ದೇವರ ಪಲ್ಲಕಿ ಹೊತ್ತು ಅಗ್ನಿಕುಂಡ ಹಾಯುವಾಗ ಆಯ ತಪ್ಪಿ ಬಿದ್ದ ಭಕ್ತರು; ಏಳು ಭಕ್ತರಿಗೆ ಗಂಭೀರ ಗಾಯ | fire pit

ಘಟನೆಯ ಸ್ಥಳ
ಘಟನೆಯ ಸ್ಥಳ
Published on
ಹೈದರಾಬಾದ್: ತೆಲಂಗಾಣದ ನಲ್ಗೊಂಡ ಜಿಲ್ಲೆಯ ವೇಮುಲಪಲ್ಲಿ ಮಂಡಲ ಆಮನಗಲ್ ಗ್ರಾ,ಮದಲ್ಲಿ ಶ್ರೀ ಪಾರ್ವತಿ ರಾಮಲಿಂಗೇಶ್ವರ ಸ್ವಾಮಿ ಜಾತ್ರೆ ವೇಳೆ ಪಲ್ಲಕಿ ಹೊತ್ತು ಅಗ್ನಿಕುಂಡ ಹಾಯುವಾಗ ಆಯತಪ್ಪಿ ಬಿದ್ದು, ಏಳು ಭಕ್ತರು ಬೆಂಕಿಯಿಂದ ಗಂಭೀರ ಗಾಯಗೊಂಡಿದ್ದಾರೆ ಎಂದು ಗುರುವಾರ(ಮಾ. 05) ವರದಿಯಾಗಿದೆ.
ಬುಧವಾರ ಮುಂಜಾನೆ ರಥೋತ್ಸವದ ಸಂದರ್ಭದಲ್ಲಿ ದೇವರ ಪಲ್ಲಕ್ಕಿಯನ್ನು ಪವಿತ್ರ ಅಗ್ನಿಕುಂಡದ ಮೂಲಕ ಹೊತ್ತೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆಚರಣೆಯನ್ನು ನೋಡಲು ದೊಡ್ಡ ಜನಸಮೂಹ ಜಮಾಯಿಸುತ್ತಿದ್ದಂತೆ, ಭಕ್ತರ ನಡುವೆ ಹಠಾತ್ ನೂಕು ನುಗ್ಗಲು ಉಂಟಾಗಿ ಕೆಲವು ಭಕ್ತರು ಉರಿಯುತ್ತಿರುವ ಕೆಂಡದಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.
ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಿದ್ದಿದ್ದ ಭಕ್ತರನ್ನು ಕೆಂಡದಿಂದ ಹೊರತೆಗೆದು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಗಾಯಾಳುಗಳನ್ನು ಉನ್ನತಮಟ್ಟದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net