ಪ್ರತಿಭಟನೆಯನ್ನು ಕೇವಲ ಆನ್‌ಲೈನ್‌ಗೆ ಸೀಮಿತಗೊಳಿಸದ ಅಭಿಜಿತ್ ದಿಪ್ಕೆ, ಈಗ ನೇರವಾಗಿ ಕಣಕ್ಕಿಳಿಯಲು ಅಮೆರಿಕದಿಂದ ಭಾರತಕ್ಕೆ ವಿಮಾನ ಹತ್ತಿದ್ದಾನೆ. ಶುಕ್ರವಾರ (ಜೂ.5) ಬೆಳಗ್ಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಾಕಿರುವ ಆತ, ಭಾರತಕ್ಕೆ ಮರಳುತ್ತಿದ್ದೇನೆ, ನನ್ನ ಹಣೆಬರಹವನ್ನು ದೇಶದ ಸಂವಿಧಾನದ ಕೈಯಲ್ಲಿ ಇಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾನೆ.