ಕಲ್ಲಿದ್ದಿಲು ಗಣಿ ಕುಸಿತ; ಅವಶೇಷಗಳಡಿ ಸಿಲುಕಿ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವು, ಇಬ್ಬರ ರಕ್ಷಣೆ | Coal mine collapse

ಘಟನೆಯ ಸ್ಥಳ
ಘಟನೆಯ ಸ್ಥಳ
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಅಸನ್ಸೋಲ್​ನಲ್ಲಿ ಮಂಗಳವಾರ(ಜ. 13) ಕಲ್ಲಿದ್ದಿಲು ಗಣಿ ಕುಸಿದಿದ್ದು, ಐವರು ಅವಶೇಷಗಳಡಿ ಸಿಲುಕಿದ್ದಾರೆ. ಅದರಲ್ಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರೇ, ಇಬ್ಬರನ್ನು ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ಶಾಸಕ ಅಜಯ್ ಪೊದ್ದಾರ್, ಮಂಗಳವಾರ ಬೆಳಿಗ್ಗೆ 7.45 ರ ಸುಮಾರಿಗೆ ಗಣಿ ಕುಸಿತದಿಂದಾಗಿ ಐದು ಜನರು ಅವಶೇಷಗಳಡಿ ಸಿಲುಕಿಕೊಂಡರು. ಐವರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. ಗಣಿ ಕುಸಿತ ಸಂಭವಿಸಿದಾಗ ವ್ಯಕ್ತಿಗಳು ಇಳಿಜಾರು ಗುಂಡಿಯಿಂದ ಕಲ್ಲಿದ್ದಲು ಹೊರತೆಗೆಯುತ್ತಿದ್ದರು ಎಂದು ತಿಳಿಸಿದ್ದಾರೆ. 
ಪೊಲೀಸರು, ಕಲ್ಲಿದ್ದಿಲು ಮಾಫಿಯಾ ನಡುವೆ ಸಂಬಂಧವಿದ್ದು, ಇಂತಹ ಘಟನೆಗಳು ಪಶ್ಚಿಮ ಬಂಗಾಳದಾದ್ಯಂತ ವ್ಯಾಪಕವಾಗಿ ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ. 

ತೃಣಮೂಲ ಕಾಂಗ್ರೆಸ್ ಕಿಡಿ

ಗಣಿ ಕುಸಿತ ಘಟನೆಗೆ ಸಂಬಂಧಿಸಿದಂತೆ ಬಂಗಾಳದ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಅಸನ್ಸೋಲ್‌ನ ಬೋರ್ಡಿಲಾ ಪ್ರದೇಶದಲ್ಲಿ ಬಿಸಿಸಿಎಲ್​ ನಿರ್ವಹಿಸುತ್ತಿದ್ದ ಕಲ್ಲಿದ್ದಿಲು ಗಣಿ ಕುಸಿದು, ಹಲವರು ಅವಶೇಷಗಳಡಿ ಸಿಲುಕಿದ್ದಾರೆ. 
ಬಿಸಿಸಿಎಲ್ ಕಲ್ಲಿದ್ದಿಲು ಸಚಿವಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೇಂದ್ರ ಸರ್ಕಾರದ ಕಣ್ಗಾವಲಿನಲ್ಲಿ ನಡೆದ ಇಂತಹ ದುರಂತದ ಸುರಕ್ಷತಾ ವೈಫಲ್ಯ ಯಾರು ಕಾರಣ?, ಬಂಗಾಳದ ಜನರ ಜೀವನದ ನಿರ್ಲಕ್ಷ್ಯಕ್ಕೆ ಹೊಣೆಗಾರರು ಯಾರು?, ಮೋದಿ ತೆಗದುಕೊಳ್ಳುತ್ತಾರೆಯೇ ಅಥವಾ ಸಚಿವರಾದ ಕಿಶನ್ ರೆಡ್ಡಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ ಎಂದು ವಾಗ್ದಾಳಿ ನಡೆಸಿದೆ. 
ಕಾಲ್ತುಳಿತದಿಂದ ಸುರಂಗ ಕುಸಿತದವರೆಗೆ, ಭಯೋತ್ಪಾದಕ ದಾಳಿಯಿಂದ ಬಾಂಬ್ ಸ್ಫೋಟದವರೆಗೆ, ಬಿಜೆಪಿ ಹೋದಲ್ಲೆಲ್ಲಾ ದುರಂತ ಸಂಭವಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net