2020 ಜೂನ್ನಲ್ಲಿ ಲಡಾಖ್ನಲ್ಲಿ ನಡೆದ ಭಾರತ ಮತ್ತು ಚೀನಾ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರಾವಣೆ ಅವರ ಅಪ್ರಕಟಿತ ಪುಸ್ತಕದ ಆಯ್ದ ಭಾಗವನ್ನು ರಾಹುಲ್ ಗಾಂಧಿ ಉಲ್ಲೇಖಿಸಲು ಪ್ರಯತ್ನಿಸಿದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಅನೇಕ ಬಿಜೆಪಿ ಸಚಿವರು ಆಕ್ಷೇಪಿಸಿದರು. ಸದನದ ನಿಯಮದ ಪ್ರಕಾರ ಅಪ್ರಕಟಿತವಾದ ಪುಸ್ತಕವನ್ನು ಉಲ್ಲೇಖಿಸಲಾಗಲ್ಲ ಎಂದಿದ್ದರು.