ಅರ್ನಬ್‌ ಆರ್ಭಟಕ್ಕೆ ಧರೆಗುರುಳಿದ ತೆಂಗಿನ ಮರಗಳು: ಜೀವನಕ್ಕೆ ಆಧಾರವಾಗಿದ್ದ ಕಲ್ಪವೃಕ್ಷ ಕಳೆದುಕೊಂಡು ಕಂಗಾಲಾದ ರೈತರು! Cyclone Arnab Damage

Cyclone Arnab Damage
ಅರ್ನಬ್‌ ಆರ್ಭಟಕ್ಕೆ ಆಂಧ್ರ ಪ್ರದೇಶದಲ್ಲಿ ಧರೆಗುರುಳಿದ ತೆಂಗಿನ ಮರಗಳು
Published on: 

ವಿಜಯವಾಡ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತೆಂಗು ಬೆಳೆಗಾರರಿಗೆ ‘ಅರ್ನಬ್‌’ ಚಂಡಮಾರುತ ( Cyclone Arnab Damage ) ಅಪಾರ ಪ್ರಮಾಣದ ಹಾನಿ ಉಂಟುಮಾಡಿದ್ದು, ಚೇತರಿಸಿಕೊಳ್ಳಲಾಗದಷ್ಟು ದೊಡ್ಡ ಹೊಡೆತ ನೀಡಿದೆ.

ಭೀಕರ ಬಿರುಗಾಳಿಯ ಆರ್ಭಟಕ್ಕೆ ವರ್ಷಗಟ್ಟಲೆ ಜತನದಿಂದ ಪೋಷಿಸಿ ಬೆಳೆಸಿದ್ದ ನೂರಾರು ತೆಂಗಿನ ಮರಗಳು ಧರೆಗುರುಳಿವೆ. ಇನ್ನೂ ಕೆಲವು ಮರಗಳ ತೊಂಡೆಗಳು (ಮೇಲ್ಭಾಗ) ಮುರಿದುಬಿದ್ದು ತೆಂಗಿನ ತೋಟಗಳು ಸಂಪೂರ್ಣವಾಗಿ ನಾಶವಾಗಿವೆ. ಕಣ್ಣೆದುರೇ ತಮ್ಮ ಜೀವನದ ಆಧಾರವಾಗಿದ್ದ ಮರಗಳು ಧರೆಗುರುಳಿರುವುದನ್ನು ಕಂಡು ರೈತರು ಕಣ್ಣೀರು ಹಾಕುತ್ತಿದ್ದಾರೆ. ಮೊಗಲ್ತೂರು ಮತ್ತು ನರಸಾಪುರ ಪ್ರದೇಶಗಳಲ್ಲಿ ತೆಂಗಿನ ತೋಟಗಳ ಸ್ಥಿತಿ ತೀರಾ ಶೋಚನೀಯವಾಗಿದೆ.

Also Read
ಪ್ರಿಯಕರನೊಂದಿಗೆ ಪುತ್ರಿ ಎಸ್ಕೇಪ್​: ಅದೇ ನೋವಲ್ಲಿ ತಾಯಿ ಸಾವು, ಬದುಕಿರುವಾಗಲೇ ಮಗಳಿಗೇ ಪಿಂಡಪ್ರದಾನ ಮಾಡಿದ ತಂದೆ! Daughter Eloped
Cyclone Arnab Damage

ಅರ್ನಬ್ ಚಂಡಮಾರುತದ ಭೀಕರ ಪರಿಣಾಮಕ್ಕೆ ಮೊಗಲ್ತೂರು ಹಾಗೂ ನರಸಾಪುರ ಕರಾವಳಿ ತೀರದ ತೆಂಗಿನ ತೋಟಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಗಂಟೆಗೆ ನೂರಾರು ಕಿಲೋಮೀಟರ್ ವೇಗದಲ್ಲಿ ಬೀಸಿದ ಬಿರುಗಾಳಿಗೆ ಸಾಲು ಸಾಲು ಮರಗಳು ಬೇರುಸಹಿತ ಕಿತ್ತುಬಿದ್ದಿವೆ. ಹಲವು ವರ್ಷಗಳಿಂದ ರೆಕ್ಕೆಪುಕ್ಕ ಕಟ್ಟಿ ಕಷ್ಟಪಟ್ಟು ಬೆಳೆಸಿದ ತೋಟಗಳು ಒಂದೇ ಒಂದು ಚಂಡಮಾರುತಕ್ಕೆ ಸರ್ವನಾಶವಾಗಿರುವುದನ್ನು ಕಂಡು ರೈತರು ದಿಕ್ಕುತೋಚದಂತಾಗಿದ್ದಾರೆ. ತೆಂಗಿನ ಮರಗಳನ್ನು ನೆಟ್ಟು ಅವು ಫಲ ಕೊಡುವ ಹಂತಕ್ಕೆ ತರಲು ಹಲವು ವರ್ಷಗಳ ಶ್ರಮ ಹಾಗೂ ಅಪಾರ ಬಂಡವಾಳ ಬೇಕಾಗುತ್ತದೆ. ಆದರೆ, ಈಗ ಎಲ್ಲವೂ ಮಣ್ಣು ಪಾಲಾಗಿದ್ದು, ಕೃಷಿಕರ ಭವಿಷ್ಯವೇ ಕತ್ತಲಿನಲ್ಲಿ ಮುಳುಗಿದೆ.

ಈಗಾಗಲೇ ಗೊಬ್ಬರ, ಕ್ರಿಮಿನಾಶಕ ಮತ್ತು ಕೂಲಿ ಆಳುಗಳ ವೆಚ್ಚ ಹೆಚ್ಚಾಗಿ ಸಾಲಸೋಲ ಮಾಡಿ ಕೃಷಿ ಮಾಡಿದ್ದ ಬೆಳೆಗಾರರಿಗೆ ಈ ಚಂಡಮಾರುತ ಗಾಯದ ಮೇಲೆ ಎಳೆ ಎಳೆದಂತಾಗಿದೆ. ಮರಗಳು ಸಂಪೂರ್ಣವಾಗಿ ಕಿತ್ತುಬಿದ್ದಿರುವುದು ಮಾತ್ರವಲ್ಲದೆ, ಉಳಿದಿರುವ ಮರಗಳ ಮೇಲ್ಭಾಗ ಜಖಂಗೊಂಡಿರುವುದರಿಂದ ಮುಂಬರುವ ವರ್ಷಗಳ ಇಳುವರಿಯ ಮೇಲೆಯೂ ಇದು ಗಂಭೀರ ಪರಿಣಾಮ ಬೀರಲಿದೆ. ಬೆಳೆ ಬಂದು ಆದಾಯ ಕಾಣಬೇಕಿದ್ದ ನಿರ್ಣಾಯಕ ಸಮಯದಲ್ಲಿಯೇ ಈ ನೈಸರ್ಗಿಕ ವಿಕೋಪ ಸಂಭವಿಸಿರುವುದು ತೆಂಗು ಬೆಳೆಗಾರರ ಬೆನ್ನುಮೂಳೆಯನ್ನೇ ಮುರಿದಂತಾಗಿದೆ.

Also Read
ಏನಾಯ್ತು ಭುವಿಗೆ? ಸ್ಟಾರ್​ ಬೌಲರ್​ ವಿರುದ್ಧ ‘1983ರ ವಿಶ್ವಕಪ್ ಹೀರೋ’ ಅಸಮಾಧಾನ..! Bhuvneshwar Kumar
Cyclone Arnab Damage

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸಂತ್ರಸ್ತ ರೈತರು ಒತ್ತಾಯಿಸುತ್ತಿದ್ದಾರೆ. ಚಂಡಮಾರುತದಿಂದ ಆಗಿರುವ ಆಸ್ತಿ ಹಾಗೂ ಬೆಳೆ ನಷ್ಟದ ಸಮಗ್ರ ಸಮೀಕ್ಷೆ ನಡೆಸಿ, ನಷ್ಟಕ್ಕೊಳಗಾದ ಪ್ರತಿಯೊಬ್ಬ ತೆಂಗು ಬೆಳೆಗಾರನಿಗೂ ತಕ್ಷಣವೇ ಸೂಕ್ತ ಪರಿಹಾರ ಧನ ತಲುಪಿಸಬೇಕು ಎಂದು ಮನವಿ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ತೀವ್ರ ಹಾನಿಗೊಳಗಾದ ಮೊಗಲ್ತೂರು ಮತ್ತು ನರಸಾಪುರ ಕರಾವಳಿ ಭಾಗಗಳ ತೋಟಗಳಿಗೆ ಆದ್ಯತೆ ನೀಡಿ, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಆಸರೆಯಾಗಬೇಕಿದೆ, (ಏಜೆನ್ಸೀಸ್).