ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ: ಮಹಿಳೆ ಸೇರಿ ಮೂವರು ಬಲಿ; 7 ಮನೆಗಳಿಗೆ ಬೆಂಕಿ: ಕಠಿಣ ಕ್ರಮ ಕೈಗೊಳ್ಳುದಾಗಿ ಡಿಸಿಎಂ ವಾಗ್ದಾನ! Manipur Violence

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಜನಾಂಗೀಯ ಹಿಂಸಾಚಾರ
ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಜನಾಂಗೀಯ ಹಿಂಸಾಚಾರ
Published on

ಪ್ರಮುಖ ಮುಖ್ಯಾಂಶಗಳು

  • ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಜನಾಂಗೀಯ ಹಿಂಸಾಚಾರ
  • ಕಾಂಗ್ಪೋಪಿ ಜಿಲ್ಲೆಯಲ್ಲಿ ನಡೆದ ಭೀಕರ ಗುಂಡಿನ ದಾಳಿಗೆ ಮಹಿಳೆ ಸೇರಿ ಮೂವರು ಬಲಿ, 7 ಮನೆಗಳು ಭಸ್ಮ
  • ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ ಡಿಸಿಎಂ ನೆಮ್ಚಾ ಕಿಪ್ಗೆನ್
ಮಣಿಪುರ: ಕಳೆದ ಕೆಲ ವರ್ಷಗಳಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ (Manipur Violence) ಮುಂದುವರೆಯುತ್ತಿದೆ. ಕೆಲ ಸಮಯದ ಕಾಲ ಸ್ತಬ್ದವಾಗಿದ್ದ ಈಶಾನ್ಯ ಭಾರತ ರಾಜ್ಯದಲ್ಲಿ ಮತ್ತೆ ನೆತ್ತರ ನದಿ ಹಿರಿದಿದೆ. ಶುಕ್ರವಾರ (ಜೂ.5) ಮಣಿಪುರದ ಕಾಂಗ್ಪೋಪಿ ಜಿಲ್ಲೆಯಲ್ಲಿ ಬೆಳ್ಳಿಗ್ಗೆ ಗುಂಡಿನ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಮಹಿಳೆ ಸೇರಿ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಎರಡು ವಿರೋಧಿ ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಗ್ರಾಮಸ್ಥರು ರಕ್ಷಣೆಗೆಂದು ತಮ್ಮ ಮನೆಯತ್ತ ಓಡುತ್ತಿದ್ದಾಗ ಗುಂಡು ತಗುಲಿ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ದುರ್ದೈವಿಗಳನ್ನು ಲೆಟ್ಖೋಂಗಮ್ ಹಾಕಿಪ್, ತಿನ್ಮೇರಿ ಹಾಕಿಪ್ ಮತ್ತು ಜಂಗ್ಮಿನ್ಲಾಲ್ ಹಾಕಿಪ್ ಎಂದು ಗುರುತಿಸಲಾಗಿದ್ದು, ಗುಂಡಿನ ದಾಳಿ ಜೊತೆಗೆ 7 ಮನೆಗಳಿಗೆ ಬೆಂಕಿಯನ್ನು ಹಚ್ಚಲಾಗಿದೆ ಎಂದು ತಿಳಿದು ಬಂದಿದೆ.
ಕಠಿಣ ಕ್ರಮ ಕೈಗೊಳ್ಳುತ್ತೇವೆ: ಡಿಸಿಎಂ
ಸಾರ್ವಜನಿಕರ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಮಣಿಪುರದ ಉಪ ಮುಖ್ಯಮಂತ್ರಿ ನೆಮ್ಚಾ ಕಿಪ್ಗೆನ್ ಈ ದಾಳಿ ನಡೆಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಎರಡು ಜನಾಂಗಗಳ ನಡುವೆ ಭಿನ್ನಾಭಿಪ್ರಾಯ ಇರುವುದು ನಿಜ, ಅದನ್ನು ಶಾಂತಿ ಮಾತುಕತೆ ಮೂಲಕ ತಿಳಿ ಗೊಳಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಶಾಂತಿ ಸ್ಥಾಪನೆಯನ್ನು ಹಾಳು ಮಾಡಲು ಮುಂದಾಗುವವರ ಮೇಲೆ ಕಠಿಣ ಕ್ರಮವನ್ನು ತೆಗೆದು ಕೊಳ್ಳುತ್ತೆವೆಂದು ಡಿಸಿಎಂ ತಿಳಿಸಿದ್ದಾರೆ.

ಮಣಿಪುರ ಜನಾಂಗೀಯ ಹಿಂಸಾಚಾರ

ಮಣಿಪುರದಲ್ಲಿ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವು ಪ್ರಮುಖವಾಗಿ ಅಲ್ಲಿನ ಬಹುಸಂಖ್ಯಾತ ಮೈತೇಯಿ (Meitei) ಮತ್ತು ಅಲ್ಪಸಂಖ್ಯಾತ ಕುಕಿ-ಝೋ (Kuki-Zo) ಸಮುದಾಯಗಳ ನಡುವಿನ ತೀವ್ರ ಭಿನ್ನಾಭಿಪ್ರಾಯದ ಫಲವಾಗಿದೆ.
ಇಂಫಾಲ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುವ ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ST) ಸ್ಥಾನಮಾನ ನೀಡುವ ಕುರಿತು ಕಾನೂನಾತ್ಮಕ ಚರ್ಚೆಗಳು ಆರಂಭವಾದಾಗ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಕುಕಿ ಮತ್ತು ನಾಗಾ ಸಮುದಾಯಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದವು. ಮೈತೇಯಿ ಜನರಿಗೂ ಎಸ್‌ಟಿ ಸ್ಥಾನಮಾನ ಸಿಕ್ಕರೆ ತಮ್ಮ ಭೂಮಿ, ಉದ್ಯೋಗ ಮತ್ತು ಸಾಂಪ್ರದಾಯಿಕ ಹಕ್ಕುಗಳಿಗೆ ಧಕ್ಕೆಯಾಗಬಹುದು ಎಂಬ ಆತಂಕ ಕುಕಿ ಸಮುದಾಯದ್ದಾಗಿತ್ತು. ಈ ಹಿನ್ನೆಲೆಯಲ್ಲಿ 2023 ರ ಮೇ ತಿಂಗಳಲ್ಲಿ ಆರಂಭವಾದ ಪ್ರತಿಭಟನೆಗಳು ಸಶಸ್ತ್ರ ಜನಾಂಗೀಯ ಸಂಘರ್ಷವಾಗಿ ರೂಪಾಂತರಗೊಂಡು, ರಾಜ್ಯದಲ್ಲಿ ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಕಾರಣವಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net