇಡಿಕೆ ಸಚಿವರ ರಾಜೀನಾಮೆಯಾದರೆ, ಇದು ಎರಡನೇ ಪ್ರಮುಖ ಡಿಮಾಂಡ್ ಎಂದರು. ​
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸರ್ಕಾರದ ಹಿತದೃಷ್ಟಿ. ನಾವು ಕೇಳಿದ್ದನ್ನು ಈಡೇರಿಸದಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಪಟ್ಟು ಹಿಡಿಯುತ್ತೇವೆ. ಪ್ರಧಾನ್ ಅವರ ತಮ್ಮ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡದಿದ್ದರೆ, ದೇಶಾದ್ಯಂತ ಪ್ರತಿಭಟನೆಗಳು ಜೋರಾಗಲಿವೆ. ಹೋರಾಟವನ್ನು ಯಾವುದೇ ಕಾರಣಕ್ಕೂ ಕೈಬಿಡುವ ಮಾತೇ ಇಲ್ಲ ಎಂದು ಹೇಳಿದ್ದಾರೆ. ದೀಪ್ಕೆ ಅವರ ಈ ಮಾತುಗಳು, ಪ್ರಧಾನ್​ ಗುಡಬೈ ಸದ್ಯ ದೂರದ ಮಾತು ಎಂಬ ಸರ್ಕಾರದ ಮೂಲಗಳ ಬೆನ್ನಲ್ಲೇ ಹೊರ ಬಂದಿರುವುದು ಗಮನಾರ್ಹ,(ಏಜೆನ್ಸೀಸ್). .
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net