ಬಂಗಾಳದಲ್ಲಿ ಬಿಜೆಪಿ ಜತೆ ಸೇರಿ ಚುನಾವಣೆ ಆಯೋಗ 54 ಲಕ್ಷ ನಿಜ ಮತದಾರರನ್ನು ಅಳಿಸಿದೆ: ಮಮತಾ ಬ್ಯಾನರ್ಜಿ ಆರೋಪ | CM Mamata Banerjee

ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ
Published on
ಕೋಲ್ಕತ್ತಾ: ಭಾರತೀಯ ಚುನಾವಣೆ ಆಯೋಗವು ಬಿಜೆಪಿ ಜತೆ ಸೇರಿಕೊಂಡು ಪಶ್ಚಿನ ಬಂಗಾಳದಲ್ಲಿ ನಡೆಸಿರುವ ಎಸ್​ಐಆರ್ ಪ್ರಕ್ರಿಯೆಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ಸುಮಾರು 54 ಲಕ್ಷ ನಿಜವಾದ ಮತದಾರರನ್ನು ಅಳಿಸಿದೆ ಎಂದು ಟಿಎಂಸಿ ಮುಖ್ಯಸ್ಥೆ ಮತ್ತು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಮಂಗಳವಾರ(ಜ. 13) ಸಚಿವಾಲಯ ನಬನ್ನಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲಿ ಆಯೋಗ ಏಕಪಕ್ಷೀಯವಾಗಿ  54 ಲಕ್ಷ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ಅಳಿಸಿದೆ. ಹಾಗೆ ಪಟ್ಟಿಯಿಂದ ಡಿಲೀಟ್ ಆದವರು ಹೆಚ್ಚಿನವರು ನಿಜವಾದ ಮತದಾರರು ಎಂದು ಹೇಳಿದ್ದಾರೆ.
ಬಿಜೆಪಿ ರೂಪಿಸಿದ AI ಪರಿಕರಗಳನ್ನು ಬಳಸಿಕೊಂಡು ಸಾಫ್ಟ್‌ವೇರ್‌ ಮೂಲ SIR ಡೇಟಾದಲ್ಲಿನ ಹೆಸರುಗಳನ್ನು ಅಳಿಸಿ ಹಾಕಿದೆ. ಮದುವೆಯ ನಂತರ ಉಪನಾಮಗಳನ್ನು ಬದಲಾಯಿಸಿದ ಮಹಿಳೆಯರ ಹೆಸರುಗಳನ್ನು ಅವರು ಅಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. 
ಬಿಜೆಪಿ ಜೊತೆಗೆ ಶಾಮೀಲಾಗಿರು ಆಯೋಗ ಕೇವಲ 54 ಲಕ್ಷ ಹೆಸರು ಅಷ್ಟೇ ಅಲ್ಲದೇ, ಒಂದು ಹೆಸರುಗಳನ್ನು ಡಿಲಿಟ್ ಮಾಡಲು ಯೋಜಿಸುತ್ತಿದೆ. ಪರಿಶೀಲನೆ ಕಾರ್ಯದ ಸಮಯದಲ್ಲಿ ಮತಗಟ್ಟೆ ಮಟ್ಟದ ಏಜೆಂಟ್‌ಗಳ ಪಾತ್ರವನ್ನು ಚುನಾವಣಾ ಸಂಸ್ಥೆ ನಿರ್ಬಂಧಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಇನ್ನೂ ಸಿಎಂ ಮಮತಾ ಬ್ಯಾನರ್ಜಿ ಅವರ ಆರೋಪಕ್ಕೆ ಸಂಬಂಧಿಸಿದಂತೆ ಆಯೋಗ, ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net