ಲಖನೌ: ಉತ್ತರ ಪ್ರದೇಶದ ಬಹರೈಚ್‌ನಲ್ಲಿ ನದಿಯ ದಡದಲ್ಲಿ ಮುಗ್ಧ ಬಾಲಕನೊಬ್ಬ ಮುಖ ತೊಳೆದುಕೊಳ್ಳುತ್ತಿದ್ದಾಗ, ದಿಢೀರನೆ ದಾಳಿ ಮಾಡಿದ ಕ್ರೂರ ಮೊಸಳೆಯೊಂದು ( Crocodile ) ಆತನನ್ನು ನೀರಿನ ಆಳಕ್ಕೆ ಎಳೆದೊಯ್ದು ತಿಂದು ಹಾಕಿದ ಆಘಾತಕಾರಿ ಘಟನೆ ನಡೆದಿದೆ. ಕೇವಲ 12 ವರ್ಷದ ಆ ಬಾಲಕ ಭೀಕರ ದುರಂತದ ಸಣ್ಣ ಸುಳಿವೂ ಇಲ್ಲದೆ ನದಿಯ ನೀರನ್ನು ಮುಟ್ಟಿದ ಕೆಲವೇ ಕ್ಷಣಗಳಲ್ಲಿ ಆತನ ಪ್ರಾಣವನ್ನು ಮೊಸಳೆ ಕಸಿದುಕೊಂಡಿದೆ. ಈ ಘಟನೆಗೆ ಸಂಬಂಧಿಸಿದ ಭಯಾನಕ ವಿಡಿಯೋ ವೈರಲ್ ಆಗಿದ್ದು, ಅದನ್ನು ನೋಡಿದ ದೇಶದ ಜನತೆ ಕಂಬನಿ ಮಿಡಿದಿದ್ದಾರೆ.