ಕಾಕ್ರೋಚ್ ಪಾರ್ಟಿ ಅಲ್ಲ ಇದು ಪಾಕಿಸ್ತಾನ್ ಪಾರ್ಟಿ! ಭಾರತದಲ್ಲಿ ಜನ್ಮತಾಳಿದ ಪಕ್ಷಕ್ಕೆ ಶತ್ರುದೇಶದವರೇ ಅತಿಹೆಚ್ಚು ಫಾಲೋವರ್ಸ್​! Cockroach Janata Party Pakistan Link

ಇದು ಕಾಕ್ರೋಚ್​ ಪಾರ್ಟಿಯಲ್ಲ ; ಪಾಕಿಸ್ತಾನ ಪಾರ್ಟಿ ಎಂಬ ಬಿಜೆಪಿ ನಾಯಕ
ಇದು ಕಾಕ್ರೋಚ್​ ಪಾರ್ಟಿಯಲ್ಲ ; ಪಾಕಿಸ್ತಾನ ಪಾರ್ಟಿ ಎಂಬ ಬಿಜೆಪಿ ನಾಯಕ
Published on

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಕಾಕ್ರೋಚ್​ ಜನತಾ ಪಾರ್ಟಿ
  • ಐದೇ ದಿನದಲ್ಲಿ 1.5 ಕೋಟಿ ಫಾಲೋವರ್ಸ್ ಪಡೆದ ಜಿರಳೆ ಪಡೆ
  • ಇದರ ಅರ್ಧದಷ್ಟು ಹಿಂಬಾಲಕರು ಪಾಕಿಸ್ತಾನಿಗಳು ಎಂಬ ಮಾಹಿತಿ ಬಹಿರಂಗ
  • ಇದು ಕಾಕ್ರೋಚ್​ ಪಾರ್ಟಿಯಲ್ಲ ; ಪಾಕಿಸ್ತಾನ ಪಾರ್ಟಿ ಎಂಬ ಬಿಜೆಪಿ ನಾಯಕ
ನವದೆಹಲಿ: ಭಾರತದ ಸೋಷಿಯಲ್ ಮೀಡಿಯಾದಲ್ಲಿ ಕೇವಲ ಐದೇ ದಿನಗಳಲ್ಲಿ ಕೋಟ್ಯಂತರ ಫಾಲೋವರ್ಸ್ ಗಳಿಸಿ, ದೇಶದ ದೊಡ್ಡ ದೊಡ್ಡ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ವಿವಾದಕ್ಕೆ ಈಗ ಇನ್ನೊಂದು ತಿರುವು ಸಿಕ್ಕಿದೆ.
ಒಂದು ಜೋಕ್ ಅಥವಾ ಮೀಮ್ ಪೇಜ್‌ನಂತೆ ಆರಂಭವಾದ ಈ ಜಿರಲೆ ಪಕ್ಷದ ಹಿಂದೆ ಪಾಕಿಸ್ತಾನದ ಕೈವಾಡವಿದೆಯೇ?(Cockroach Janata Party Pakistan Link) ಇಂತದ್ದೊಂದು ಗಂಭೀರ ಮತ್ತು ಶಾಕಿಂಗ್ ಆರೋಪವನ್ನು ದೆಹಲಿಯ ಬಿಜೆಪಿ ನಾಯಕರೊಬ್ಬರು ಮಾಡಿದ್ದಾರೆ.

ಕೇವಲ 5 ದಿನಕ್ಕೆ 1.5 ಕೋಟಿ ಫಾಲೋವರ್ಸ್!

ಕೆಲ ದಿನಗಳ ಹಿಂದೆ ಆರಂಭವಾದ ಈ ಕಾಕ್ರೋಚ್ ಜನತಾ ಪಾರ್ಟಿ ಇನ್ಸ್ಟಾಗ್ರಾಮ್‌ನಲ್ಲಿ ದಿನಕ್ಕೊಂದು ದಾಖಲೆ ಬರೆಯುತ್ತಿದೆ. ಕೇವಲ ಐದು ದಿನಗಳಲ್ಲಿ ಈ ಪೇಜ್ ಬರೋಬ್ಬರಿ 15 ಮಿಲಿಯನ್ (1.5 ಕೋಟಿ) ಫಾಲೋವರ್ಸ್ ಹೊಂದುವ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಆಡಳಿತಾರೂಢ ಬಿಜೆಪಿಯನ್ನೇ ಹಿಂದಿಕ್ಕಿ ಮುನ್ನುಗ್ಗಿದೆ.
ಯುವಕರು ಇದನ್ನು ವ್ಯವಸ್ಥೆ ವಿರುದ್ಧದ ಕೋಪ ಅಥವಾ ಹೊಸ ರಾಜಕೀಯ ಪರ್ಯಾಯ ಎಂದು ಕರೆಯುತ್ತಾ ಭರ್ಜರಿ ಬೆಂಬಲ ನೀಡುತ್ತಿದ್ದಾರೆ. ಈ ಪಕ್ಷದ ಕ್ರೇಜ್ ನೋಡಿ ಇತ್ತೀಚೆಗಷ್ಟೇ ಇದರ ಎಕ್ಸ್ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ಬ್ಯಾನ್ ಕೂಡ ಮಾಡಲಾಗಿತ್ತು. ಆದರೆ, ಈಗ ಸಿಕ್ಕಿರುವ ಹೊಸ ಅಪ್ಡೇಟ್ ಇಡೀ ಕಥೆಯನ್ನು ಬದಲಿಸಿದೆ.

ಕಾಕ್ರೋಚ್ ಪಾರ್ಟಿ ಅಲ್ಲ, ಪಾಕಿಸ್ತಾನ್ ಪಾರ್ಟಿ!

ದೆಹಲಿಯ ಬಿಜೆಪಿ ನಾಯಕರೊಬ್ಬರು ಈ ಕಾಕ್ರೋಚ್ ಜನತಾ ಪಾರ್ಟಿಯ ಇನ್‌ಸ್ಟಾಗ್ರಾಮ್ ಖಾತೆಯ ಇನ್‌ಸೈಟ್ ಡೇಟಾ (Insight Data) ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಜಿರಲೆ ಪಕ್ಷದ ಅಸಲಿ ಫಾಲೋವರ್ಸ್ ಯಾರು ಎಂದು ತೋರಿಸುವ ಪೈ ಚಾರ್ಟ್ (Pie Chart) ಇದಾಗಿದೆ. ಇದನ್ನು ಶೇರ್ ಮಾಡಿರುವ ಬಿಜೆಪಿ ನಾಯಕ, ಇದು ಕಾಕ್ರೋಚ್ ಜನತಾ ಪಾರ್ಟಿ ಅಲ್ಲ, ಪಾಕಿಸ್ತಾನ್ ಜನತಾ ಪಾರ್ಟಿ! ಎಂದು ವಾಗ್ದಾಳಿ ನಡೆಸಿದ್ದಾರೆ.
ವೈರಲ್ ಆದ ಇನ್‌ಸೈಟ್ ರಿಪೋರ್ಟ್‌ನಲ್ಲೇನಿದೆ?
ಬಿಡುಗಡೆಯಾಗಿರುವ ಡೇಟಾ ಪ್ರಕಾರ, ಈ ಕಾಕ್ರೋಚ್ ಪಾರ್ಟಿಯನ್ನು ಫಾಲೋ ಮಾಡುತ್ತಿರುವವರಲ್ಲಿ ಭಾರತೀಯರಿಗಿಂತ ಪಾಕಿಸ್ತಾನಿಗಳೇ ಹೆಚ್ಚಾಗಿದ್ದಾರೆ. ಕಾಕ್ರೋಚ್​ ಪಕ್ಷವನ್ನು ಫಾಲೋ ಮಾಡುತ್ತಿರುವವರಲ್ಲಿ ಶೇ. 49 ರಷ್ಟು ಜನ ಪಾಕಿಸ್ತಾನದವರಾಗಿದ್ದು, ನಂತರದ ಸ್ಥಾನದಲ್ಲಿ ಅಮೆರಿಕ (ಶೇ. 14), ಬಾಂಗ್ಲಾದೇಶ (ಶೇ. 14), ಭಾರತ (ಶೇ. 9) ಹಾಗೂ ಯುಕೆ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ ತಲಾ ಶೇ. 3 ರಷ್ಟು ಹಿಂಬಾಲಕತರನ್ನು ಹೊಂದಿದೆ. ಅಂದರೆ, ಭಾರತದಲ್ಲಿ ಟ್ರೆಂಡ್ ಆಗುತ್ತಿರುವ ಈ ಪೇಜ್‌ಗೆ ಶೇಕಡಾ 90 ರಷ್ಟು ಫಾಲೋವರ್ಸ್ ವಿದೇಶಗಳಿಂದ, ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನದಿಂದ ಬಂದಿದ್ದಾರೆ ಎಂಬ ಮಾಹಿತಿ ಈಗ ಜಗಜ್ಜಾಹಿರಾಗಿದೆ.

ನೆಟ್ಟಿಗರ ಚರ್ಚೆ ಮತ್ತು ಗೊಂದಲ!

ಈ ಇನ್‌ಸೈಟ್ ರಿಪೋರ್ಟ್ ಹೊರಬೀಳುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಜನ ತರಹೇವಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಭಾರತದ ಸಿಸ್ಟಮ್ ಅನ್ನು ಟ್ರೋಲ್ ಮಾಡಲು ಪಾಕಿಸ್ತಾನದ ಬಾಟ್‌ಗಳು (Bots) ಮತ್ತು ಫೇಕ್ ಅಕೌಂಟ್‌ಗಳನ್ನು ಬಳಸಿ ಈ ಪೇಜ್‌ನ ಫಾಲೋವರ್ಸ್ ಹೆಚ್ಚಿಸಲಾಗಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಕೆಲವರು ಇದೊಂದು ಜೋಕ್ ಪೇಜ್ ಅಷ್ಟೇ, ಇದಕ್ಕೆ ಪಾಕಿಸ್ತಾನದ ಲಿಂಕ್ ಕೊಡುವುದು ತಪ್ಪು ಎಂದು ವಾದಿಸುತ್ತಿದ್ದಾರೆ. ಒಟ್ಟಿನಲ್ಲಿ, ಕೇವಲ ಕಸ ಆಯ್ದು, ಪ್ರನಾಳಿಕೆ ಬಿಟ್ಟು ಮಜಾ ಮಾಡುತ್ತಿದ್ದ 'ಜಿರಲೆ ಪಡೆ' ಈಗ ದೇಶದ ದೊಡ್ಡ ರಾಜಕೀಯ ವಿವಾದವಾಗಿ ಮಾರ್ಪಡುತ್ತಿರುವುದಂತೂ ನಿಜವಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net