ಶಿವಾಜಿ ಮಹಾರಾಜರ ಬಗ್ಗೆ ವಿವಾದಾತ್ಮಕ ಹೇಳಿಕೆ: ನನ್ನ ಹೇಳಿಕೆಯನ್ನು ತಪ್ಪಾಗಿ ತಿಳಿಯಬೇಡಿ; ಕೊನೆಗೂ ಕ್ಷಮೆ ಕೇಳಿದ ಧೀರೆಂದ್ರ ಶಾಸ್ತ್ರಿ! Dhirendra Shastri

ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದ ಭಾಗೇಶ್ವರ್​ ಧಾಮ್​ ಬಾಬಾ
ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದ ಭಾಗೇಶ್ವರ್​ ಧಾಮ್​ ಬಾಬಾ
Published on

ಪ್ರಮುಖ ಮುಖ್ಯಾಂಶಗಳು

  • ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಲಘವಾಗಿ ಮಾತನಾಡಿದ್ದ ಧೀರೆಂದ್ರ ಶಾಸ್ತ್ರಿ
  • ಹೇಳಿಕೆ ವಿವಾದವಾದ ಬಳಿಕ ಕ್ಷಮೆ ಕೇಳಿದ ಪಿಠಾಧಿಪತಿ
  • ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದ ಭಾಗೇಶ್ವರ್​ ಧಾಮ್​ ಬಾಬಾ
ನಾಗ್ಪುರ್​: ಮರಾಠರ ಆರಾಧ್ಯ ದೈವ ಹಾಗೂ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಭಾಗೇಶ್ವರ ಧಾಮ್​ದ ಪೀಠಾಧಿಪತಿ ಧೀರೆಂದ್ರ ಕೃಷ್ಣ ಶಾಸ್ತ್ರಿ (Dhirendra Shastri) ಲಘವಾಗಿ ಮಾತನಾಡಿದ್ದು, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈಗ ತಮ್ಮ ಹೇಳಿಕೆಗೆ ಪೀಠಾಧಿಪತಿಗಳು ಕ್ಷಮೆ ಕೇಳಿದ್ದಾರೆ.

ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ!

ಶಿವಾಜಿ ಮಹಾರಾಜರು ಹಿಂದುತ್ವ ಮತ್ತು ಹಿಂದೂ ಸ್ವರಾಜ್​ದ ಪ್ರತಿಪಾಲಕರಾಗಿದ್ದು, ಅವರ ಬಗ್ಗೆ ನಕಾರಾತ್ಮಕವಾಗಿ ನಾನು ಮಾತನಾಡಲು ಸಾಧ್ಯವೇ ಇಲ್ಲ. ನಾನು ಮರಾಠ ರಾಜರು ಸಂತರಲ್ಲಿ ಎಷ್ಟು ನಂಬಿಕೆ ಇಟ್ಟಿದ್ದರು ಎನ್ನುವು ದೃಷ್ಟಿಕೋನದಲ್ಲಿ ಮಾತನಾಡಿದ್ದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ, ಆದರೂ ನನ್ನಿಂದ ಬೇಸರ ಉಂಟಾದಲ್ಲಿ ಕ್ಷಮೆಯಿರಲಿ ಎಂದಿದ್ದಾರೆ.
ಧೀರೆಂದ್ರ ಶಾಸ್ತ್ರಿ ಹೇಳಿದ್ದೇನು?
ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಧೀರೆಂದ್ರ ಶಾಸ್ತ್ರಿ, ಛತ್ರಪತಿ ಶಿವಾಜಿ ಮಹಾರಾಜರು ನಿರಂತರ ಯುದ್ಧಗಳನ್ನು ಮಾಡಿ ದಣಿದಿದ್ದರು. ಹಾಗಾಗಿ ಅವರು ತಮ್ಮ ಕಿರೀಟವನ್ನು ಸಮರ್ಥ ರಾಮದಾಸ ಸ್ವಾಮಿಗಳ ಪಾದದ ಬಳಿ ಇಟ್ಟು, ತಮಗೆ ಇನ್ನು ಯುದ್ಧ ಮಾಡಲು ಆಸಕ್ತಿಯಿಲ್ಲ, ರಾಜ್ಯದ ಉಸ್ತುವಾರಿಯನ್ನು ನೀವೇ ವಹಿಸಿಕೊಳ್ಳಿ ಎಂದು ವಿನಂತಿಸಿದ್ದರು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಮರಾಠಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಇತಿಹಾಸವನ್ನು ತಿರುಚಲಾಗುತ್ತಿದೆ, ನಮ್ಮ ರಾಜ ಎಂದೂ ದಣಿದಿರಲಿಲ್ಲ ಎಂದು ಜನ ಕಿಡಿಕಾರುತ್ತಿದ್ದಾರೆ.

ಧೀರೆಂದ್ರ ಶಾಸ್ತ್ರಿಗೆ ರಿತೇಶ್​ ತರಾಟೆ!

ಧೀರೆಂದ್ರ ಶಾಸ್ತ್ರಿಯ ಈ ಹೇಳಿಕೆ ವೈರಲ್​ ಆಗುತ್ತಿದ್ದಂತೆ ಹಲವಾರು ಜನ ತರಾಟೆ ತೆಗೆದುಕೊಂಡಿದ್ದಾರೆ. ಬಾಲಿವುಡ್​ ನಟ ಹಾಗೂ ರಾಜಾ ಶಿವಾಜಿ ಸಿನಿಮಾದಲ್ಲಿ ನಿರತರಾಗಿರುವ ರಿತೇಶ್​ ದೇಶ್​ಮುಖ್​, ಸಹ್ಯಾದ್ರಿ ಪರ್ವತಗಳಿರುವವರೆಗೆ ಮಹಾರಾಜರ ಹೆಸರು ಅಜರಾಮರ. ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡಬೇಡಿ, ಇಂತಹ ಹೇಳಿಕೆ ನಮಗೆ ತೀವ್ರ ಕೋಪಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net