ಸೋಮವಾರ ಈ ಕುರಿತು ಮಾತನಾಡಿದ್ದ ಸಿಎಂ ಫಡ್ನವೀಸ್, ದಿವಂಗತ ಅಜಿತ್ ಪವಾರ್ ಅವರು, ಶರದ್ ಪವಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಬಗ್ಗೆ ನನಗೆ ತಿಳಿದಿಲ್ಲ. ನಮಗೆ ತಿಳಿಸದೇ ವಿಲೀನ ಮಾತುಕತೆಗಳನ್ನು ಅಂತಿಮಗೊಳಿಸಬಹುದೇ?, ಎನ್‌ಸಿಪಿ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವತಂತ್ರ ಪಕ್ಷವಾಗಿದೆ. ಆದರೆ ಬಿಜೆಪಿಯ ಮಿತ್ರಪಕ್ಷವಾಗಿ, ಮುಂದುವರಿಯುವ ಮೊದಲು ಪಕ್ಷದೊಂದಿಗೆ ಸಮಾಲೋಚಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.