ಧುರಂಧರ್ ಮೇಲೆ ದಾವೂದ್​ ಗರಂ: ಮುಂಬೈನಲ್ಲಿ ಡಿ-ಕಂಪನಿ ಮರುಸ್ಥಾಪನೆಗೆ ಕಸರತ್ತು; ಪಾಕ್​ ಐಎಸ್​ಐನಿಂದ ಫುಲ್​ ಸಪೋರ್ಟ್​! Dawood Ibrahim Angry On Dhurandhar

ದಾವೂದ್​ನನ್ನು ರೋಗಗ್ರಸ್ಥನಾಗಿ ತೋರಿಸಿದ ಧುರಂಧರ್​ ಸಿನಿಮಾ
ದಾವೂದ್​ನನ್ನು ರೋಗಗ್ರಸ್ಥನಾಗಿ ತೋರಿಸಿದ ಧುರಂಧರ್​ ಸಿನಿಮಾ
Published on

ಪ್ರಮುಖ ಮುಖ್ಯಾಂಶಗಳು

  • ದಾವೂದ್​ನನ್ನು ರೋಗಗ್ರಸ್ಥನಾಗಿ ತೋರಿಸಿದ ಧುರಂಧರ್​ ಸಿನಿಮಾ
  • ಸಿನಿಮಾ ಮೇಲೆ ಕೋಪಿಸಿಕೊಂಡಿರುವ ಮಾಜಿ ಡಾನ್​
  • ಮುಂಬೈನಲ್ಲಿ ಡಿ-ಕಂಪನಿ ಮರುಸ್ಥಾಪನೆಗೆ ಫ್ಲಾನ್​
  • ಈ ಯೋಜನೆಗೆ ಪಾಕಿಸ್ತಾನದ ಐಎಸ್​ಐನಿಂದ ಫುಲ್​ ಸಪೋರ್ಟ್​
ಮುಂಬೈ: ರಣವೀರ್​ ಸಿಂಗ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಹಾಗೂ ಆದಿತ್ಯ ಧರ್ ನಿರ್ದೇಶನದ ಧುರಂಧರ್​ ಸಿನಿಮಾ ತೆರೆಕಂಡು ಭಾರತೀತ ಸಿನಿಮಾರಂಗದಲ್ಲಿ ನೂತನ ಮೈಲಿಗಲ್ಲನ್ನು ಸ್ಥಾಪಿಸಿತು.
ಈ ಸಿನಿಮಾ ಬಿಡುಗಡೆಯಾದಾಗನಿಂದ ಇದೊಂದು ಪ್ರೊಪಗಾಂಡಾ, ಬಿಜೆಪಿ ಪ್ರಾಯೋಜಿತ ಸಿನಿಮಾ ಎಂಬೆಲ್ಲಾ ಆರೋಪಗಳು ಕೇಳಿ ಬಂದಿದ್ದವು. ಆದರೆ ಈಗ ಈ ಸಿನಿಮಾ ಮುಂಬೈ ಭೂಗತ ಜಗತ್ತಿನ ಮಾಜಿ ಡಾನ್​ನ (Dawood Ibrahim Angry On Dhurandhar) ಕೋಪಕ್ಕೆ ಕಾರಣವಾಗಿದೆ ಎಂಬ ಮಾಹಿತಿ ಹೊರಬಿದಿದ್ದೆ.

ಧುರಂಧರ್​ ಮೇಲೆ ದಾವೂದ್ ಗರಂ!

ಧುರಂಧರ್​ ಸಿನಿಮಾದಲ್ಲಿ ಬಡೇ ಸಾಬ್​ ಎಂಬ ಪಾತ್ರವನ್ನು ಬಾಂಬೆ (ಇಂದಿನ ಮುಂಬೈ) ಭೂಗತ ಜಗತ್ತಿನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ದಾವೂದ್​ ಇಬ್ರಾಹಿಂನನ್ನು ಆಧರಿಸಿ ತೆರೆ ಮೇಲೆ ತೋರಿಸಲಾಗಿತ್ತು.
ಈ ಮೊದಲು ಸಹ ದಾವೂದ್​ನ ಪಾತ್ರಗಳನ್ನು ಬಾಲಿವುಡ್​ನ ಸಿನಿಮಾಗಳಲ್ಲಿ ಟೆರರ್​, ಹ್ಯಾಂಡ್​ಸಮ್​ ಮತ್ತು ಅತ್ಯಂತ ಪ್ರಭಾವಿ ವ್ಯಕ್ತಿ ರೀತಿ ತೋರಿಸಿದ್ದರೆ, ಈ ಧುರಂಧರ್​ ಸಿನಿಮಾದಲ್ಲಿ ದಾವೂದ್​ ಇಬ್ರಾಹಿಂ ರೋಗಗ್ರಸ್ಥನಾಗಿ ಹಾಸಿಗೆ ಹಿಡಿದು ಮಲಗಿರುವ ರೀತಿ ತೋರಿಸಿದ್ದಾರೆ.
ತನ್ನ ಪಾತ್ರವನ್ನು ಸಿನಿಮಾದಲ್ಲಿ ಪುಕ್ಕಲನ ರೀತಿ ತೋರಿಸಿದ್ದರಿಂದ ಡಾನ್​ ಕುಪಿತನಾಗಿದ್ದು, ಮುಂಬೈನಲ್ಲಿ ತನ್ನ ಡಿ-ಕಂಪನಿ ನೆಟ್​ವರ್ಕನ್ನು ಪುನಃ ಸ್ಥಾಪಿಸಲು ಮುಂದಾಗಿದ್ದಾನೆಂದು ಹೇಳಲಾಗುತ್ತಿದೆ.
ನಾನು ಈಗಲೂ ಮೊದಲಿನಂತೆ ಸಶಕ್ತನಾಗಿದ್ದೆನೆ, ನನ್ನ ಸಾಮರ್ಥ್ಯ ಈಗಲೂ ಹಿಂದಿನಂತೆಯೇ ಇದೆ, ಈಗಲೂ ಮುಂಬೈನಲ್ಲಿ ತನ್ನ ಹಿಡಿತವಿದೆ ಎಂದು ತೋರಿಸಲು ದಾವೂದ್​ ಮುಂದಾಗಿದ್ದಾನೆಂಬ ಮಾಹಿತಿ ದೊರೆತಿದೆ.

ಭೂಗತ ಲೋಕವನ್ನು ಸಕ್ರೀಯಗೊಳಿಸಿ!

ಒಂದು ಸಿನಿಮಾ ಮೂಲಕ ಇಷ್ಟು ವರ್ಷ ಕಾಪಾಡಿಕೊಂಡು ಬಂದಿರುವ ಪ್ರತಿಷ್ಟೆಯನ್ನು ಹಾಳು ಮಾಡಿಕೊಂಡರೆ ಹೇಗೆ ಎಂದು ಯೋಚಿಸಿರುವ ಡಿ-ಗ್ಯಾಂಗ್​ ಮುಂಬೈನಲ್ಲಿ ಹೊಸ-ಹೊಸ ಹುಡುಗರನ್ನು ಹುಡುಕಿ ಮತ್ತೆ ಹಳೆ ಬಾಂಬೆ ಅಂಡರ್​ವರ್ಲ್ಡ್​ನ್ನು ಮರುಸ್ಥಾಪನೆ ಮಾಡಲು ಮುಂದಾಗಿದ್ದಾರೆ.
ಈ ಕೆಲಸಕ್ಕೆ ಪಾಕಿಸ್ತಾನದ ಐಎಸ್​ಐ ಸಹ ಸಹಕಾರ ನೀಡುತ್ತಿದ್ದಾಗಿ ತಿಳಿದು ಬಂದಿದ್ದು, ಇತ್ತೀಚೆಗೆ ದೆಹಲಿ ಪೊಲೀಸರು ಪಾಕಿಸ್ತಾನದ ಜೊತೆ ಸಂಕರ್ಪ ಹೊಂದಿದ್ದ 9 ಜನರನ್ನು ಬಂಧಿಸಿದ್ದರು. ಅವರಿಂದ ಭಾರಿ ಸಂಖ್ಯೆಯ ಶಸ್ತ್ರಾಸ್ತ್ರ ಹಾಗೂ ಸ್ಪೋಟಕಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net