ಭಾರತದಲ್ಲಿ ಎಫ್‌ಸಿಆರ್‌ಎ ಕಾಯ್ದೆ ತಿದ್ದುಪಡಿ; ಕ್ರೈಸ್ತ ಸಮುದಾಯದ ಮೇಲಿನ ಸ್ಪಷ್ಟ ದಾಳಿ ಎಂದ ಅಮೆರಿಕದ ರಿಪಬ್ಲಿಕನ್ ಸಂಸದ | FCRA Act

ರಿಪಬ್ಲಿಕನ್ ಕಾಂಗ್ರೆಸ್ಸಿಗ ರೈಲಿ ಮೂರ್
ರಿಪಬ್ಲಿಕನ್ ಕಾಂಗ್ರೆಸ್ಸಿಗ ರೈಲಿ ಮೂರ್
Published on
ವಾಷಿಂಗ್ಟನ್: ಎನ್‌ಜಿಒ, ಟ್ರಸ್ಟ್‌, ಶಿಕ್ಷಣ ಸಂಸ್ಥೆ ಹಾಗೂ ಧಾರ್ಮಿಕ ಸಂಸ್ಥೆಗಳು ಪಡೆಯುವ ವಿದೇಶಿ ದೇಣಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ತರಲು ಹೊರಟಿರುವ ಎಫ್‌ಸಿಆರ್‌ಎ ಕಾಯ್ದೆ ತಿದ್ದುಪಡಿ(FCRA Act) ಮಸೂದೆಯನ್ನು, ಇದು ಭಾರತದಲ್ಲಿ ಕ್ರೈಸ್ತರ ಮೇಲಿನ ಸ್ಪಷ್ಟ ದಾಳಿ ಎಂದು ಅಮೆರಿಕದ ಪಶ್ಚಿಮ ವರ್ಜೀನಿಯಾದ ರಿಪಬ್ಲಿಕನ್ ಕಾಂಗ್ರೆಸ್ಸಿಗ ರೈಲಿ ಮೂರ್ ಹೇಳಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ಪ್ರಭು ಯೇಸುಕ್ರಿಸ್ತನ ಪುನರುತ್ಥಾನದ ಕೆಲವೇ ದಶಕಗಳ ನಂತರ ಅಪೊಸ್ತಲ ಸಂತ ಥಾಮಸ್ ಮಲಬಾರ್ ಕರಾವಳಿಗೆ ಪ್ರಯಾಣ ಬೆಳೆಸಿದಾಗಿನಿಂದಲೂ ಭಾರತದಲ್ಲಿ ಕ್ರೈಸ್ತರಿದ್ದಾರೆ.
ಇಷ್ಟು ದೀರ್ಘ ಕ್ರಿಶ್ಚಿಯನ್ ಇತಿಹಾಸದ ಹೊರತಾಗಿಯೂ, ಚರ್ಚ್‌ಗಳು ಮತ್ತು ಧಾರ್ಮಿಕ ದತ್ತಿಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಅನುಮತಿ ನೀಡಲು ಭಾರತದ ಸಂಸತ್ತು ವಿದೇಶಿ ಕೊಡುಗೆ ನಿಯಂತ್ರಣ ತಿದ್ದುಪಡಿ (ಎಫ್‌ಸಿಆರ್‌ಎ) ನಿಯಮಗಳನ್ನು ತಿದ್ದುಪಡಿ ತರಲು ಮುಂದಾಗಿದೆ.
ಇದು ಕ್ರೈಸ್ತರ ಮೇಲಿನ ಸ್ಪಷ್ಟವಾದ ದಾಳಿಯಾಗಿದೆ. ಈ ಮಸೂದೆಯು ಇದೇ ರೀತಿಯಲ್ಲಿ ಮುಂದುವರಿದರೆ, ಅದು ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು ಎಂದು ಬೆದರಿಕೆ ಹಾಕಿದ್ದಾರೆ.

ಹೊಸ FCRA ತಿದ್ದುಪಡಿ ಪ್ರಸ್ತಾವನೆ ಏನು?

ಈ ಅಧಿವೇಶನದಲ್ಲಿ ಕೇಂದ್ರ ಸರ್ಕಾರ, ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ-2026 ಅನ್ನು ಮಂಡಿಸಲು ಮುಂದಾಗಿದೆ. ಯಾವುದೇ ಸಂಸ್ಥೆಯು FCRA ನೋಂದಣಿ ರದ್ದಾದರೆ, ಸ್ವಯಂ ರದ್ದುಗೊಳಿಸಿದರೆ ಅಥವಾ ಅವಧಿ ಮುಗಿದರೆ, ವಿದೇಶಿ ಅನುದಾನದಿಂದ ಖರೀದಿಸಿದ ಆಸ್ತಿಗಳನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆಯಲು ವಿಶೇಷ ಅಧಿಕಾರಿಯನ್ನು ನೇಮಿಸುವ ಅವಕಾಶವನ್ನು ಈ ಮಸೂದೆ ಪ್ರಸ್ತಾಪಿಸುತ್ತದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net