ದೆಹಲಿ ಕಾರು ಸ್ಫೋಟ; ಉತ್ತರಾಖಂಡದಲ್ಲಿ ಮತ್ತಿಬ್ಬರನ್ನು ಬಂಧಿಸಿದ ಎನ್​ಐಎ | arrest

ದೆಹಲಿ ಕಾರು ಸ್ಫೋಟ ಸ್ಥಳ
ದೆಹಲಿ ಕಾರು ಸ್ಫೋಟ ಸ್ಥಳ
Published on
ಹಲ್ದ್ವಾನಿ: ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಮತ್ತಿಬ್ಬರನ್ನು ಬಂಧಿಸಿದೆ(arrest) ಎಂದು ಶನಿವಾರ(ನ. 29) ವರದಿಯಾಗಿದೆ.
ಸ್ಫೋಟದ ಪ್ರಮುಖ ಆರೋಪಿ ಡಾ. ಉಮರ್ ನಬಿಯ ಮೊಬೈಲ್ ಸಂಖ್ಯೆಯ ಕರೆ ವಿವರಗಳು ಮತ್ತು ಅದರ ಆಧಾರದ ಮೇಲೆ ಎನ್​ಐಅ ಹಲ್ದ್ವಾನಿಯಯಲ್ಲಿ ಬಿಲಾಲಿ ಮಸೀದಿಯ ಇಮಾಮ್ ಮೊಹಮ್ಮದ್ ಆಸಿಫ್ ಮತ್ತು ಎಲೆಕ್ಟ್ರಿಷಿಯನ್ ನಜರ್ ಕಮಲ್ ಅವರನ್ನು ಶುಕ್ರವಾರ ರಾತ್ರಿ ದೆಹಲಿ ಮತ್ತು ಹಲ್ದ್ವಾನಿ ಪೊಲೀಸರ ಸಹಾಯದಿಂದ ಬಂಧಿಸಿ, ದೆಹಲಿಗೆ ಕರೆತಂದಿದೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಹಲ್ದ್ವಾನಿ ನಗರ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಕಟ್ಯಾಲ್, ಲಾಲ್ ಕುವಾನ್ ಉಪ ಪೊಲೀಸ್ ವರಿಷ್ಠಾಧಿಕಾರಿ ದೀಪ್ಶಿಖಾ ಅಗರ್ವಾಲ್ ನೇತೃತ್ವದಲ್ಲಿ ಹಲವಾರು ಪೊಲೀಸ್ ಠಾಣೆಗಳಿಂದ ದೊಡ್ಡ ಪಡೆ ಬನ್‌ಭೂಲ್‌ಪುರ ಪ್ರದೇಶದಲ್ಲಿ ಆಗಮಿಸಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದೆ. ಬಿಲಾಲಿ ಮಸೀದಿ ಮತ್ತು ಇಮಾಮ್ ಮನೆಯ ಸುತ್ತಲೂ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿಲಾಗಿದೆ ಎಂದು ಹೇಳಿದ್ದಾರೆ.
ನ. 10ರಂದು ದೆಹಲಿಯ ಕೆಂಪು ಕೋಟೆ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರೊಂದರ ಮೇಲೆ ತೀವ್ರ ತೀವ್ರತೆಯ ಸ್ಫೋಟ ಸಂಭವಿಸಿ 15 ಜನರು ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net