ನ. 20ರಿಂದ ಮೂರು ದಿನಗಳ ಕಾಲ ದೆಹಲಿಯಲ್ಲಿ ನಾಗರಿಕತಾ ಸಂವಾದ ವೇದಿಕೆ ಆಯೋಜನೆ: ಪಾಕ್ ಸಚಿವರಿಗೂ ಆಹ್ವಾನ | Civilizational Dialogue Forum

ನವೆಂಬರ್ 20ರಿಂದ 22ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ(ಎಸ್​ಸಿಓ) ಮೊದಲ 'ನಾಗರಿಕತಾ ಸಂವಾದ ವೇದಿಕೆ'ಯನ್ನು ಭಾರತ ಆಯೋಜಿಸಲಿದ್ದು, ಪಾಕಿಸ್ತಾನದ ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿ ಸಚಿವ ಔರಂಗಜೇಬ್ ಖಾನ್ ಖಿಚಿ ಅವರಿಗೂ ಭಾಗವಹಿಸಲು ಆಹ್ವಾನ ನೀಡಲಾಗಿದೆ ಎಂದು ವರದಿಯಾಗಿದೆ.
ನ. 20ರಿಂದ ಮೂರು ದಿನಗಳ ಕಾಲ ದೆಹಲಿಯಲ್ಲಿ ನಾಗರಿಕತಾ ಸಂವಾದ ವೇದಿಕೆ ಆಯೋಜನೆ: ಪಾಕ್ ಸಚಿವರಿಗೂ ಆಹ್ವಾನ | Civilizational Dialogue Forum
Published on: 

ನವದೆಹಲಿ: ನವೆಂಬರ್ 20ರಿಂದ 22ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ(ಎಸ್​ಸಿಓ) ಮೊದಲ 'ನಾಗರಿಕತಾ ಸಂವಾದ ವೇದಿಕೆ'ಯನ್ನು ಭಾರತ ಆಯೋಜಿಸಲಿದ್ದು, ಪಾಕಿಸ್ತಾನದ ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿ ಸಚಿವ ಔರಂಗಜೇಬ್ ಖಾನ್ ಖಿಚಿ ಅವರಿಗೂ ಭಾಗವಹಿಸಲು ಆಹ್ವಾನ ನೀಡಲಾಗಿದೆ ಎಂದು ವರದಿಯಾಗಿದೆ.

ದೆಹಲಿಯ 16ನೇ ಶತಮಾನದ ಕೋಟೆಯಾದ 'ಪುರಾಣ ಕಿಲಾ'ದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಮತ್ತು 25ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳನ್ನು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಕೇಂದ್ರ ಸಂಸ್ಕೃತಿ ಸಚಿವಾಲಯವು, ವಿದೇಶಾಂಗ ಸಚಿವಾಲಯದೊಂದಿಗೆ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸುತ್ತಿದೆ. 2025ರಲ್ಲಿ ಟಿಯಾಂಜಿನ್‌ನಲ್ಲಿ ನಡೆದ SCO ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವೇದಿಕೆಯನ್ನು ಪ್ರಸ್ತಾಪಿಸಿದ್ದರು. ಬಳಿಕ ಸಂಘಟನೆ ಇದನ್ನು ಅಳವಡಿಸಿಕೊಂಡಿದೆ.

Also Read
ರಾಜೀನಾಮೆ ನೀಡಿ ಎಂಬ ವಿವಾದಾತ್ಮಕ ಪೋಸ್ಟ್; ಕೊನೆಗೂ ಸಿಜೆಐ ಸೂರ್ಯಕಾಂತ್​ರ ಕ್ಷಮೆ ಕೇಳಿದ ಕೇರಳ ಕಾಂಗ್ರೆಸ್ | Kerala Congress
ನ. 20ರಿಂದ ಮೂರು ದಿನಗಳ ಕಾಲ ದೆಹಲಿಯಲ್ಲಿ ನಾಗರಿಕತಾ ಸಂವಾದ ವೇದಿಕೆ ಆಯೋಜನೆ: ಪಾಕ್ ಸಚಿವರಿಗೂ ಆಹ್ವಾನ | Civilizational Dialogue Forum

ರಷ್ಯಾ, ಚೀನಾ, ಯುಎಇ, ಇರಾನ್ ಮತ್ತು ಬೆಲಾರಸ್ ಸೇರಿದಂತೆ ಎಲ್ಲಾ 10 ಸದಸ್ಯ ರಾಷ್ಟ್ರಗಳ ಸಂಸ್ಕೃತಿ ಸಚಿವರನ್ನು ವೀಕ್ಷಕ ಮತ್ತು ಸಂವಾದ ಪಾಲುದಾರ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಆಹ್ವಾನಿಸಲಾಗಿದೆ ಎಂದು ಮೂಲಗಳು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

ಈ ಕಾರ್ಯಕ್ರಮದಲ್ಲಿ ಯಾರು ಭಾಗವಹಿಸುತ್ತಾರೆ ಎಂಬುದನ್ನು ಪಾಕಿಸ್ತಾನ ಇನ್ನೂ ದೃಢಪಡಿಸಿಲ್ಲ. ಖಿಚಿ ಹಾಜರಾದರೆ, 2023ರಲ್ಲಿ ಗೋವಾದಲ್ಲಿ ಬಿಲಾವಲ್ ಭುಟ್ಟೋ ಭಾಗವಹಿಸಿದ್ದ SCO ವಿದೇಶಾಂಗ ಸಚಿವರ ಸಭೆಯ ನಂತರ ಪಾಕಿಸ್ತಾನಿ ಸಚಿವರು ಭಾರತಕ್ಕೆ ನೀಡುವ ಮೊದಲ ಭೇಟಿ ಇದಾಗಲಿದೆ.

ನೆರೆಯ ರಾಷ್ಟ್ರದೊಂದಿಗಿನ ದ್ವಿಪಕ್ಷೀಯ ಸಂಬಂಧಗಳು ಹದಗೆಟ್ಟಿದ್ದರೂ, ಭಾರತವು ಪಾಕಿಸ್ತಾನವನ್ನು ಒಳಗೊಂಡ ಎಸ್​ಸಿಓ ಕಾರ್ಯಗಳಲ್ಲಿ ಭಾಗವಹಿಸುವುದನ್ನು ಮುಂದುವರೆಸಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net