ಈ ಸುದೀರ್ಘ ಹೋರಾಟದ ಹಾದಿಯಲ್ಲಿ ಅತ್ಯಂತ ಕಠಿಣವಾದ ಸವಾಲು ಎದುರಾಗಿದ್ದು ಬಿಪಿಎಸ್‌ಸಿ ಮುಖ್ಯ ಪರೀಕ್ಷೆಯ ಸಿದ್ಧತೆಯ ಸಮಯದಲ್ಲಿ. ಏಕೆಂದರೆ, ಆ ಸಂದರ್ಭದಲ್ಲಿ ಬಾಬ್ಲಿ ಅವರು ಗರ್ಭಿಣಿಯಾಗಿದ್ದರು. ಒಂದು ಕಡೆ ಕಠಿಣವಾದ ಪೊಲೀಸ್ ಕರ್ತವ್ಯ, ಇನ್ನೊಂದು ಕಡೆ ಗರ್ಭಾವಸ್ಥೆಯ ಆರೋಗ್ಯದ ಕಾಳಜಿ, ಮತ್ತೊಂದೆಡೆ ಪರೀಕ್ಷೆಯ ಬೃಹತ್ ಪಠ್ಯಕ್ರ...ಹೀಗೆ ಮೂರು ಜವಾಬ್ದಾರಿಗಳು ಏಕಕಾಲಕ್ಕೆ ಎದುರಾದರೂ ಬಬ್ಲಿ ಕುಮಾರಿ ಮಾತ್ರ ಎಲ್ಲೂ ಹಿಂದೆ ಸರಿಯಲಿಲ್ಲ. ಕೊನೆಗೆ ನಿಯಮಿತ ಕರ್ತವ್ಯದ ನಡುವೆ ಓದಲು ಸಾಕಷ್ಟು ಸಮಯ ಸಿಗದಿದ್ದಾಗ, ಅವರು ರಜೆ ಪಡೆದು ಪಟನಾಕ್ಕೆ ತೆರಳಿ ಹಗಲಿರುಳು ತೀವ್ರ ಪರಿಶ್ರಮ ಪಟ್ಟರು.