ಜಾರ್ಖಂಡ್ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಸಿಜೆಪಿ; ನಾವು ಅಲ್ಲಿ ಭಾಗವಹಿಸುತ್ತೇವೆ: ಅಭಿಜಿತ್ ದೀಪ್ಕೆ | Abhijit Deepke

ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ಮತ್ತು ಅವರ ಸಂಗಡಿಗರು.
ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ಮತ್ತು ಅವರ ಸಂಗಡಿಗರು.
Published on
ಮುಂಬೈ: ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ ಮತ್ತು ಇತರ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಆಕಾಂಕ್ಷಿಗಳಿಗೆ ಬುಧವಾರ(ಆ. 05) ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಬೆಂಬಲ ಘೋಷಿಸಿದ್ದು, ಅಲ್ಲಿನ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ ಎಂದು ಸ್ಥಾಪಕ ಅಭಿಜಿತ್ ದೀಪ್ಕೆ (Abhijit Deepke) ಹೇಳಿದ್ದಾರೆ.
ಈ ಕುರಿತು ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ಮಾತನಾಡಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಖಂಡಿತ, ನಾವು ಜಾರ್ಖಂಡ್‌ಗೆ ಹೋಗುತ್ತೇವೆ. ಅಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಜೊತೆ ನಾವು ನಿಲ್ಲುತ್ತೇವೆ. ಅವರ ಪ್ರತಿಯೊಂದು ಬೇಡಿಕೆಯನ್ನು ನಾವು ಬೆಂಬಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸಿಜೆಪಿಯ ಮುಂದಿನ ದಿನಗಳ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸದ್ಯ ಸಿಜೆಪಿ ಒಂದು ವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸುವ ಸಂಘಟನೆಯಾಗಿರುತ್ತದೆ. ನಾವು ಯಾವುದೇ ಚುನಾವಣಾ ರಾಜಕಾರಣಕ್ಕೆ ಸೇರಲ್ಲ. ಯಾಕಂದರೆ ಈಗ ಭಾರತಕ್ಕೆ ಬೇಕಾಗಿರುವುದು ಒತ್ತಡ ಹೇರುವ ಸಾಮಾಜಿಕ ಚಳುವಳಿ ಎಂದು ಪ್ರತಿಪಾದಿಸಿದ್ದಾರೆ.
ಇನ್ನೂ ನಮ್ಮ ಚಳುವಳಿ ಯಶಸ್ವಿಯಾಗಲು ಕಾರಣ ಜನರು ತಮ್ಮದೇ ಆದ ಸಿದ್ಧಾಂತಗಳು ಮತ್ತು ರಾಜಕೀಯ ಪಕ್ಷಗಳ ರೇಖೆಗಳನ್ನು ಮೀರಿ ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿರುವ ವಿಷಯಗಳ ವಿರುದ್ಧ ಒಗ್ಗೂಡಿದರು. ಇಂದು ಭಾರತಕ್ಕೆ ಬೇಕಾಗಿರುವುದು ಸಾರ್ವಜನಿಕ ಚಳುವಳಿ ಹಾಗಾಗಿ ನಮ್ಮದು ಸಾಮಾಜಿಕ ಸಂಘಟನೆಯಾಗಿರುತ್ತದೆ ಎಂದಿದ್ದಾರೆ.
ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (ಜೆಪಿಎಸ್‌ಸಿ) ಮತ್ತು ಇತರ ನೇಮಕಾತಿ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳ ಬಗ್ಗೆ ರಾಜ್ಯದ ಹೊರಗಿನ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಸಾವಿರಾರು ಉದ್ಯೋಗದ ಆಕಾಂಕ್ಷಿಗಳು ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net