ದೆಹಲಿ ಖಲಿಸ್ತಾನ್ ಆಗಲಿದೆ; 10 ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿದ ದುಷ್ಕರ್ಮಿಗಳು; ವಿದ್ಯಾರ್ಥಿಗಳು ಸ್ಥಳಾಂತರ| bomb threat

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ದೆಹಲಿಯಲ್ಲಿನ 10 ಪ್ರತಿಷ್ಠಿತ ಶಾಲೆಗಳಿಗೆ ದುಷ್ಕರ್ಮಿಗಳಿಂದ ಇಂದು(ಫೆ. 09) ಬಾಂಬ್ ಬೆದರಿಕೆ ಇ-ಮೇಲ್​ಗಳು ಬಂದಿದ್ದು, ಎಲ್ಲಾ ಶಾಲೆಗಳಿಗೆ ಭದ್ರತಾ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಇ-ಮೇಲ್​ನಲ್ಲಿ ಮುಂದೆ ದೆಹಲಿ ಖಲಿಸ್ತಾನವಾಗಲಿದೆ ಎಂದು ಬರೆದಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಈ ಕುರಿತು ಮಾಹಿತಿ ನೀಡಿರುವ ಅಗ್ನಿ ಶಾಮಕ ದಳ ಇಲಾಖೆ, ಇಂದು ಒಟ್ಟು 10 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಅಗ್ನಿಶಾಮಕ ದಳದ ತಂಡಗಳು ತಕ್ಷಣ ಆವರಣಕ್ಕೆ ತಲುಪಿದವು. ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದೆ.
ಬೆಳಗ್ಗೆ 7.50ರ ಸುಮಾರಿಗೆ ದೆಹಲಿ ಕಂಟೋನ್ಮೆಂಟ್‌ನ ಲೊರೆಟೊ ಕಾನ್ವೆಂಟ್ ಶಾಲೆ, ದಕ್ಷಿಣ ದೆಹಲಿಯ ಶ್ರೀನಿವಾಸಪುರಿ ಕೇಂಬ್ರಿಡ್ಜ್ ಶಾಲೆ, ವಾಯುವ್ಯ ದೆಹಲಿಯ ರೋಹಿಣಿಯ ವೆಂಕಟೇಶ್ವರ ಶಾಲೆ, ರೋಹಿಣಿಯ ಸಿಎಂ ಶಾಲೆ, ಬಾಲ ಭಾರತಿ ಶಾಲೆ, ದಕ್ಷಿಣ ದೆಹಲಿಯ ಕೇಂಬ್ರಿಡ್ಜ್ ಶಾಲೆ, ನ್ಯೂ ಫ್ರೆಂಡ್ಸ್ ಕಾಲೋನಿ, ದಕ್ಷಿಣ ದೆಹಲಿಯ ಸಾದಿಕ್ ನಗರದ ದಿ ಇಂಡಿಯನ್ ಸ್ಕೂಲ್ ಹಾಗೂ ಐಎನ್‌ಎಯ ಡಿಟಿಎ ಶಾಲೆಗಳಿಗೆ ಇ-ಮೇಲ್ ಬಂದಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ಬಾಂಬ್ ಸ್ಕ್ವಾಡ್, ವಿಲೇವಾರಿ ದಳ, ಶ್ವಾನದಳ ತಂಡ ಶೋಧ ನಡೆಸುತ್ತಿವೆ. ಆದ್ಯಾಗ್ಯೂ ಶೋಧದ ಸಮಯದಲ್ಲಿ ಯಾವುದೇ ಅನುಮಾನಸ್ಪದ ವಸ್ತುಗಳು ಕಂಡುಬಂದಿಲ್ಲ.
ಶಾಲೆಗಳಿಗೆ ಬಂದ ಇ-ಮೇಲ್ ಒಂದರ ಸ್ಕ್ರೀನ್​ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ದೆಹಲಿ ಖಲಿಸ್ತಾನ್ ಆಗಲಿದೆ. ಅಫ್ಜಲ್ ಗುರುವಿನ ನೆನಪಿಗಾಗಿ ಎಂದು ಬರೆಯಲಾಗಿದೆ. ಮುಂದುವರೆದು ಫೆ. 13ರ ಮಧ್ಯಾಹ್ನ 1.11ಕ್ಕೆ ಸಂಸತ್​ನಲ್ಲಿ ಸ್ಫೋಟವಾಗಲಿದೆ ಎಂದು ಬೆದರಿಕೆ ಹಾಕಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net