ಶ್ರೀನಗರ: ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಉದ್ದಕ್ಕೂ ಪಾಕಿಸ್ತಾನ ಡ್ರೋನ್ಗಳು ಗಡಿ ದಾಟಿ ಭಾರತದ ಭೂ ಪ್ರದೇಶಕ್ಕೆ ಪ್ರವೇಶಿಸಿದ್ದು, ಅವುಗಳನ್ನು ಸಂಜೆ ಯಶಸ್ವಿಯಾಗಿ ಭಾರತದ ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಬುಧವಾರ(ಜ. 14) ವರದಿಯಾಗಿದೆ.
ಮಂಗಳವಾರ ಸಂಜೆ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಹಿಂತಿರುಗುವ ಮೊದಲು ಮಂಜಕೋಟ್ ವಲಯದಲ್ಲಿ ಸ್ವಲ್ಪ ಸಮಯ ಸುಳಿದಾಡಿದವು ಎನ್ನಲಾಗಿದೆ. ಕಳೆದ ಮೂರು ದಿನಗಳಲ್ಲಿ ರಾಜೌರಿಯಲ್ಲಿ ಇದು ಎರಡನೇ ಘಟನೆಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸೇನಾಧಿಕಾರಿಗಳು, ಜಮ್ಮು ಮತ್ತು ಕಾಶ್ಮೀರದ ಎಲ್ಒಸಿಯಲ್ಲಿ ಡ್ರೋನ್ಗಳು ಪತ್ತೆಯಾದ ನಂತರ ಭಾರತೀಯ ಸೇನೆಯು ಪ್ರತಿ-ಮಾನವರಹಿತ ವೈಮಾನಿಕ ವ್ಯವಸ್ಥೆ (ಯುಎಎಸ್) ಕ್ರಮಗಳನ್ನು ಕೈಗೊಂಡಿದೆ. ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ರಾಜೌರಿಯ ಚಿಂಗಸ್ ಪ್ರದೇಶದ ದುಂಗಾ ಗಾಲಾ ಮೇಲೆ ಭಾರತೀಯ ಪ್ರದೇಶಕ್ಕೆ ಪ್ರವೇಶಿಸಿದಾಗ ಕೆಲವು ಪಾಕಿಸ್ತಾನಿ ಡ್ರೋನ್ಗಳ ಮೇಲೆ ಪಡೆಗಳು ಗುಂಡು ಹಾರಿಸಿದವು. ಬಳಿಕ ಕೆಲವು ಕಣ್ಮರೆಯಾದವು ಎಂದು ತಿಳಿಸಿದ್ದಾರೆ.
ಆದಾಗ್ಯೂ, ಶಂಕಿತ ಡ್ರೋನ್ಗಳು ಹಿಂತಿರುಗುವ ಮೊದಲು ಕಲಾಲಿಯ ಕಡೆಗೆ ಸಾಗಿದ್ದು, ಡ್ರೋನ್ಗಳು ಯಾವುದೇ ಶಸ್ತ್ರಾಸ್ತ್ರಗಳು ಅಥವಾ ಮಾದಕ ದ್ರವ್ಯಗಳನ್ನು ಗಾಳಿಯಲ್ಲಿ ಬೀಳಿಸಿಲ್ಲ ಎಂದು ಖಚಿತಪಡಿಸಿಕೊಳ್ಳಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).