ಪ್ರತಿಭಟನಾಕಾರರನ್ನು ಗಲ್ಲಿಗೇರಿಸಿದ್ರೆ ದೊಡ್ಡಮಟ್ಟದ ಕ್ರಮ ಎದುರಿಸಬೇಕಾಗುತ್ತೆ: ಇರಾನ್​ಗೆ ಎಚ್ಚರಿಸಿದ ಡೊನಾಲ್ಡ್ ಟ್ರಂಪ್ | Donald Trump

ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on
ವಾಷಿಂಗ್ಟನ್​: ಇರಾನ್​ನಲ್ಲಿ ಇಸ್ಲಾಮಿಕ್ ಆಡಳಿತದ ವಿರುದ್ಧ ನಡೆಸುತ್ತಿರುವ ಪ್ರತಿಭಟನಾಕಾರರಿಗೆ ಗಲ್ಲಿಗೇರಿಸುವ, ಹಾಕುವುದಾಗಿ ಬೆದರಿಕೆ ಹಾಕಿದ್ರೆ ಅಮೆರಿಕಾ ದೊಡ್ಡ ಮಟ್ಟದಲ್ಲಿ ಕ್ರಮಕೈಗೊಳ್ಳಲಿದೆ ಎಂದು ಮಂಗಳವಾ(ಜ. 13) ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ಎರಡೂ ವಾರಗಳಿಂದ ನಡೆದಿರುವ ಭಾರಿ ಪ್ರತಿಭಟನೆಯಲ್ಲಿ 2 ಸಾವಿರಕ್ಕೂ ಅಧಿಕ ಜನರನ್ನು ಕೊಲ್ಲಲಾಗಿದೆ ಎಂಬ ರಾಯಿಟರ್ಸ್ ವರದಿ ಮಾಡಿದ್ದು, ಪ್ರತಿಭಟನಾಕಾರರನ್ನು ಹತ್ತಿಕ್ಕಲು ಇರಾನ್ ಅಧಿಕಾರಿಗಳು ಇತ್ತೀಚೆಗೆ ಪ್ರತಿಭಟನೆಯಲ್ಲಿ ಬಂಧಿಸಲ್ಪಟ್ಟ ಹೋರಾಟಗಾರರ ಮೇಲೆ ಮೊಹರೆಬೆಹ್ ಅಥವಾ ದೇವರ ವಿರುದ್ಧ ಯುದ್ಧ ಸಾರುವುದು ಎಂಬ ಮರಣದಂಡನೆ ಆರೋಪಗಳನ್ನು ಹೇರಿ ಗಲ್ಲಿಗೇರಿಸುವ ಬೆದರಿಕೆಗಳನ್ನು ಹಾಕಿದ್ದಾರೆ ಎನ್ನಲಾಗಿದೆ.
ಈ ಕುರಿತು ಸಿಬಿಎಸ್ ನ್ಯೂಸ್‌ ಜೊತೆ ಮಾತನಾಡಿರುವ ಟ್ರಂಪ್, ಈಗಾಗಲೇ ಅಲ್ಲಿ ಸಾವಿರಾರು ಜನರನ್ನು ಕೊಲ್ಲಲಾಗಿದೆ. ಹೀಗೆ ಇರಾನ್ ಹೋರಾಟಗಾರರನ್ನು ಗಲ್ಲಿಗೇರಿಸಲು ಪ್ರಾರಂಭಿಸಿದರೆ ಅಮೆರಿಕ ಕ್ರಮ ಕೈಗೊಳ್ಳುತ್ತದೆ. ಅವರು ಅಂತಹ ಕೆಲಸ ಮಾಡಿದರೆ ನಾವು ಬಲವಾದ ಮಿಲಿಟರಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇರಾನ್​ನಿಂದ ಸಾಮಾಜಿಕ ಮಾಧ್ಯಮದಲ್ಲಿ ಹೊಸ ವೀಡಿಯೊಗಳು ಬಿಡುಗಡೆಗೊಂಡಿದ್ದು, ಅವುಗಳ ಸ್ಥಳವನ್ನು AFP ಪರಿಶೀಲಿಸಿದೆ, ಇರಾನಿನ ರಾಜಧಾನಿಯ ದಕ್ಷಿಣಕ್ಕೆ ಕಹ್ರಿಜಾಕ್ ಶವಾಗಾರದಲ್ಲಿ ಶವಗಳು ಸಾಲುಗಟ್ಟಿರುವುದನ್ನು, ಕಪ್ಪು ಚೀಲಗಳಲ್ಲಿ ಸುತ್ತಿರುವ, ಸಂಬಂಧಿಕರು ಶವಗಳನ್ನು ಗುರುತಿಸಿ ದುಃಖ ವ್ಯಕ್ತಪಡಿಸುತ್ತಿರುವುದು ದಾಖಲಾಗಿವೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net