ಸೋಷಿಯಲ್​ ಮೀಡಿಯಾನಲ್ಲಿ 'ಜಿರಳೆ'ಗೆ ಮೂಗುದಾರ: ಕಾಕ್ರೋಚ್​ ಪಾರ್ಟಿ ಅಕೌಂಟ್ ಬ್ಯಾನ್! Cockroach Janata Party

ಕಾಕ್ರೋಚ್​ ಜನತಾ ಪಾರ್ಟಿ ಸೋಷಿಯಲ್​ ಮೀಡಿಯಾ ಖಾತೆ ತಡೆಹಿಡಿಕೆ
ಕಾಕ್ರೋಚ್​ ಜನತಾ ಪಾರ್ಟಿ ಸೋಷಿಯಲ್​ ಮೀಡಿಯಾ ಖಾತೆ ತಡೆಹಿಡಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಕಾಕ್ರೋಚ್​ ಜನತಾ ಪಾರ್ಟಿ ಸೋಷಿಯಲ್​ ಮೀಡಿಯಾ ಖಾತೆ ತಡೆಹಿಡಿಕೆ
  • ಇದು ನನಗೆ ಮೊದಲೇ ತಿಳಿದಿತ್ತು ಎಂದ ಪಕ್ಷದ ಸ್ಥಾಪಕ ಅಭಿಜಿತ್​ ದೀಪ್ಕೆ
  • ಬಿಜೆಪಯನ್ನು ಹಿಂದಿಕ್ಕಿದ್ದ ಸಿಜೆಪಿಯ ಸೋಷಿಯಲ್​ ಮೀಡಿಯಾ ಅಕೌಂಟ್​
ವೈರಲ್​: ಸದ್ಯ ಭಾರತದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಪಾರ್ಟಿ ಎಂದರೆ, ಅದು ಕಾಕ್ರೋಚ್​ ಜನತಾ ಪಾರ್ಟಿ (Cockroach Janata Party). ಸೋಷಿಯಲ್ ಮೀಡಿಯಾನಲ್ಲಿ ಪ್ರಾರಂಭವಾಗಿರುವ ಈ ಪಕ್ಷದ ಎಕ್ಸ್​ (ಟ್ವಿಟರ್​) ಖಾತೆಯನ್ನು ತಡೆಹಿಡಿಯಲಾಗಿದೆ ಎಂದು ಪಕ್ಷದ ಸ್ಥಾಪಕ ಅಭಿಜಿತ್ ದೀಪ್ಕೆ ತಿಳಿಸಿದ್ದಾರೆ.
ನನಗೆ ಮೊದಲೇ ತಿಳಿದಿರುವಂತೆ ನಮ್ಮ ಕಾಕ್ರೋಚ್​ ಜನತಾ ಪಾರ್ಟಿಯ ಸೋಷಿಯಲ್​ ಮೀಡಿಯಾ (ಟ್ವಿಟರ್​) ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ ಎಂದು ಅಭಿಜಿತ್ ದೀಪ್ಕೆ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ತಡೆಹಿಡಿಯುವಿಕೆಗೆ ನಿಖರ ಕಾರಣ ಏನೆಂದು ಇಲ್ಲಿವರೆಗೆ ತಿಳಿದುಬಂದಿಲ್ಲ.

ಏನು ಈ ಕಾಕ್ರೋಚ್​ ಜನತಾ ಪಾರ್ಟಿ?

ಕೆಲ ದಿನಗಳ ಹಿಂದೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಜ. ಸೂರ್ಯಾಕಾಂತ್​ ಅವರು ಭಾರತದ ನಿರುದ್ಯೋಗಿ ಯುವಕರನ್ನು ಜಿರಲೆ(ಕಾಕ್ರೋಚ್​) ಗಳಿಗೆ ಹೋಲಿಕೆ ಮಾಡಿದ ನಂತರ, ಆಮ್​ ಆದ್ಮಿ ಪಕ್ಷದ ಕಾರ್ಯಕರ್ತನೆಂದು ಗುರುತಿಸಿಕೊಂಡಿದ್ದ, ಅಭಿಜಿತ್ ದಿಪ್ಕೆ ಈ ಕಾಕ್ರೋಚ್​ ಜನತಾ ಪಾರ್ಟಿಯನ್ನು ಸೋಷಿಯಲ್​ ಮೀಡಿಯಾನಲ್ಲಿ ಸ್ಥಾಪಿಸಿದರು. ಈ ಜಿರಲೆ ಪಕ್ಷವು ತನ್ನನ್ನು ತಾನು, ಜಾತ್ಯತೀತ, ಸಮಾಜವಾದಿ, ಪ್ರಜಾಪ್ರಭುತ್ವ, ಸೋಮಾರಿ ತತ್ವಗಳನ್ನು ಪಾಲಿಸುವ ಪಕ್ಷವೆಂದು ಹೇಳಿಕೊಂಡಿದೆ.

BJP ಯನ್ನು ಹಿಂದಿಕ್ಕಿದ CJP

ಸೋಷಿಯಲ್​ ಮೀಡಿಯಾನಲ್ಲಿ ಈ ಕಾಕ್ರೋಚ್​ ಜನತಾ ಪಾರ್ಟಿಗೆ ವ್ಯಾಪಕ ಬೆಂಬಲ ದೊರೆಯುತ್ತಿದ್ದು, ಪಕ್ಷ ಪ್ರಾರಂಭವಾದ ನಾಲ್ಕೇ ದಿನಗಳಲ್ಲಿ ಇದು ಸುಮಾರು 1.23 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ 87 ಲಕ್ಷ ಹಿಂಬಾಲಕರನ್ನು ಹೊಂದಿರುವ ಬಿಜೆಪಿ ಪಕ್ಷವನ್ನು ಹಿಂದಿಕ್ಕಿದೆ. ಈ ರೇಸ್​ನಲ್ಲಿ 1.33 ಕೋಟಿ ಹಿಂಬಾಲಕರನ್ನು ಹೊಂದಿರುವ ಕಾಂಗ್ರೆಸ್​ ಪಾರ್ಟಿ ಮೊದಲ ಸ್ಥಾನದಲ್ಲಿದೆ.

ಕಾಕ್ರೋಚ್​ ಪಕ್ಷದ ಕ್ರೇಜಿ ಪ್ರನಾಳಿಕೆ!

ಈ CJP ಪಕ್ಷದ ಪ್ರನಾಳಿಕೆ ಕೇಳಿದ ಒಂದಿಷ್ಟು ಜನ ನಗುತ್ತಿದ್ದರೆ ಇನ್ನಷ್ಟು ಜನ ಈ ಸೋಷಿಯಲ್​ ಮೀಡಿಯಾ ಕ್ರಾಂತಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ಯಾವುದೇ ರಾಜ್ಯಸಭಾ ಸೀಟುಗಳನ್ನು ನೀಡಬಾರದು. ಸಂಸತ್ತಿನ ಒಟ್ಟು ಸ್ಥಾನವನ್ನು ಹೆಚ್ಚಿಸದೆಯೇ ಮಹಿಳೆಯರಿಗೆ ಶೇ. 50 ರಷ್ಟು ಕಡ್ಡಾಯ ಮೀಸಲಾತಿ ಕೊಡಬೇಕು. ಪಕ್ಷಾಂತರ ಮಾಡುವ ಎಂಎಲ್‌ಎ ಮತ್ತು ಎಂಪಿಗಳಿಗೆ 20 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಬ್ಯಾನ್ ಮಾಡಬೇಕು. ಇದು ಈ ಪಕ್ಷದ ಪ್ರನಾಳಿಕೆಯಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net